ತುಂಗಾತರಂಗ ಸ್ಪೆಷಲ್
ಗಜೇಂದ್ರ ಸ್ವಾಮಿ
ಶಿವಮೊಗ್ಗ, ಏ.05:
ಶಿವಮೊಗ್ಗ ಲೋಕಸಭಾ ಚುನಾವಣೆ ಕೊನೆಯ ಹೊತ್ತಿನಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ, ಶಿವರುದ್ರಯ್ಯ ಸ್ವಾಮಿ ಸೇರಿದಂತೆ ಹಲವರ ಪರ ಪ್ರಚಾರದಲ್ಲಿ ಅವರು ಹಾಗೂ ನಾಯಕರು ಆಡಿದ ಮಾತುಗಳ ತುಣುಕುಗಳು ಇಲ್ಲಿವೆ. ಇಲ್ಲಿ ವಿಶೇಷವಾಗಿ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ನರೇಂದ್ರ ಮೋದಿ, ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ, ಕುಮಾರಸ್ವಾಮಿ, ಜಿಲ್ಲಾ ಸಚಿವ ಮಧು ಬಂಗಾರಪ್ಪ ಸೇರಿದಂತೆ ಪಕ್ಷದ ಪ್ರಮುಖರು ಅಭ್ಯರ್ಥಿಗಳು ಆಡಿದ ಮಾತಿನ ತುಣುಕುಗಳು ಇಲ್ಲಿವೆ.
ಅಭ್ಯರ್ಥಿಗಳ ಆಯ್ಕೆ
ನಿಮ್ಮದು ರಾಷ್ಟ್ರ, ರಾಜ್ಯ, ಜಿಲ್ಲೆ, ನಮ್ಮೂರು ಎಂಬ ಚಿಂತನೆ ನಡುವೆ ಸೂಕ್ತ ಅಭ್ಯರ್ಥಿಯ ಆಯ್ಕೆಗೆ ವೇದಿಕೆ ಸಜ್ಜಾಗಿದೆ.
ಸತ್ಯ ಹಾಗೂ ಸುಳ್ಳು ಹೇಳಿಕೆಗಳ ನಡುವೆ ದೇಶವನ್ನು, ಜನರನ್ನು ಜಾತಿ, ಧರ್ಮಗಳ ಮೂಲಕ ಇಬ್ಬಾಗ ಮಾಡುತ್ತಿರುವ ನರೇಂದ್ರ ಮೋದಿಯವರು ಅತ್ಯಾಚಾರದ ಆರೋಪಿ ಪರವಾಗಿ ಮತಯಾಚಿಸಿದ್ದಾರೆ, ಅತಿ ದೊಡ್ಡ ದೇಶದ ಲೈಂಗಿಕ ದೌರ್ಜನ್ಯ ಇದಾಗಿದ್ದು, ದೇಶದ ಮಹಿಳೆಯರ ಕ್ಷಮೆ ಕೇಳಬೇಕು.
- ರಾಹುಲ್ ಗಾಂಧಿ ದೇಶವನ್ನು ಕಾಪಾಡಲು ನರೇಂದ್ರ ಮೋದಿಯವರ ಗ್ಯಾರಂಟಿಗಳನ್ನು ನಂಬುವ ಮೂಲಕ ಕಾಂಗ್ರೆಸ್ ರಹಿತವಾದ ಭಾರತೀಯ ಜನತಾ ಪಕ್ಷವನ್ನು ಮತ್ತೆ ಬೆಂಬಲಿಸಿ ದೇಶವನ್ನು ವಿಶ್ವದ ಅತಿ ಶ್ರೇಷ್ಠ ಸ್ಥಾನದಲ್ಲಿ ನಿಲ್ಲಿಸುವ ಜವಾಬ್ದಾರಿ ಜೊತೆಗೆ ಎಸ್ ಸಿ ಎಸ್ ಟಿ ಸೇರಿದಂತೆ ಹಿಂದುಳಿದ ವರ್ಗದ ಎಲ್ಲರ ಬದುಕನ್ನು ಕಾಪಾಡುವ ನೈತಿಕ ಹೊಣೆಯನ್ನು ನಾನು ಹೊತ್ತಿದ್ದೇನೆ.
