Site icon TUNGATARANGA

ಶಿವಮೊಗ್ಗ/ ಇಡೀ ತಮಿಳು ಸಮಾಜ ಈಶ್ವರಪ್ಪ ಪರ ನಿಂತಿದೆ- ತಮಿಳು ಒಕ್ಕೂಟದ ಎಸ್. ಮಂಜುನಾಥ್ ಇಂಗಿತ, ಭೂಪಾಲ್ ಸೇರಿದಂತೆ ಮುಖಂಡರ ಸಾಥ್

ಶಿವಮೊಗ್ಗ, ಏ.4:

ತಮಿಳು ಸಮಾಜದ ಎಲ್ಲಾ ಸಮುದಾಯಗಳಿಗೆ ವೈಯುಕ್ತಿಕ ಹಾಗೂ ಸರ್ಕಾರದಿಂದ ನೆರವು ಕೊಡಿಸಿದ ಮಾಜಿ ಉಪಮುಖ್ಯಮಂತ್ರಿ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಕೆ.ಎಸ್.. ಈಶ್ವರಪ್ಪ ಅವರಿಗೆ ನಾವು ಬೆಂಬಲ ನೀಡುವುದಾಗಿ ತಮಿಳು ಸಮುದಾಯಗಳ ಒಕ್ಕೊಟದ ಪ್ರಮುಖರೂ ಆದ ಎಸ್. ಮಂಜುನಾಥ್ ಹೇಳಿದರು.


ಅವರಿಂದು ಬೆಳಿಗ್ಗೆ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ತಮಿಳು ಸಮಾಜದ ಎಲ್ಲಾ ಸಮುದಾಯಗಳಿಗೆ ವೈಯುಕ್ತಿಕವಾಗಿ ಹಾಗೂ ಸರ್ಕಾರದಿಂದ ಅನುದಾನವನ್ನು ಕೊಡಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಕಾರಣಕರ್ತರಾದ ಮಾಜಿ ಉಪಮುಖ್ಯಮಂತ್ರಿ ಕೆ ಎಸ್. ಈಶ್ವರಪ್ಪ ಅವರಿಗೆ ಇಡೀ ತಮಿಳು ಸಮುದಾಯ ಒಟ್ಟಾರೆಯಾಗಿ ಬೆಂಬಲಿಸಲಿದೆ ಎಂದು ಹೇಳಿದರು.

ಓಂ ಶಕ್ತಿಯ ಬಗ್ಗೆ ಇಲ್ಲಸಲ್ಲದ ಮಾತನಾಡಿದ ಎಂಪಿ ಸಂಪತ್ ಹಾಗೂ ಡಿ ರಾಜಶೇಖರ್ ಅವರಿಗೆ ನಿಜವಾದ ವಿಷಯವೇ ಗೊತ್ತಿಲ್ಲ ಓಂ ಶಕ್ತಿ ಯಾತ್ರೆಯನ್ನು ನಿರಂತರವಾಗಿ ಸುಮಾರು ಎರಡು ಕೋಟಿ ಅಷ್ಟು ಹಣ ಖರ್ಚು ಮಾಡಿ ವ್ಯವಸ್ಥಿತವಾಗಿ ಮಾಡುತ್ತಿರುವ ಅತ್ಯಂತ ಪ್ರಮುಖರಲ್ಲಿ ಒಬ್ಬರಾದ ಕೆ.ಎಸ್ ಈಶ್ವರಪ್ಪ ಅವರ ಕುಟುಂಬದ ಬಗ್ಗೆ ಅನಗತ್ಯವಾಗಿ ಮಾತನಾಡಿರುವುದು ಸರಿಯಲ್ಲ. ಕ್ಷಮೆ ಕೇಳಬೇಕು.
ಪ್ರತಿ ವರ್ಷಕ್ಕೊಮ್ಮೆ ಚುನಾವಣೆಯ ಸಂದರ್ಭದಲ್ಲಿ ಪಕ್ಷ ಬದಲಿಸುವ ಬಣ್ಣ ಬದಲಿಸುವ ಸಂಪತ್ ಹಾಗೂ ರಾಜಶೇಖರ್ ಅವರು ಈ ಬಾರಿ ಬಿಜೆಪಿಗೆ ಮನೆ ಹಾಕಿದ್ದಾರೆ ಹಿಂದೆ ಇದ್ದ ಕಾಂಗ್ರೆಸ್ ಜೆಡಿಎಸ್ ಪಕ್ಷದ ಕಥೆ ಏನು?, ಇವರು ಹೇಳಿದರು ಎಂದಾಕ್ಷಣ ತಮಿಳು ಸಮಾಜ ದಡ್ಡತನವನ್ನು ಕೋರುವುದಿಲ್ಲ. ಸಮಾಜದ ಎಲ್ಲ ಪ್ರಮುಖರು ಮತದಾರರು ಈಗ ಬುದ್ಧಿವಂತರಾಗಿದ್ದಾರೆ. ಹಾಗಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದ ಈಶ್ವರಪ್ಪರನ್ನು ಗೆಲ್ಲಿಸಲಿದ್ದಾರೆ
-ಎಂ.ಭೂಪಾಲ್ ತಮಿಳು ಒಕ್ಕೂಟದ ಪ್ರಮುಖರು


