Site icon TUNGATARANGA

ಯಾರು ಹಿತವರು ಈ ಮೂವರೊಳಗೆ, ಶಿವಮೊಗ್ಗದಲ್ಲಿ ಅಭಿವೃದ್ದಿನಾ? ಬಡವರ ಬದುಕಾ? ಹಿಂದೂನಾ? ಮತದಾರರೇ ಮರೆಯದೇ ಮತದಾನ ಮಾಡಿ, ತುಂಗಾತರಂಗ ಸ್ಪೆಷಲ್ ಸ್ಟೋರಿ ಓದಿ


ತುಂಗಾತರಂಗ ಸ್ಪೆಷಲ್ ಸ್ಟೋರಿ
ಗಜೇಂದ್ರ ಸ್ವಾಮಿ,
ಶಿವಮೊಗ್ಗ, ಮೇ.05:
ಬರುವ ಮಂಗಳವಾರ ಮೇ ಏಳರಂದು ಶಿವಮೊಗ್ಗ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನ ನಡೆಯಲಿದೆ.
ಶಿವಮೊಗ್ಗದಲ್ಲಿ ಅತಿ ಹೆಚ್ಚು ಸ್ಪರ್ಧಾಳಗಳು ಅಂಕಣದಲ್ಲಿದ್ದು ವಿಶೇಷವಾಗಿ ಕಾಂಗ್ರೆಸ್ ನಿಂದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರಿ, ದೊಡ್ಮನೆ ಸೊಸೆ ಗೀತಾ ಶಿವರಾಜ್ ಕುಮಾರ್, ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ, ಬಿಜೆಪಿಯಿಂದ ಕುಟುಂಬ ರಾಜಕಾರಣವನ್ನು ದಿಕ್ಕರಿಸಿ ಬಿಜೆಪಿಯಲ್ಲಿ ಅತ್ಯಂತ ನಿಷ್ಟೆಯಿಂದ ಇದ್ದ ಹಿಂದೂ ಹುಲಿ ಎಂಬ ಹೆಸರನ್ನು ಹೊಂದಿರುವ ರಾಷ್ಟ್ರಭಕ್ತ ಬಳಗದ ಕೆ ಎಸ್ ಈಶ್ವರಪ್ಪ ಈ ಬಾರಿಯ ಅಂಕಣದಲ್ಲಿ ಬಾರಿ ಪೈಪೋಟಿ ನೀಡುತ್ತಿದ್ದಾರೆ.


ಶಿವಮೊಗ್ಗ ಲೋಕಸಭಾ ಚುನಾವಣೆಯು ಅತ್ಯಂತ ವಿಶೇಷವಾಗಿ ಮತದಾರ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಅವರು ಯೋಚಿಸುತ್ತಾರೆ. ಸಿಕ್ಕರೆ ಸಿಗಲಿ ನೋಡೋಣ ಎಂದು ಬುದ್ಧಿವಂತಿಕೆಯಿಂದ ಮತ ಹಾಕುವ ಕಾಯಕದಲ್ಲಿ ಮಗ್ನನಾಗಿದ್ದಾನೆ ಎಂದು ಬಹುತೇಕ ಕಡೆ ಅನಿಸುತ್ತಿರುವುದು ಕಂಡುಬರುತ್ತದೆ.
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸರಿಸುಮಾರು 17.75 ಲಕ್ಷ ಮತದಾರವಿದ್ದು ಮಹಿಳೆಯರ ಪ್ರಮಾಣ ಪುರುಷರಿಗಿಂತ ಹೆಚ್ಚಾಗಿರುವುದು ಅತ್ಯಂತ ಗಮನಿಯ ಹಾಗೂ ಗಂಭೀರ.


ಎಲ್ಲಾ ರಾಜಕೀಯ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳ ಬಳಿ ಸಾಕಷ್ಟು ಜನ ಈಗ ಸೇರ್ತಿದ್ದಾರೆ. ಚುನಾವಣೆಯ ಕಾವು ರಂಗೇರುವಂತೆ ಮಾಡಿದ್ದಾರೆ. ಇಂದು ಸಂಜೆ 5:00 ಒಳಗೆ ಇಡೀ ವಾತಾವರಣ ಹೊಸ ತಿರುವು ಪಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಅಂತಿಮ ಕ್ಷಣಗಣನೆ ಆರಂಭಗೊಳ್ಳಲಿದೆ.
ಒಂದೆಡೆ ಗೀತಾ ಶಿವರಾಜಕುಮಾರ್ ಪರವಾಗಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಘಟಾನುಘಟಿಗಳ ತಂಡ ವೈಯುಕ್ತಿಕ ನೆಲೆಗಟ್ಟಿನಲ್ಲಿ ಚಿತ್ರರಂಗದ ತಂಡ ಮತ್ತೊಂದು ವಿಶೇಷವೆಂದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಗ್ಯಾರಂಟಿ ಅನುಷ್ಠಾನಗೊಳಿಸಿ ಕರ್ನಾಟಕ ಬಡವರ ಮನೆ ಮಾತಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಅಪಾರ ಹಿರಿಯರು ಇಡೀ ಕ್ಷೇತ್ರದ ಅತ್ಯಂತ ಪ್ರಚಾರ ಮಾಡಿದ್ದಾರೆ.
ಅಂತೆ ಬಿಜೆಪಿಯ ರಾಷ್ಟ್ರ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ, ನಡ್ದಾ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬೃಹತ್ ತಂಡ ಸಾಕಷ್ಟು ಪ್ರಚಾರ ಮಾಡಿದೆ.


