Site icon TUNGATARANGA

ಬಗೆಬಗೆಯ ಸುಂದರ ಮತಗಟ್ಟೆಗಳಲ್ಲಿ ಸಸೂತ್ರ ಮತದಾನ ಪ್ರಕ್ರಿಯೆ ಆರಂಭ/ ಶಿವಮೊಗ್ಗದ ಒಂದಿಷ್ಟು ಮೊದಲ ಮಾಹಿತಿ ಚಿತ್ರ ನೋಡಿ

ಶಿವಮೊಗ್ಗ, ಮೇ. 07:
ಶಿವಮೊಗ್ಗ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆ ಅತ್ಯಂತ ಬಗೆ ಬಗೆಯ ವಿಭಿನ್ನ ಮತಗಟ್ಟೆಗಳ ನಡುವೆ ಎಲ್ಲೆಡೆ ಸಸೂತ್ರವಾಗಿ ಮತದಾನ ಪ್ರಕ್ರಿಯೆ ಬಿರುಸಿನಿಂದ ಆರಂಭಗೊಂಡಿದ್ದು ಗಣ್ಯರು ಮತದಾನ ಮಾಡುತ್ತಿರುವ ದೃಶ್ಯ ಕಂಡುಬರುತ್ತದೆ.


ಮಧ್ಯಾಹ್ನದ ಬಿಸಿಲ ಯೋಚನೆ ಹಿನ್ನೆಲೆಯಲ್ಲಿ ಬೆಳಿಗ್ಗೆ 6ರಿಂದಲೇ ಸಾಕಷ್ಟು ಜನ ಮತದಾರರು ಮತಗಟ್ಟೆ ಆವರಣಕ್ಕೆ ಬಂದು ಮತ ಚಲಾಯಿಸಲು ಮುಂದಾಗಿದ್ದು, ಈ ಬಾರಿಯ ಅತ್ಯಂತ ವಿಶೇಷ ಅರಮನೆ ಮಾದರಿಯ ಮತಗಟ್ಟೆ ಒಂದೆಡೆಯಾದರೆ ಮತ್ತೆ ಹಲವಡೆ ಸಖೀ ಮಾದರಿಯ ಮತಗಟ್ಟೆಗಳು ಅತ್ಯಂತ ವಿಶೇಷವಾಗಿ ಕಾಣಿಸಿಕೊಳ್ಳುತ್ತಿವೆ.

ಅರಮನೆ ಗತ ವೈಭವ ಮರುಕಳಿಸಿದ ಜಿಲ್ಲಾ ಪಂಚಾಯತ್ ಆವರಣದ ಮತಗಟ್ಟೆ:


ಮತಗಟ್ಟೆಗೆ ಆಗಮಿಸಲು ಬರುವ ಮತದಾರರು ಮೊಬೈಲ್ ತರಬಾರದು ಎಂಬ ವಿಷಯ ತಕರಾರು ಶಿವಮೊಗ್ಗದ ವಿನೋಬನಗರ ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ನಡೆಯಿತು.


ಗಣ್ಯರು ಅತಿ ಗಣ್ಯರು ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಕೆಲವು ಸಾಕ್ಷಿ ಪುರಾವೆಗಳು ಈ ಚಿತ್ರಗಳಲ್ಲಿವೆ ನೋಡಿ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಂಸದ ಸ್ಥಾನದ ಅಭ್ಯರ್ಥಿ ಬಿ ವೈ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಶಿಕಾರಿಪುರದಲ್ಲಿ ಮತ ಚಲಾಯಿಸಿದರೆ,

ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಕುಟುಂಬ ಮತ ಚಲಾಯಿಸಲು ಗುಂಡಪ್ಪ ಶೆಡ್ ನ ಮತ ಕೇಂದ್ರಕ್ಕೆ ಆಗಮಿಸಿದೆ.
ಮೊಬೈಲ್ ಬಳಕೆ ವಿಚಾರವಾಗಿ ಸಾಕಷ್ಟು ಕಡೆ ಕಿರಿಕಿರಿಯ ವಾತಾವರಣ ಸೃಷ್ಟಿಯಾಗಿದ್ದು ಈ ಘಟನೆ ಒಂದನ್ನು ಹೊರತುಪಡಿಸಿ ಉಳಿದಂತೆ ಅತ್ಯಂತ ಸಮರ್ಥವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

ಅರಮನೆ ಗತ ವೈಭವ ಮರುಕಳಿಸಿದ ಜಿಲ್ಲಾ ಪಂಚಾಯತ್ ಆವರಣದ ಮತಗಟ್ಟೆ:
ಜಿಲ್ಲಾ ಪಂಚಾಯತ್ ಆವರಣದಲ್ಲಿ ನಿರ್ಮಾಣ ಮಾಡಲಾದ ಅರಮನೆ ಮಾದರಿಯ ಮತಗಟ್ಟೆ ಮತದಾರರ ಆಕರ್ಷಣೀಯ ಮತಗಟ್ಟೆಆಗಿದೆ.
283 ಮತಗಟ್ಟೆ ಸಂಖ್ಯೆ ಇದಾಗಿದೆ.

ಸೈನ್ಸ್ ಫೀಲ್ಡ್ ಮತಗಟ್ಟೆಯಲ್ಲಿ ಗಮನ ಸೆಳೆಯುವ ರಿವರ್ ಫ್ರಂಟ್ ವ್ಯೂ ಕಲಾ ಕೃತಿ – ಚಿತ್ರ ಕೃಪೆ ಶಣೈ, ವಾರ್ತಾ ಇಲಾಖೆ


ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು. ಈ ಉದ್ದೇಶದಿಂದ ಈ ಮತಗಟ್ಟೆ ಸಿದ್ದವಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮುಖ್ಯ ಯೋಜನಾಧಿಕಾರಿಳ ಮಾರ್ಗದರ್ಶನದಂತೆ ಈ ವಿಶೇಷ ಮತಗಟ್ಟೆ ರೂಪುಗೊಂಡಿದೆ.

Exit mobile version