Site icon TUNGATARANGA

ಎಸ್.ಎಸ್.ಎಲ್.ಸಿ : ಎನ್ಇಎಸ್ ಶಾಲೆಗಳಿಗೆ‌ ಉತ್ತಮ ಫಲಿತಾಂಶ

ಶಿವಮೊಗ್ಗ: ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ‌ ಪರೀಕ್ಷೆಯಲ್ಲಿ ಉತ್ತಮ ‌ಫಲಿತಾಂಶ ಪಡೆದಿದ್ದು, ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಆಲಿಯಾ ಮೆಹರೂಶ್ 621 (ಶೇ.99.36%) ಅಂಕ ಗಳಿಸಿ ಜಿಲ್ಲೆಗೆ ಎರಡನೇ ಟಾಪರ್ ಆಗಿದ್ದಾರೆ. 

ಚೀಲೂರು ರಾಷ್ಟ್ರೀಯ ಆಂಗ್ಲ‌ ಮಾಧ್ಯಮ ಶಾಲೆ ಶೇ.100% ಫಲಿತಾಂಶ, ಕುಂಸಿ‌ ರಾಷ್ಟ್ರೀಯ ಪ್ರೌಢಶಾಲೆ ಶೇ.100%, ಕೋಣಂದೂರು ರಾಷ್ಟ್ರೀಯ ಪ್ರೌಢಶಾಲೆ ಶೇ.100%, ಹುಂಚಾದ ಪದ್ಮಾಂಬ ಶಾಲೆ ಶೇ.100%, ಕಸ್ತೂರಬಾ

ಶಾಲೆ ಶೇ.99%, ಚೀಲೂರು ಕನ್ನಡ ಮಾಧ್ಯಮ ರಾಷ್ಟ್ರೀಯ ಪ್ರೌಢಶಾಲೆ ಶೇ.88%, ಶಿವಮೊಗ್ಗದ ರಾಷ್ಟ್ರೀಯ ಪ್ರೌಢಶಾಲೆ ಶೇ.88%,  ಜೆ.ಪಿ.ಎನ್ ಶಾಲೆ ಶೇ.80%, ಹರಿಗೆಯ ಶರಾವತಿ ರಾಷ್ಟ್ರೀಯ ಪ್ರೌಢಶಾಲೆ ಶೇ.75%,

ಬಿ.ಆರ್.ಪಿ ಶಾಲೆ ಶೇ.75%,  ಬೆಳಗುತ್ತಿಯ ತೀರ್ಥಲಿಂಗೇಶ್ವರ‌ ಪ್ರೌಢಶಾಲೆ ಶೇ.55% ಪಡೆದಿದೆ. ಗುಣಾತ್ಮಕ ಸರಾಸರಿಯಲ್ಲಿಯು ಎನ್ಇಎಸ್ ಸಂಸ್ಥೆಯ ಶಾಲೆಗಳು ಉತ್ತಮ ಫಲಿತಾಂಶವನ್ನು ತಮ್ಮದಾಗಿಸಿಕೊಂಡಿವೆ.

ಎಲ್ಲಾ ವಿದ್ಯಾರ್ಥಿಗಳಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ‌ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Exit mobile version