ಒಟ್ಟಾರೆಯಾಗಿ ಹಾಲಿ ಶಾಸಕರು ಶಾಸಕರು ಹಾಗೂ ಬಿಜೆಪಿಯ ಒಟ್ಟಾರೆ ತಂಡ ಅತ್ಯಂತ ಉತ್ತಮವಾದ ಪ್ರಚಾರವನ್ನು ಮಾಡುತ್ತಿದೆ.
ಈ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದರೂ ಪಕ್ಷ ನಿಷ್ಠೆಯಿಂದ ಭಾರತೀಯ ಜನತಾ ಪಕ್ಷದಲ್ಲಿ ಉಳಿದುಕೊಂಡಿದ್ದ ಪಕ್ಷದ ಹಿರಿಯರ ಮಾತನ್ನು ತೆಗೆದು ಹಾಕದ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಕಟ್ಟಲು ಕಾರಣಕರ್ತರಾದ ಕೆಎಸ್ ಈಶ್ವರಪ್ಪ ಅವರು ಯಾರ ಜೊತೆ ಪ್ರಚಾರ ಎಂದು ಯೋಚಿಸದೆ ಇಡೀ ಕ್ಷೇತ್ರದಲ್ಲಿ ಹಗಲು ರಾತ್ರಿ ಎನ್ನದೆ ಒಂಟಿಯಾಗಿ ಹಿಂದುತ್ವದ ಹೆಸರಿನಲ್ಲಿ, ಕುಟುಂಬ ರಾಜಕಾರಣದ ವಿರುದ್ಧವಾಗಿ ಹೊಸ ಅಲೆ ಸೂಚಿಸಿದ್ದಾರೆ.


ಬಿಜೆಪಿಯವರು ಅಭಿವೃದ್ಧಿಯ ಹೆಸರು ಹೇಳಲು ಮುಂದಾಗಿದ್ದರೆ, ಕಾಂಗ್ರೆಸ್ ನವರು ಬಡವರ, ದೀನ ದಲಿತರ, ಹಿಂದುಳಿದವರ ಅಭಿವೃದ್ಧಿಯೇ ನಮ್ಮ ಉದ್ದೇಶ. ವಿಶ್ವಮಾನವ ಕಲ್ಪನೆ ನಮ್ಮ ದೇಯೋದ್ದೇಶ ಎಂದು ಹೇಳುತ್ತಾ ಇಡಿ ಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸನ್ನು ಮತವಾಗಿಸಲು ಕೇಳಿದ್ದಾರೆ.
ಮತದಾರ ಮೂರ್ಖನಲ್ಲ. ಮತದಾನ ಮಾಡುತ್ತಾನೆ ಯಾರು ಈ ಮೂವರೊಳಗೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಅಹಂಕಾರವಿಲ್ಲದೆ, ದೊಡ್ಡಸ್ತಿಕೆಯಿಲ್ಲದೇ, ಸರಳ ಸಂಪನ್ನರನ್ನು ಗೆಲ್ಲಿಸುತ್ತಾರಾ? ದೇಶ ಕಾಪಾಡುತ್ತಾರೆ ಎಂಬ ಭರವಸೆಗಳೊಂದಿಗೆ ಅಂತಹವರನ್ನು ಬೆಂಬಲಿಸುತ್ತಾರೆ.
ನಮ್ಮ ಬದುಕು ಸುಲಭವಾಗಿದೆ. ಸವಾಲಿನ ಬದುಕಲ್ಲಿ ಸಂಕಷ್ಟದ ಹಾದಿಯಲ್ಲಿ ಆ ಪಕ್ಷ ನೀಡಿದ ಗ್ಯಾರಂಟಿಗಳು ಲಾಭ ಮಾಡಿವೆ ಎಂದು ಯೋಚಿಸುತ್ತಾ ಮತ ಹಾಕುತ್ತಾರಾ? ಯಾರು ಹೇಳಲು ಸಾಧ್ಯವಾಗುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರಂಟಿಗಳು ಸದ್ದು ಮಾಡದೆ ಅನುಷ್ಠಾನವಾಗುವ ಮುನ್ನವೇ ಕೆಲಸ ಮಾಡಿದ್ದು ಅಂದಿನ ಪಲಿತಾಂಶವನ್ನು ಬಿಂಬಿಸಿತ್ತು.
ಇದು ರಾಷ್ಟ್ರಮಟ್ಟದ ಚುನಾವಣೆ ಎಂದು ಬಿಜೆಪಿ ಹೇಳುತ್ತಿದ್ದರೂ ಸಹ ಮಹಿಳೆಯರ ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿರುವ ಮಹಿಳೆಯರ ಮತಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತಗಳು ಎತ್ತ ಸಾಗುತ್ತಿವೆ.


