Site icon TUNGATARANGA

ಜಮೀನು ವಿವಾದಕ್ಕೆ ದುಮ್ಮಳ್ಳಿಯಲ್ಲೊಂದು ಕೊಲೆ ಅರೋಪಿಯ ಬಂಧನ

ಶಿವಮೊಗ್ಗ,ಮೇ೧೩:ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಹೊರವಲಯದ ದುಮ್ಮಳ್ಳಿಯಲ್ಲೊಂದು ಕೊಲೆಯಾಗಿದೆ. ಹತ್ಯೆಯಾದವನ ಮೃತ ದೇಹ ತೋಟದಲ್ಲಿ ಪತ್ತೆಯಾಗಿದ್ದು ಸತೀಶ್ (೨೮) ಎಂದು ಗುರುತಿಸಲಾಗಿದೆ.


ದುಮ್ಮಳ್ಳಿಯಲ್ಲಿ ಜಮೀನು ಹೊಂದಿದ್ದ ಸತೀಶ್ ಗೆ ಜಮೀನಿನ ವಿಚಾರದಲ್ಲಿ ಅಕ್ಕಪಕ್ಕದ ಗಲಾಟೆ ಇತ್ತು ಎನ್ನಲಾಗಿದೆ. ಇಂದು ಬೆಳಿಗ್ಗೆ ಸತೀಶ್ ನನ್ನ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿದವನ್ನನ ಅಖಿಲೇಶ್ ಎಂದು ಗುರುತಿಸಲಾಗಿದೆ.


ಮೃತ ಸತೀಶ್ ನ ತಂದೆ ಶೇಷಾ ನಾಯ್ಕ್ ಮಾಧ್ಯಮಗಳಿಗೆ ಮಾತನಾಡಿ, ನ್ಯಾಯಾಲಯದಲ್ಲಿ ನಮಗೂ ಮತ್ತು ಪಕ್ಕದ ಜಮೀನಿನ ಮಂಜಾನಾಯ್ಕ್ ಜೊತೆ ವ್ಯಾಜ್ಯವಿತ್ತು. ವ್ಯಾಜ್ಯ ತೀರ್ಮಾನವಾಗಿ ನಮ್ಮ ಪರವಾಗಿದೆ. ಇಂದು ಬೆಳಿಗ್ಗೆ ಮಗ ಸತೀಶ್ ನಾಯ್ಕ್ ಜಮೀನಿಗೆ ಬಂದಾಗ ಮಂಜಾನಾಯ್ಕನ ಮಗ ಅಖಲೇಶ್ ಕಂದ್ಲಿಯಲ್ಲಿ ದಾಳಿ ನಡೆಸಿ ಕೊಲೆ ಮಾಡಿದ್ದಾನೆ ಎಂದು ದೂರಿದ್ದಾರೆ.


ಸತೀಶ್ ಸ್ಥಳದಲ್ಲಿ ಸಾವು ಕಂಡಿದ್ದು, ಆರೋಪಿ ಅಖಿಲೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ತಾಯಿಯೂ ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಮೃತನ ತಂದೆ ಆರೋಪಿಸಿದ್ದಾರೆ.


ದುಮ್ಮಳ್ಳಿಯಲ್ಲಿ ಆರೋಪಿಗಳ ಮನೆಯ ಮೇಲೆ ಉದ್ರಿಕ್ತ ಗ್ರಾಮಸ್ಥರು ಕಲ್ಲು ತೂರಿದ್ದು ಕಲ್ಲು ತೂರಾಟದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದೆ.


ಮನೆಯಲ್ಲಿದ್ದ ಆರೋಪಿಯ ಕುಟುಂಬಸ್ಥರನ್ನು ಪೊಲೀಸರ ರಕ್ಷಣೆಯಲ್ಲಿ ಕರೆದೊಯ್ಯಲಾಗಿದೆ. ಪೊಲೀಸರು ಒಂದು ವೇಳೆ ಸ್ಥಳದಲ್ಲಿ ಇರಲಿಲ್ಲವೆಂದರೆ ಆರೋಪಿಯ ಕುಟುಂಬಸ್ಥರ ಸ್ಥಿತಿ ಗಂಭೀರವಾಗುತ್ತಿತ್ತು. ಬೀಸಿದ ಕಲ್ಲೊಂದು ಮಿಸ್ ಆಗಿ ಸಿಬ್ಬಂದಿಗೆ ತಗುಲಿ ಗಾಯವಾಗಿದೆ.
ಆರೋಪಿಗಳ ತಾಯಿ ಹೆಂಡತಿ ಮತ್ತು ಮಗಳನ್ನ ಪೊಲೀಸ್ ರಕ್ಷಣೆಯಲ್ಲಿ ಕರೆದೊಯ್ಯಲಾಗಿದೆ.

ರಕ್ಷಣೆಯಲ್ಲಿ ಕರೆದೊಯ್ಯುವವರೆಗೆ ಆರೋಪಿಗಳಿಗೆ ಮಹಿಳ ಪೊಲೀಸರ ಭದ್ರತೆ ಒದಗಿಸಲಾಗಿತ್ತು. ಮನೆಯ ಒಳಗೆಲ್ಲ ಕಲ್ಲಿನ ಚೂರುಗಳು ಪತ್ತೆಯಾಗಿದೆ. ತುಂಗಾ ನಗರ ಪೊಲೀಸರು ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಿದ್ದಾರೆ.

Exit mobile version