Site icon TUNGATARANGA

ಜಿ.ಪಂ.ಸಿಇಒ ವೈಶಾಲಿ ಅವರಿಗೆ ಐಎಎಸ್ ಬಡ್ತಿ


ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಲ್.ವೈಶಾಲಿ ಸೇರಿದಂತೆ ರಾಜ್ಯದ ಹಲವು ಅಧಿಕಾರಿಗಳಿಗೆ ಐಎಎಸ್ ಬಡ್ತಿ ನೀಡಿ ಬರುವ ವಾರ ಡಿಪಿಎಆರ್‌ನಿಂದ ಆದೇಶ ಹೊರಬೀಳಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಯುಪಿಎಸ್‌ಸಿಯಿಂದ ಈಗಾಗಲೇ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಅಧಿಕಾರಿಗಳು 2005 ಹಾಗೂ 2006ರ ಬ್ಯಾಚ್‌ನಲ್ಲಿ ಕೆಎಎಸ್‌ಗೆ ಆಯ್ಕೆಯಾಗಿದ್ದರು. ೨೦೦೬ರ ಬ್ಯಾಚ್‌ನ 10 ಜನರಿಗೆ ಬಡ್ತಿ ಸಿಗಲಿದೆ ಎಂದು ಇದೇ ಮೂಲಗಳು ಹೇಳಿವೆ.

Exit mobile version