Site icon TUNGATARANGA

ಶಿವಮೊಗ್ಗ/ ಶಶಿ ಅಣ್ಣ ಅಂದ್ರೆ ಅವರು ಡಿಫರೆಂಟ್, ಕೈಚಾಚದ ಆತ್ಮೀಯ ನಾಯಕ, ಆಶ್ರಯ ಸಮಿತಿಯಲ್ಲೂ ಮುಕ್ತತೆ ತಂದವರು..,

ನಾನು ಪತ್ರಿಕೋದ್ಯಮಕ್ಕೆ ಬರುವ ಮುನ್ನವೇ ಗುರುತಿಸಿದ ಕೆಲವರಲ್ಲಿ ಒಬ್ಬರೆಂದರೆ ಅದರಲ್ಲಿ ಶಶಿಧರ್ ಒಬ್ಬರು.
ಭಾರತೀಯ ಜನತಾ ಪಕ್ಷದ ಕಾಣದ ವ್ಯಕ್ತಿ ಶಶಿಧರ್ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ ಅಕ್ಷರ ಕಂಬನಿಯ ಸಂತಾಪ ನಿಮ್ಮ ತುಂಗಾತರಂಗ ಕಡೆಯಿಂದ.


ಶಿವಮೊಗ್ಗ ಪತ್ರಿಕೋದ್ಯಮ, ರಾಜಕೀಯ, ವಾಣಿಜ್ಯ, ವ್ಯವಹಾರ, ಕಟ್ಟ ಕಡೆಯ ಜನರ ಬದುಕಿನ ನೈಜ ಸ್ಥಿತಿಗಳ ಬಗ್ಗೆ ಸೂಕ್ಷ್ಮ ಅರಿವಿದ್ದ ಶಶಿ ಅಣ್ಣ ನಿಜಕ್ಕೂ ಬಿಜೆಪಿಯಲ್ಲಿ ತಮ್ಮದೇ ಆದ ಅಸ್ತಿತ್ವವನ್ನು ತೊಡಗಿಸಿಕೊಂಡಿದ್ದರು.


ಶಿವಮೊಗ್ಗ ಹೊಸಮನೆ ಏರಿಯಾದಲ್ಲಿ ಮನೆ ಮಾಡಿಕೊಂಡಿದ್ದ ಲಿಂಗಾಯತ ಸಮುದಾಯದ ಶಶಿಧರವರು ಭಾರತೀಯ ಜನತಾ ಪಕ್ಷದಲ್ಲಿ ಸಾಕಷ್ಟು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಆ ಪಕ್ಷ ಕೊನೆಯ ಹಂತ ಬಿಟ್ಟು ಗುರುತಿಸಿಕೊಂಡಿಲ್ಲ.
ಈಶ್ವರಪ್ಪ, ಯಡಿಯೂರಪ್ಪ ಅವರ ಪರಮಾಪ್ತರೂ ಆಗಿದ್ದ ಶಶಿ ಅಣ್ಣ ಅವರು ಎಂದೂ ಅಧಿಕಾರ, ಉದ್ಯೋಗ, ಲಾಭ ಯೋಚಿಸದೆ ಪಕ್ಷನಿಷ್ಠೆಯ ಕೆಲಸ ಮಾಡುತ್ತಾ ಜೊತೆಗೆ ಎಲ್ಲರ ನಡುವೆ ಆತ್ಮೀಯವಾಗಿರುತ್ತಿದ್ದ ವ್ಯಕ್ತಿತ್ವ ಹೊಂದಿದ್ದರು.
ಎಂದೂ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗ ಅವರನ್ನು ಯಾವುದೇ ಪದಾಧಿಕಾರಿಗಳ ಅಥವಾ ಸರ್ಕಾರದ ಸಾಹಿತ್ಯ ಸಂಸ್ಥೆಗಳ ಜವಾಬ್ದಾರಿಯ ನೀಡದೆ ಇದ್ದದ್ದು ನಿಜ. ಅಂತಿಮವಾಗಿ ಎಂದೂ ಅಧಿಕಾರ ಕೇಳದಿದ್ದ ಶಶಿ ಅಣ್ಣವರಿಗೆ ಆಶ್ರಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಅಂದು ಶಾಸಕರಾಗಿದ್ದ ಕೆಎಸ್ ಈಶ್ವರಪ್ಪ ನೀಡಿದ್ದರು.


ಹಾಲಿ ಶಾಸಕ ಚನ್ನಬಸಪ್ಪ ಅವರ ನಿಜ ಗುರುಗಳು ಆದ ಶಶಿ ಅವರು ಯಡಿಯೂರಪ್ಪ ಅವರ ಪರಮಾಪ್ತರು. ಅವರ ನಿಧನದ ಸುದ್ದಿ ನಿಜಕ್ಕೂ ಬೇಸರದ ಸಂಗತಿ. ಕೇವಲ ಬಿಜೆಪಿಗಷ್ಟೇ ಸೀಮಿತವಾಗದೆ, ಎಲ್ಲ ರಾಜಕೀಯ ಪಕ್ಷಗಳಿಗೆ, ರಾಜಕೀಯ ಪಕ್ಷಗಳ ನಾಯಕರುಗಳ ಜೊತೆ ಪ್ರಮುಖರ ಜೊತೆ ಅತ್ಯಂತ ಪ್ರೀತಿಯಿಂದ ಮಾತನಾಡುತ್ತಿದ್ದ ಇಂತಹ ಮುತ್ಸದ್ದಿಯನ್ನು ಮೇಧಾವಿಯನ್ನು ಯಾರು ನೋಡಲು ಸಾಧ್ಯವಿಲ್ಲ.
ಶಿವಮೊಗ್ಗದಲ್ಲಿ ಬಿಜೆಪಿಗೆ ಬೆಳೆಯಲು ಕಟ್ಟೆ ಕಟ್ಟಿದವರಲ್ಲಿ ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರಂತೆ ಶ್ರಮಿಸಿದವರು ಶಶಿದರ್ ಎಂದರೆ ತಪ್ಪಾಗಲಿಕ್ಕಿಲ್ಲ.


ಶಶಿ ಅಣ್ಣನ ಬಗ್ಗೆ ನಾಳೆ ಇನ್ನೊಂದಿಷ್ಟು ಮಾಹಿತಿ
ಸಂತಾಪ:
ಶಿವಮೊಗ್ಗ ಆಶ್ರಯ ಸಮಿತಿ ಅಧ್ಯಕ್ಷರು, ಬಿಜೆಪಿ ಪಕ್ಷದ ಅತ್ಯಂತ ಪ್ರಮುಖರೂ ಆಗಿದ್ದ ಶಶಿಧರ್ ಅವರ ನಿಧನಕ್ಕೆ ತುಂಗಾತರಂಗ ದಿನಪತ್ರಿಕೆ ಅವರ ಕುಟುಂಬಕ್ಕೆ ಭಗವಂತನು ದುಃಖ ಭರಿಸುವ ಶಕ್ತಿಯನ್ನು ನೀಡಲೆಂದು ಕೋರಿದೆ.

Exit mobile version