- – ನರೇಂದ್ರ ಮೋದಿ
ಕಾಂಗ್ರೆಸ್ ಪಕ್ಷ ನೀಡಿರುವ ಯಾವುದೇ ಗ್ಯಾರೆಂಟಿಗಳು, ಏನು ಪ್ರಯೋಜನವಾಗುವುದಿಲ್ಲ ಜನಸಾಮಾನ್ಯರ ಬದುಕನ್ನು ಕಾಪಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರು ದೇಶವನ್ನು ಕಾಪಾಡುತ್ತಿದ್ದಾರೆ. ಅವರನ್ನು ಉಳಿಸಿ ಬೆಳೆಸಲು ನಾವು ಭಾರತೀಯ ಜನತಾ ಪಕ್ಷವನ್ನು ನರೇಂದ್ರ ಮೋದಿ ಅವರನ್ನು ಬೆಳೆಸಬೇಕು ಬಿಎಸ್ ಯಡಿಯೂರಪ್ಪ
ಗ್ಯಾರಂಟಿಗಳು ಏನು ವರ್ಕ್ ಔಟ್ ಆಗುವುದಿಲ್ಲ. ಯಾರೂ ಅದನ್ನು ನಂಬುವುದಿಲ್ಲ. ಯಾರು ಪುಕ್ಕಟ್ಟೆಯಾಗಿ ಪಡೆಯಲು ಇಷ್ಟಪಡುವುದಿಲ್ಲ. ರಾಷ್ಟ್ರವನ್ನು ಕಾಪಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿಯವರ ತತ್ವವನ್ನು ಒಪ್ಪಿಕೊಳ್ಳುತ್ತಾರೆ. ರಾಜ್ಯದಲ್ಲಿ 28 ಕ್ಷೇತ್ರದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸುತ್ತದೆ. - ಬಿಎಸ್ ಯಡಿಯೂರಪ್ಪ
ಹಿಂದುತ್ವ ಎಂದರೆ ನನ್ನದೇ ಅರ್ಥದಲ್ಲಿ ಬೇರೆ ಮಾತಿದೆ. ಹಿಂದುತ್ವ ಎಂದರೆ ಧರ್ಮವಲ್ಲ, ಜಾತಿ ಅಲ್ಲ, ನಾವು ಹಿಂದೂಗಳು. ನನ್ನ ಪ್ರಕಾರ ಹಿಂದುತ್ವ ಎಂದರೆ ಹಿಂದುಳಿದವರನ್ನು ಮೇಲೆ ತರುವುದು ಅಥವಾ ಮುಂದೆ ತರುವುದು ಎಂದಾಗಿದೆ.
- ಶಿವರಾಜ್ ಕುಮಾರ್ ಕನ್ನಡ ಚಲನಚಿತ್ರ ನಟ
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅತ್ಯಧಿಕ ಬಹುಮತದಿಂದ ಎಲ್ಲೆಡೆ ಗೆಲುವು ಸಾಧಿಸುತ್ತದೆ. ಶಿವಮೊಗ್ಗದಲ್ಲಿ ಬಂಗಾರಪ್ಪ ಪುತ್ರಿ. ನನ್ನ ಸಹೋದರಿ,ಬವಿಶೇಷವಾಗಿ ಈ ಮಣ್ಣಿನ ಮಗಳು ಗೀತಾ ಶಿವರಾಜ್ ಕುಮಾರ್ ಅತ್ಯಧಿಕ ಮತಗಳಿಂದ ಜಯಗಳಿಸುವುದು ಖಚಿತ. ಅವರು ಜಯಗಳಿಸಿದರೇ ನನಗೊಂದು ದೊಡ್ಡ ಶಕ್ತಿ ಸಿಗುತ್ತದೆ. ಅವಕಾಶ ದೊರಕುತ್ತದೆ.
