Site icon TUNGATARANGA

ರಾಘಣ್ಣನಾ, ಗೀತಕ್ಕನಾ….? ಫೈಟಲ್ಲಿ ಈಶ್ವರಪ್ಪರೂ ಇದ್ದಾರೆ! ಶುರುವಾಯ್ತು ಬರ್ಜರಿ ಚಾಲೆಂಜ್ …, ಮಾಹಿತಿ ಇದ್ರೆ ಹೇಳಿ

ತುಂಗಾತರಂಗ ಸ್ಪೆಷಲ್
ಶಿವಮೊಗ್ಗ, ಮೇ.13:
ಕಳೆದ ಲೋಕಸಭಾ ಚುನಾವಣೆಯ ಮತದಾನದ ನಂತರ ಈಗ ಚಾಲೆಂಜಿಂಗ್ ಹವಾ ಎಲ್ಲೆಡೆ ಭರ್ಜರಿಯಾಗಿ ಕಾಣಿಸಿಕೊಳ್ಳುತ್ತಿದೆ. ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಅಂದರೆ ರಾಘಣ್ಣ, ಕಾಂಗ್ರೆಸ್ ಅಭ್ಯರ್ಥಿ ಅಂದರೆ ಗೀತಕ್ಕ ಹಾಗೆ ಪಕ್ಷೇತರವಾಗಿ ಬಿಜೆಪಿಯನ್ನು ಶುದ್ಧೀಕರಣ ಮಾಡುವುದು ಹಾಗೂ ಹಿಂದುತ್ವವನ್ನು ಉಳಿಸುವುದು ಎಂಬ ನಿಟ್ಟಿನಲ್ಲಿ ಸ್ಪರ್ಧಿಸಿದ್ದ ಕೆಎಸ್ ಈಶ್ವರಪ್ಪ ಅಂದರೆ ಈಶಣ್ಣ ಅವರ ನಡುವೆ ಚಾಲೆಂಜಿಂಗ್ ಪೈಪೋಟಿ ಈಗ ಆರಂಭಗೊಂಡಿದೆ.
ಶಿಕಾರಿಪುರದ ಓರ್ವ ಮತದಾರ ಗೀತಕ್ಕ ಪರವಾಗಿ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಚಾಲೆಂಜ್ ಕಟ್ಟಿ ನಾನು ಟ್ರಾಕ್ಟರ್ ಅನ್ನು ಪಣವಾಗಿ ಇಡುತ್ತೇನೆ ಎಂದಿದ್ದಾರೆ.


ಅದಕ್ಕೂ ಪೂರ್ವದಲ್ಲಿ ರಾಘಣ್ಣ ಪರವಾಗಿ ಈಗಾಗಲೇ ಬೆಟ್ಟಿಂಗ್ ಕಟ್ಟಿದ್ದಾರೆ ಎಂದು ಪತ್ರಿಕೆಯ ಬಲ್ಲಮೂಲಗಳು ತಿಳಿಸಿದೆ.
ಒಟ್ಟಾರೆಯಾಗಿ ಇಡೀ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ಜೂನ್ 4ರ ಫಲಿತಾಂಶ ಪೂರ್ವದಲ್ಲಿ ಚಾಲೆಂಜಿಂಗ್ ಅವರ ನೂರು ರೂಪಾಯಿಂದ ಲಕ್ಷ ರೂಪಾಯಿ ತನಕ ನಡೆಯುತ್ತಿದೆ ಅದಕ್ಕೆ ಹಾಗೆ ದಾಖಲೆಗಳನ್ನು ಸಹ ಪಡೆಯುವವರ ನಡೆಯುತ್ತಿದೆ ಎಂದು ಇದೇ ಮೂಲಗಳು ಹೇಳಿವೆ.
ಕಳೆದ ಬಾರಿಯ ಲೋಕಸಭಾ

ಚುನಾವಣೆಯ ಹೊತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಚಾಲೆಂಜ್ ಹೈ ಲೀಡ್ ನಲ್ಲಿತ್ತು. ಈಗ ಸಮಾನ ಅಂತರಕ್ಕೆ ತಲುಪಿದೆ ಎಂದು ಮೂಲಗಳಿಂದ ಹೇಳಲಾಗುತ್ತಿದೆ.


ಹಾಗೆಂದು ಬಿಜೆಪಿ ಪರವಾದ ಚಾಲೆಂಜಿಂಗ್ ಜಾಸ್ತಿಯಾಗಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದು ಇದು ತುಂಗಾತರಂಗ ಪತ್ರಿಕೆಯ ಸ್ವಂತಿಕೆ ವರದಿ ಏನಲ್ಲ. ಸರ್ವಜನರ ಮತದಾರರ ನಡುವೆ ನಡೆಯುವ ವಿಷಯಗಳ ಚಿಕ್ಕ ವಿಶ್ಲೇಷಣೆ ಅಷ್ಟೇ.
ಗ್ರಾಮೀಣ ಭಾಗದಲ್ಲೂ ಸಹ ಇಂತಹ ಚರ್ಚೆ ನಡೆಯುತ್ತಿದ್ದು ಅದು ಸಹ ಚಾಲೆಂಜಿಂಗ್ ವಿಷಯದಲ್ಲಿ ಮುಂದಾಗಿತ್ತು ಯಾರು ಗೆಲ್ಲುತ್ತಾರೆ ಎಂಬ ಅವಲೋಕನದಲ್ಲಿ ತೊಡಗುವ ಜೊತೆಗೆ ಚಾಲೆಂಜ್ ಕಟ್ಟುವ ಕಾಯಕ ಹೆಚ್ಚಾಗಿ ನಡೆಯುತ್ತಿದೆ ಇಂತಹ ಯಾವುದಾದರೂ ಮಾಹಿತಿಗಳಿದ್ದಲ್ಲಿ ತಾವುಗಳು ನೀಡುವಂತೆ ಕೇಳಿದ್ದೇವೆ.

Exit mobile version