ಸಮಾಜದ ಆಗಮುಡಿ, ಮೊದಲಿಯಾರ್, ಗೌಂಡರ್, ಆದಿ ದ್ರಾವಿಡ, ಯಾದವ ಕೋಣರ್ ಸೇರಿದಂತೆ ಸಮುದಾಯದ ಎಲ್ಲಾ ವರ್ಗಗಳಿಗೆ ಸಾಕಷ್ಟು ನೆರವು ನೀಡುತ್ತಾ ತಮಿಳು ಸಮಾಜವನ್ನು ಅತ್ಯಂತ ಪ್ರೀತಿಯಿಂದ ಗೌರವಿಸಿದ ಕೆ ಎಸ್ ಈಶ್ವರಪ್ಪ ಅವರನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸಲು ಕಾರಣಕರ್ತರಾಗಲು ನಾವುಗಳು ಮುಂದಾಗಿದ್ದೇವೆ ಎಂದರು.
ತಮಿಳು ಸಮಾಜದ ಮೂಲದೇವರಾದ ಕೆಆರ್ ಪುರಂ ನ ಶ್ರೀರಾಮ ದೇವಾಲಯದ ಅಭಿವೃದ್ಧಿ ಸೇರಿದಂತೆ ಆಗಮುಡಿ ಸಮಾಜಕ್ಕೆ ಸರ್ಕಾರದಿಂದ ಸಮುದಾಯ ಭವನ ನಿರ್ಮಾಣಕ್ಕಾಗಿ 50 ಲಕ್ಷ ರೂಪಾಯಿ ಕೊಡಿಸಿದ ಈಶ್ವರಪ್ಪ ಅವರು ಗೌಂಡರ್ ಸಮುದಾಯ ದ ಸಮುದಾಯ ಭವನಕ್ಕಾಗಿ 10 ಲಕ್ಷ ರೂಪಾಯಿ ವೈಯಕ್ತಿಕವಾಗಿ ಹಾಗೂ 25 ಲಕ್ಷ ರೂಪಾಯಿ ಸರ್ಕಾರಿ ಅನುದಾನವನ್ನು ಅವರು ಕೊಡಿಸಿದ್ದಾರೆಂದು ಮಂಜುನಾಥ್ ಹೇಳಿದರು.


