Site icon TUNGATARANGA

ಎಸ್ ಎಸ್ ಎಲ್ ಸಿ: ಶಿವಮೊಗ್ಗ ತಾಲ್ಲೂಕಿಗೆ ಶೇ. 91 ಫಲಿತಾಂಶ- ಬಿಇಓ ನಾಗರಾಜ್ ಹರ್ಷ


ಶಿವಮೊಗ್ಗ, ಮೇ.11:
ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ತಾಲೂಕಿಗೆ ಶೇ. 90.93 ಫಲಿತಾಂಶ ಲಭ್ಯವಾಗಿದೆ.
2023-24ನೇ ಸಾಲಿನ 10ನೇ ತರಗತಿ


ಪರೀಕ್ಷೆಗೆ ತೆಗೆದುಕೊಂಡ 5976 ವಿದ್ಯಾರ್ಥಿಗಳಲ್ಲಿ 5334 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಪಿ ನಾಗರಾಜ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಒಟ್ಟಾರೆ ಶೇ. ಫಲಿತಾಂಶ-90.93
ಶೇ.ಆಗಿದ್ದು 100 ಫಲಿತಾಂಶ ಬಂದಿರುವ ಶಾಲೆಗಳು-43,
6೦೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು- 93 ಎಂದು ತಿಳಿಸಿದ್ದಾರೆ.


ಶಿವಮೊಗ್ಗ ನಗರದ ರವಿಶಂಕರ್ ವಿದ್ಯಾಮಂದಿರ ಶಾಲೆಯ ಗುರು ಚರಣ್ ಎಂ ಶೆಟ್ಟಿ 622 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ ಎಂದಿದ್ದಾರೆ.


ಮಾರ್ಚ್ 2024 ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಲಾಖೆ ತೆಗೆದುಕೊಂಡ ಅತ್ಯಂತ ಕಟ್ಟುನಿಟ್ಟಿನ ಪರೀಕ್ಷಾ ಕ್ರಮದ ನಡುವೆಯೂ ಶಿವಮೊಗ್ಗ ತಾಲೂಕಿನ ಪ್ರೌಢ ಶಾಲೆಗಳು ಕಳೆದ

ಸಾಲಿಗಿಂತ ಶೇಕಡ 6.87 ಹೆಚ್ಚಿನ ಫಲಿತಾಂಶದೊಂದಿಗೆ ಶೇಕಡ 90.93 ಸಾಧನೆ ಮಾಡಿವೆ. ಇದು ಸಂತಸದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.


ಈ ಸಾಧನೆ ಮಾಡಿದ ಎಲ್ಲಾ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಹಾಗೂ ಇದಕ್ಕೆ ಕಾರಣರಾದ ಸಹ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರಿಗೆ ಬಿಇಓ ಅಭಿನಂದಿಸಿದ್ದಾರೆ.

Exit mobile version