Site icon TUNGATARANGA

ನೈರುತ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಎಸ್.ಪಿ. ದಿನೇಶ್ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ

ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಎಸ್.ಪಿ. ದಿನೇಶ್ ಇಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಬಾರಿ ಈ ಕ್ಷೇತ್ರದಲ್ಲಿ ಅಲ್ಪಮತಗಳ ಅಂತರದಲ್ಲಿ ಪರಾಭವಗೊಂಡಿದ್ದೇನೆ. ಶಿಕ್ಷಕರ ಮತ್ತು ಪದವೀಧರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ.

ಮೂರನೇ ಬಾರಿಗೆ ಬಹುಮತದ ಆಯ್ಕೆ ಪದವೀಧರರಿಂದ ಬಯಸಿದ್ದು, ನಿಮ್ಮ ಆಯ್ಕೆ ವ್ಯರ್ಥವಾಗದಂತೆ ನಿಮ್ಮೆಲ್ಲರ ಸಮಸ್ಯೆಗೆ ಧ್ವನಿಯಾಗಿ ಮೇಲ್ಮನೆಯಲ್ಲಿ ಹೋರಾಟ ಮಾಡುತ್ತೇನೆ. ನ್ಯಾಯ ಒದಗಿಸುತ್ತೇನೆ ಎಂದರು.

ಪದವೀಧರ ಮತದಾರರು ತಪ್ಪದೇ ಮತದಾನ ಮಾಡಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಈಗಾಗಲೇ ಕ್ಷೇತ್ರದಾದ್ಯಂತ ನಾಲ್ಕೈದು ಬಾರಿ ಪ್ರಚಾರ ನಡೆಸಿದ್ದೇನೆ. ಪದವೀಧರ ಮತದಾರರನ್ನು ಭೇಟಿ ಮಾಡಿದ್ದೇನೆ. ಎಲ್ಲೆಡೆಯಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಗೆಲುವಿನ ವಿಶ್ವಾಸದಲ್ಲಿದ್ದೇನೆ ಎಂದರು.

ನನಗೆ ಹಲವಾರು ಪದವೀಧರ ಶಿಕ್ಷಕರು, ವಿವಿಧ ಸಂಘಟನೆಗಳು, ಪದವೀಧರರ ಸಂಘಟನೆಗಳು, ರಾಜ್ಯ ಅತಿಥಿ ಉಪನ್ಯಾಸಕರ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದು, ನನ್ನೊಂದಿಗೆ ಪ್ರಚಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ನನಗೆ ಗೆಲುವಿನ ವಿಶ್ವಾಸ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಪ್ಪ ಆರ್. ಕಲ್ಮನೆ, ರಮೇಶ್ ಬಾರಗಿ, ವಿನೋದ್ ಚಂದ್ ಪೀಟರ್, ಸದಾಶಿವ, ಈಶ್ವರ್, ರುದ್ರೇಶ್ ಮತ್ತಿತರರು ಇದ್ದರು.

Exit mobile version