ಭಾರತೀಯ ಜನತಾ ಪಕ್ಷಕ್ಕೆ ಈಶ್ವರಪ್ಪ ಅವರ ಹಿಂದುತ್ವದ ಹೊಡೆತ ಮುಳ್ಬಾಗಲಿದೆಯಾ? ಅಥವಾ ಹಿಂದುಳಿದವರ ಮತ್ತು ದಲಿತರ ಮತಗಳು ಕಾಂಗ್ರೆಸ್ ಗೆ ಕಗ್ಗಂಟಾಗಲಿದೆಯೇ? ಅಲ್ಪಸಂಖ್ಯಾತರ ಮತಗಳ ಆಸರೆಯಲ್ಲಿ ಕಾಂಗ್ರೆಸ್ ತನ್ನ ದಡವನ್ನು ಸೇರುತ್ತದೆಯೇ?
ಯಾವುದಕ್ಕೂ ನಾಡಿದ್ದು ಅಂದರೆ ಬರುವ ಮಂಗಳವಾರ ಮತದಾರ ಗುಟ್ಟು ಬರೆದುಕೊಡಲಿದ್ದಾನೆ. ಬರುವ ಜೂನ್ ನಾಲ್ಕರಂದು ಈ ಗುಟ್ಟು ರಟ್ಟಾಗಲಿದೆ. ರಾಷ್ಟ್ರವಾಪಿ ನಡೆಯುವ ಚುನಾವಣೆಯ ಅಂತಿಮ ಹಂತದ ನಂತರ ರಾಷ್ಟ್ರಮಟ್ಟದಲ್ಲಿ ಹೊಸ ಬಗೆಯ ವಾತಾವರಣ ಮೂಡಲಿದೆಯೇ? ಕರ್ನಾಟಕ ಹೊಸ ಕಣ್ಣಲಿ ಮಿಂಚಲಿದೆಯೇ? ರಾಷ್ಟ್ರ ವಿಶ್ವದಲ್ಲಿ ಪ್ರಪ್ರಥಮ ಸ್ಥಾನಕ್ಕೆ ಹೋಗುವ ನಿಟ್ಟಿನಲ್ಲಿ ಪ್ರಯತ್ನಗಳಾಗಲಿವೆಯೇ? ಅಥವಾ ಹಿಂದುತ್ವ ಶಿವಮೊಗ್ಗದಲ್ಲಿ ಯಶಸ್ವಿಯಾಗಿ ರಾಷ್ಟ್ರಕ್ಕೊಂದು ಮಾಹಿತಿಯನ್ನು ನೀಡಲಿದೆಯೇ?
ಈ ಎಲ್ಲಾ ತಾತ್ವಿಕ ಲೆಕ್ಕಾಚಾರಗಳ ನಡುವೆ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮರೆಯದೆ ತಮ್ಮ ಪವಿತ್ರವಾದ ಮತವನ್ನು ಸೂಕ್ತ ಹಾಗೂ ಸಮರ್ಥ ಅಭ್ಯರ್ಥಿಗೆ ಹಾಕುವ ಮೂಲಕ ನಾವು ದೇಶದ ಪ್ರಜೆ ಎಂಬುದನ್ನು ಸಾಬೀತುಪಡಿಸಬೇಕು. ಸಮರ್ಥರು ಯಾರು? ಇಲ್ಲ ಎನಿಸಿದರೆ ನಿಮಗೆ ನೋಟಾಗೆ ಮತ ಹಾಕಲು ಅವಕಾಶವಿದೆ. ಅಲ್ಲಿಯಾದರೂ ಮತ ಹಾಕಿ ನಿಮ್ಮ ಅಸ್ತಿತ್ವವನ್ನು ನಿಮ್ಮ ಗೌರವವನ್ನು ನಿಮ್ಮತನವನ್ನು ಉಳಿಸಿಕೊಳ್ಳಿ ಎಂಬುದು ತುಂಗಾತರಂಗ ದಿನಪತ್ರಿಕೆಯ ಪ್ರೀತಿಯ ಮನವಿ.

Exit mobile version