Site icon TUNGATARANGA

LEEE-24, ನಾಳೆಯಿಂದ ಅಂತರಾಷ್ಟ್ರೀಯ ಸಮ್ಮೇಳನ ಪಿಇಎಸ್ ಕಾಲೇಜಿನಲ್ಲಿ ಆಯೋಜನೆ | ಪಿಇಎಸ್ ಮುಖ್ಯಸ್ಥ ಡಾ. ನಾಗರಾಜ್ ಆರ್.

ಶಿವಮೊಗ್ಗ,ಮೇ೧೩:
ಪಿಇಎಸ್ ಕಾಲೇಜಿನ ಮುಖ್ಯ ಸೆಮಿನಾರ್ ಹಾಲ್‌ನಲ್ಲಿ ಮೇ ೧೬ ರಂದು ಐಇಇಇ-೨೪ ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸ ಲಾಗಿದೆ ಎಂದು ಪಿಇಎಸ್ ಟ್ರಸ್ಟಿನ ಮುಖ್ಯಸ್ಥ ಡಾ. ನಾಗರಾಜ್ ಆರ್., ಹೇಳಿದರು.


ಅವರು ಇಂದು ಪತ್ರಿಕಾಭವನದಲ್ಲಿ ಆಯೋ ಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಿಇಎಸ್ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆಯೂ ಐಇಇಇ ಸಹಯೋಗದೊಂದಿಗೆ ಅಮೇಥಿ ೨೦೨೪ರ ಅಂತರಾಷ್ಟ್ರೀಯ ಸಮ್ಮೇ ನವನ್ನು ಆಯೋಜಿಸಿದ್ದು ವಿದ್ಯುತ್ ಎಲೆಕ್ಟ್ರಾನಿಕ್ಸ್ ಮಾಹಿತಿ

, ಕಂಪ್ಯೂಟರ್ ಸಂವಾಹನ ತಂತ್ರಜ್ಞಾನ ಗಳಲ್ಲಿನ ಭೂಮಿಕೆಯನ್ನು ಕೇಂದ್ರೀಕರಿಸಿ ಆಯೋಜಿಸಲಾಗಿದೆ ಎಂದರು.
ವಿಶ್ವದಾದ್ಯಂತ ಪ್ರಖ್ಯಾತ ಸಂಸ್ಥೆಗಳಿಂದ ೧೨೦೦ಕ್ಕೂ ಹೆಚ್ಚು ಲೇಖನಗಳು ಬಂದಿದ್ದು ಅದರಲ್ಲಿ ಆಯ್ಕೆ ಮಾಡಿಕೊಂಡು ಸುಮಾರು ೨೦೦ ಪೇಪರ್‌ಗಳ ಮಂಡನೆಗೆ ಅವಕಾಶ ಮಾಡಿಕೊಡಲಾಗಿದೆ. ಸುಮಾರು ೧೨೦ಕ್ಕೂ ಹೆಚ್ಚು ಪ್ರಬಂಧಗಳು ಆನ್‌ಲೈನ್‌ನಲ್ಲಿಯೇ ಮಂಡಿಸಲಿದ್ದು, ಸುಮಾರು ೭೫ಕ್ಕೂ ಹೆಚ್ಚು ಪ್ರಬಂಧಗಳು ಸಮ್ಮೇಳನದಲ್ಲಿ ಮಂಡನೆಯಾಗಲಿವೆ ಎಂದರು.


ಸೌತ್ ಕೋರಿಯಾದ ಕುನ್ಸನ್ ನ್ಯಾಷನಲ್ ವಿಶ್ವವಿದ್ಯಾನಿಲಯದ ಪ್ರೊ. ಡಾ. ಇನ್-ಹೋ ರಾ, ಯು.ಕೆ.ಯ ಟೀಸ್ಸೈಡ್ ವಿಶ್ವವಿದ್ಯಾನಿಲಯದ ಡಾ.ಗಿಲ್‌ಲೇಸಿ ಗೋವಾ ವಿವಿಯ ಪ್ರೊ.ಡಾ. ರಾಜೇಂದ್ರ ಎಸ್.ಗಡ್ ಮುಂತಾದ ಗಣ್ಯರು ಈ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಮಾನದಂಡಗಳು ತಾಂತ್ರಿಕ ಸಂಶೋದನೆಗಳ ಭವಿಷ್ಯವನ್ನು ಆಕಾರಗೊಳಿಸುವ ಪಾತ್ರವನ್ನು ಪರಿಚಯಿಸಲಿದ್ದಾರೆ ಎಂದರು.


ಈ ಅಂತರಾಷ್ಟ್ರೀಯ ಸಮ್ಮೇಳನದಿಂದ ನಮ್ಮ ಕಾಲೇಜಿನ ಸುಮಾರು ೨೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಅಲ್ಲದೇ ಸ್ಥಳೀಯ ಮತ್ತು ಪ್ರಾದೇಶಿಕ ಆರ್ಥಿಕತೆಯ ಮೇಲೆ ಪ್ರಭಾವ ಭೀರಲಿದೆ. ಸ್ಥಳೀಯ ಹೋಟೆಲ್‌ಗಳ ಸೇವೆಗಳಿಗೆ ಅನುಕೂಲವಾಗಲಿದೆ. ಮತ್ತು ವಿಶ್ವವ್ಯಾಪಕತೆಯನ್ನು ವಿಸ್ತರಿಸುತ್ತದೆ ಎಂದರು.


ಸಮ್ಮೇಳನದಲ್ಲಿ ಹಲವು ಗೋಷ್ಠಿಗಳ ಮೂಲಕ ತಾಂತ್ರಿಕ ವಿಚಾರಗಳು ಪರಿಸರ ಸ್ನೇಹಿ ಚರ್ಚೆಗಳು, ವೃತ್ತಿಪರ ಬೆಳವಣಿಗೆ ಕಲಿಕೆ ಮತ್ತು ಸಂಶೋಧನೆಗೆ ಆದ್ಯತೆ, ಶೈಕ್ಷಣಿಕ ಉತ್ಕೃಷ್ಟತೆ ಹೆಚ್ಚಿಸುವ ಬಗ್ಗೆ ಮತ್ತು ವೃತ್ತಿಪರ ಬೆಳವಣಿಗೆಗೆ ಪ್ರೋತ್ಸಾಹಿಸುವ ವಾತಾವರಣವನ್ನು ನಿರ್ಮಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಿಇಎಸ್ ಟ್ರಸ್ಟಿನ ಸಿಓಓ ಬಿ.ಆರ್.ಸುಭಾಷ್ ಹಾಗೂ ಸಮ್ಮೇಳನದ ಮುಖ್ಯಸ್ಥ ಡಾ.ಪ್ರಸನ್ನಕುಮಾರ್ ಹೆಚ್.ಆರ್. ಇದ್ದರು.

Exit mobile version