Site icon TUNGATARANGA

ಸಕಲ ಜೀವಿಗೆ ಲೇಸನ್ನು ಬಯಸಿದವರು ಸಾಂಸ್ಕøತಿಕ ನಾಯಕ ಬಸವಣ್ಣನವರು/ ಬೆಕ್ಕಿನ ಕಲ್ಮಠದ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು

ಶಿವಮೊಗ್ಗ, ಮೇ 10: ಸಕಲ ಜೀವಿಗೆ ಲೇಸನ್ನು ಬಯಸಿದವರು ಸಾಂಸ್ಕøತಿಕ ನಾಯಕ ಬಸವಣ್ಣನವರು ಎಂದು ಬೆಕ್ಕಿನ ಕಲ್ಮಠದ ಶ್ರೀಗಳಾದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಹೇಳಿದರು.

ಅವರು ಇಂದು ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ವತಿಯಿಂದ ವಿಶ್ವಮಾನವ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ನಗರದ ಬಸವೇಶ್ವರ ವೃತ್ತದಲ್ಲಿ ಗಾಂಧಿ ಪಾರ್ಕ್ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದರು.

ವಿಶ್ವಗುರು ಬಸವಣ್ಣನವರ ತತ್ವ ಆದರ್ಶಗಳು ಜಗತ್ತಿಗೆ ಮಾದರಿ ಮತ್ತು ಇಂದಿಗೂ ಪ್ರಸ್ತುತ. ಅವರ ತತ್ವ, ಆದರ್ಶಗಳು ಸಮಾಜದ ಓರೆ ಕೋರೆಗಳನ್ನು ತಿದ್ದು ವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕøತಿಕ ನಾಯಕ ಎಂದು ಘೋಷಣೆ ಮಾಡಿರುವುದು ಒಂದು ಹೊಸ ಮನ್ವಂತರವೇ ಆಗಿದೆ. ಒಂದು ದೇಶ ತನ್ನನ್ನು ತಾನು ಪರಿಚಯಿಸಿಕೊಳ್ಳಲು ಅಲ್ಲಿನ ಸಂಸ್ಕøತಿ ಮುಖ್ಯವಾಗುತ್ತದೆ. ನಾಡಿನ ಸಂಸ್ಕøತಿಯೇ ವೈಶಿಷ್ಠ್ಯ ಪಡೆದುಕೊಳ್ಳುತ್ತದೆ. ಇಂತಹ ಸಾಂಸ್ಕøತಿಕ ನಾಯಕನಾಗಿ ಇತಿಹಾಸ ಸೃಷ್ಠಿ ಮಾಡಿದವರು ಬಸವಣ್ಣನವರು, ಇಡೀ ವಿಶ್ವವೇ ಬೆರಗಾಗಿ ನೋಡುವಂತೆ ಮಾಡಿದ ಪುಣ್ಯ ಪುರುಷ ಅವರು. ಅವರೊಂದು ಶಕ್ತಿ ಮತ್ತು ಚೈತನ್ಯ ಎಂದರು.

ಅವರ ಆಡಳಿತ ವ್ಯವಸ್ಥೆ ಸರ್ವಕಾಲಕ್ಕೂ ಮಾದರಿ. ಎಲ್ಲಾ ಧರ್ಮಗಳಿಗೂ ಸಮಾನತೆಯನ್ನು ಸಾರಿದ ಬಸವಣ್ಣನವರ ವಚನಗಳು ಸರ್ವಕಾಲಿಕವಾಗಿದ್ದು ಸರ್ವಧರ್ಮಗಳಿಗೂ ಪ್ರಸ್ತುತವಾಗಿದೆ ಎಂದರು. ಕಾಯಕವೇ ಕೈಲಾಸ ಎಂದು ಸಾರಿದವರು ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂದು ಹೇಳುತ್ತಾ ಸಮಾಜದಲ್ಲಿ ಹೆಣ್ಣು ಗಂಡು ಎಂಬ ತಾರತಮ್ಯವಿಲ್ಲದೆ ಸಮಾಜವನ್ನು ಬೆಳೆಸಬೇಕು ಎಂದು ಹೇಳಿದ್ದರು. ಬಸವಣ್ಣನವರ ತತ್ವದರ್ಶಗಳನ್ನು ಪಾಲಿಸುವುದರಿಂದ ಸಮಾಜದಲ್ಲಿ ಸುಖ ಶಾಂತಿ ಲಭಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿಪ್ರಕಾಶ್, ಶಾಸಕ ಎಸ್ ರುದ್ರೇಗೌಡ, ಮಾಜಿ ಶಾಸಕರಾದ ಎಸ್.ಎಂ. ಚಂದ್ರಶೇಖರಪ್ಪ, ಪ್ರಮುಖರಾದ ಎಸ್ಪಿ ದಿನೇಶ್., ಎನ್.ಜೆ.ರಾಜಶೇಖರ್, ಡಾ.ಧನಂಜಯ ಸರ್ಜಿ, ವೈ.ಹೆಚ್.ನಾಗರಾಜ್, ಮೂರ್ತಿ, ರೋಟರಿ ವಿಜಯ್ ಕುಮಾರ್, ಬಳ್ಳಕೆರೆ ಸಂತೋಷ್, ಶಾಂತ ಆನಂದ್, ಅನಿತಾ ರವಿಶಂಕರ್, ತಾರಾನಾಥ್, ಗಣೇಶ ಅಂಗಡಿ, ಮಹೇಶ್ ಮೂರ್ತಿ,  ಮಹೇಶ್ವರಪ್ಪ ಸೇರಿದಂತೆ ವೀರಶೈವ ಸಮಾಜದ ಮುಖಂಡರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

Exit mobile version