Site icon TUNGATARANGA

ಹೆಣ್ಣು ಕುಲಕ್ಕೆ ಕಂಟಕವಾಗಿರುವ ಆರೋಪಿತ ಪ್ರಜ್ವಲ್ ರೇವಣ್ಣನವರನ್ನು ಕೂಡಲೇ ಬಂಧಿಸಲು ಜಿಲ್ಲಾ ಐಎನ್‌ಟಿಯುಸಿ ಅಗ್ರಹ

ಶಿವಮೊಗ್ಗ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ನೂರಾರು ಹೆಣ್ಣುಮಕ್ಕಳನ್ನು ದುರುಪಯೋಗಪಡಿಸಿಕೊಂಡಿದ್ದು, ಹೆಣ್ಣು ಕುಲಕ್ಕೆ ಕಂಟಕವಾಗಿರುವ ಆರೋಪಿತ ಪ್ರಜ್ವಲ್ ರೇವಣ್ಣನವರನ್ನು ಕೂಡಲೇ ಬಂಧಿಸಬೇಕೆAದು ಆಗ್ರಹಿಸಿ ಜಿಲ್ಲಾ ಐಎನ್‌ಟಿಯುಸಿ ಭಾನುವಾರ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮಗನ ಹಾಗೂ ಮೊಮ್ಮಗನ ರಕ್ಷಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಅಣ್ಣ ಮತ್ತು ಅಣ್ಣನ ಮಕ್ಕಳ ರಕ್ಷಣೆಗೆ ಪ್ರಭಾವ ಬಳಸುವ ಸಾಧ್ಯತೆ ಇದೆ.

ಕೇಂದ್ರ ಬಿಜೆಪಿ ಸರ್ಕಾರದ ಮಿತ್ರ ಪಕ್ಷವಾಗಿರುವ ಜೆಡಿಎಸ್ ನಾಯಕರನ್ನು ಉಳಿಸಲು ಬಿಜೆಪಿ ಕೂಡ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣವರನ್ನು ಕೇಂದ್ರ ಸರ್ಕಾರ ತನ್ನ ಪ್ರಭಾವ ಬಳಸಿ ಬಂಧಿಸಿ ಕರೆತರಬೇಕು ಹಾಗೂ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಬೇಕು. ಮತ್ತು ಎಲ್ಲೂ ಕೂಡ ಸಂತ್ರಸ್ತ ಮಹಿಳೆಯ ಪ್ರಚಾರವಾಗಬಾರದು. ಮಾನನಷ್ಟ ಆಗಬಾರದು. ಆರೋಪಿತ ರೇವಣ್ಣ ಮತ್ತು ಅವರ ಪುತ್ರನ ಮೇಲೆ ಕಠಿಣಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಇಂಟಕ್ ರಾಜ್ಯಾಧ್ಯಕ್ಷ ಲಕ್ಷಿö್ಮ ವೆಂಕಟೇಶ್, ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ,ಇಂಟಕ್ ನ ಜಿಲ್ಲಾ ಪ್ರಮುಖರಾದ ಕವಿತಾ ರಾಘವೇಂದ್ರ, ಸ್ಟೆಲಾ ಮಾರ್ಟಿನ್, ಅರ್ಚನಾ, ತಂಗರಾಜ್ ಮೊದಲಾದವರಿದ್ದರು.

Exit mobile version