- ಮಧು ಬಂಗಾರಪ್ಪ ಮಾನ್ಯ ಸಚಿವರು
ಕುಟುಂಬ ರಾಜಕಾರಣವನ್ನು ನಾನು ಖಂಡಿತ ಒಪ್ಪುವುದಿಲ್ಲ ನನ್ನನ್ನು ಭಾರತೀಯ ಜನತಾ ಪಕ್ಷದಲ್ಲಿ ಕಡೆಗಣಿಸಿದ್ದಲ್ಲದೆ ಸ್ವಂತ ಅವರಪ್ಪನ ಪಕ್ಷ ಎಂಬಂತೆ ಬಿಎಸ್ ಯಡಿಯೂರಪ್ಪ ಅವರ ಮಕ್ಕಳು ಬಿಜೆಪಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಹಿಂದುತ್ವದ ನೆಲೆಯಲ್ಲಿ ರಾಷ್ಟ್ರಭಕ್ತ ಬಳಗದ ಹೆಸರಿನಲ್ಲಿ, ನಾನು ಚುನಾವಣೆಗೆ ಸ್ಪರ್ಧಿಸಿದ್ದು ಖಂಡಿತ ಗೆಲುತ್ತೇನೆ. ಗೆದ್ದು ಮೋದಿಯವರ ಕೈ ಎತ್ತುತ್ತೇನೆ.
- ಕೆ ಎಸ್ ಈಶ್ವರಪ್ಪ
ಇಡೀ ಕ್ಷೇತ್ರದಾದ್ಯಂತ ಎಲ್ಲೆಡೆ ನನ್ನ ಬಗ್ಗೆ ಹಾಗೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ನಿಲುವುಗಳ ಬಗ್ಗೆ ತುಂಬಾ ವಿಶ್ವಾಸ ಪ್ರೀತಿ ವ್ಯಕ್ತವಾಗಿದೆ. ಮನೆಮಗಳಂತೆ ನನ್ನನ್ನು ಗೌರವಿಸಿದ್ದಾರೆ. ನಾನು ಈ ಬಾರಿ ಚುನಾವಣೆಯಲ್ಲಿ ಖಂಡಿತ ಗೆಲುವು ಸಾಧಿಸುತ್ತೇನೆ. ವಿರುದ್ಧ ಸ್ಪರ್ಧಿಸಿರುವ ಬಗ್ಗೆ ಅವರ ಕಾಮೆಂಟ್ ಗಳ ಬಗ್ಗೆ ಮಾತನಾಡುವುದಿಲ್ಲ. ಗೆಲ್ಲುವುದು ಶತಸಿದ್ಧ.
- ಗೀತಾ ಶಿವರಾಜ್ ಕುಮಾರ್
ಅಭಿವೃದ್ಧಿ ವಿಚಾರದಲ್ಲಿ ಶಿವಮೊಗ್ಗಕ್ಕೆ ಏನೇನು ಆಯಿತು. ಏನೇನು ಮಾಡಬೇಕು. ಏನು ಮಾಡಿದ್ದೇನೆ ಎಂಬುದನ್ನು ಮತದಾರರು ಅರಿತುಕೊಂಡಿದ್ದಾರೆ. ಮೋದಿ ಅವರ ಮೂಲಕ ರಾಷ್ಟ್ರವನ್ನು ಕಾಪಾಡುವ ನಿಟ್ಟಿನಲ್ಲಿ ಮತದಾರರು ನನಗೆ ಬಾರೀ ಅಂತರದ ಗೆಲುವು ತಂದುಕೊಡುತ್ತಾರೆ.
- ಬಿ ವೈ ರಾಘವೇಂದ್ರ
ಕುಟುಂಬ ರಾಜಕಾರಣವನ್ನು ಜಾತಿ ರಾಜಕಾರಣವನ್ನು ಪಕ್ಕ ವಿರೋಧಿಸುತ್ತಿರುವ ನನ್ನ ನಿಲುವು ತುಂಬಾ ಸ್ಪಷ್ಟವಾಗಿದೆ ಅಧಿಕಾರಿಯಾಗಿ ಶಿವಮೊಗ್ಗ ನೆಲೆಯಲ್ಲಿ ಆಸ್ತಿಕ ಬಳಿಸಿರುವ ಭ್ರಷ್ಟರನ್ನು ನಾನು ಕಂಡಿದ್ದೇನೆ. ನನಗೆ ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಮನೆಗೊಂದು ಮತ ಎಂಬ ವಾತಾವರಣ ಸೃಷ್ಟಿಯಾಗಿದೆ. ದಯಮಾಡಿ ಭ್ರಷ್ಟರಿಗೆ ಪಾಠ ಕಲಿಸಲು ಅಪಾರ ಆಸ್ತಿ ಮಾಡಿದ ಕುಟುಂಬ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಲು ನನಗೆ ಮತ ನೀಡಿ
- ಶಿವರುದ್ರಯ್ಯ ಸ್ವಾಮಿ