ಅಂತೆಯೇ ಶಿವಮೊಗ್ಗ ಜೆ ಎಚ್ ಪಟೇಲ್ ಬಡಾವಣೆಯಲ್ಲಿರುವ ತಮಿಳು ತಾಯ್ ಸಂಘದ ಸುಸಜ್ಜಿತ ಕಲ್ಯಾಣ ಮಂದಿರ ನಿರ್ಮಾಣಕ್ಕಾಗಿ ಕೆಎಸ್ ಈಶ್ವರಪ್ಪ ಅವರು ವೈಯಕ್ತಿಕವಾಗಿ 25 ಲಕ್ಷ ರೂಪಾಯಿಗಳ ಸ್ವಂತ ದೇಣಿಗೆಯನ್ನು ನೀಡಿದ್ದು ಇಡೀ ತಮಿಳು ಸಮುದಾಯವನ್ನು ಗೌರವಿಸುವಂತೆ ಮಾಡಿದ್ದಾರೆ ಎಂದು ಮಂಜುನಾಥ್ ಹೇಳಿದರು.
ಹಾಗೆಯೇ ಶ್ರೀರಾಮ ದೇವಾಲಯಕ್ಕೆ ಅವರು ಸ್ವಂತ ಹತ್ತು ಲಕ್ಷ ರೂಪಾಯಿ ಖರ್ಚು ಮಾಡಿದ್ದಲ್ಲದೆ ಸರ್ಕಾರದಿಂದ 15 ಲಕ್ಷ ರೂಪಾಯಿ ಕೊಡಿಸಿದ್ದು, ವಿಶೇಷವೇ ಹೌದು.
ನಿರಂತರವಾಗಿ ಓಂ ಶಕ್ತಿ ಯಾತ್ರೆಯನ್ನು ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಸುತ್ತಾ ಬಂದಿರುವ ಈಶ್ವರಪ್ಪ ಅವರು ಪ್ರತಿವರ್ಷ 120 ಬಸ್ ಗಳನ್ನು ಕಳುಹಿಸಿದ್ದಾರೆ. ಹೋಗಿ ಬರುವ ಭಕ್ತಾದಿಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡಿದ್ದಾರೆ. ಈ ವರ್ಷ ಸಂಸದ ರಾಘವೇಂದ್ರ ಅವರು ಸಹ ತಮ್ಮ ಸಣ್ಣ ಸಹಾಯವನ್ನು ಮಾಡಿದ್ದಾರೆ ಅಷ್ಟೆ ಎಂದು ಒಕ್ಕೂಟದ ಪ್ರಮುಖರು ತಿಳಿಸಿದರು.
ತಮಿಳು ಸಮಾಜದ ಅಭಿವೃದ್ಧಿಗಾಗಿ ಸುಮಾರು 35ಕ್ಕೂ ಹೆಚ್ಚು ವರ್ಷಗಳಿಂದ ನಿರಂತರವಾಗಿ ಆತ್ಮೀಯತೆ ಮೂಲಕ ಸರ್ಕಾರ ಹಾಗೂ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುವ ಮೂಲಕ ಇಡೀ ಸಮಾಜದ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಈಶ್ವರಪ್ಪ ಅವರ ಋಣವನ್ನು ಇಡೀ ಸಮಾಜ ತೀರಿಸಬೇಕಾಗಿದೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅವರಿಗೆ ಈ ಬಾರಿ ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದರು.


ಕೆಎಸ್ ಈಶ್ವರಪ್ಪ ಅವರಿಗೆ ತಮಿಳು ಸಮಾಜದ ತಮಿಳು ದರ್ಪಣಿ ಮಂತ್ರ ಸಮಾಜ, ಶ್ರೀ ರಾಮ ದೇವಾಲಯ ಸಮಿತಿ ಪದಾಧಿಕಾರಿಗಳು, ತಮಿಳ್ ತಾಯಿ ಸಂಘದ ಪದಾಧಿಕಾರಿಗಳು, ಆದಿ ದ್ರಾವಿಡ ಸೊಸೈಟಿ ಜವಳಿ ವರ್ತಕರ ಸಂಘ ಸೇರಿದಂತೆ ತಮಿಳು ಸಮಾಜದ ಎಲ್ಲ ಪ್ರಮುಖ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಈಶ್ವರಪ್ಪ ಅವರನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಲು ನಿರ್ಧರಿಸಿದ್ದಾರೆ ಅವರು ಅತ್ಯಧಿಕ ಮತಗಳ ಅಂತರದಿಂದ ಜಯಗಳಿಸುತ್ತಾರೆ ಎಂದು ಹೇಳಿದರು.


ಸುದ್ದಿ ಗೋಷ್ಟಿಯಲ್ಲಿ ಆಗಮುಡಿ ಸಮಾಜದ ಅಧ್ಯಕ್ಷ ಎಂ. ಭೂಪಾಲ್, ಪ್ರಮುಖರಾದ ಜೆ. ರಾಜೇಂದ್ರನ್, ಓಂ ಶಕ್ತಿ ಟ್ರಸ್ಟ್ ನ ಶ್ರೀನಿವಾಸ್, ಗೌಂಡರ್ ತಿರುವಳ್ಳವರ್ ಸೊಸೈಟಿ ಕುಮರೇಶ್, ಎನ್ ಶೇಖರ್, ಸೊಸೈಟಿ ಉಪಾಧ್ಯಕ್ಷ ಪ್ರಭಾಕರ್, ವಾಸಣ್ಣ, ಬಟ್ಟೆ ಕುಮಾರಣ್ಣ, ಪಿ ಆರ್ಮುಗಂ, ಗುಡ್ಡೆಕಲ್ ದೇವಸ್ಥಾನ ಟ್ರಸ್ಟ್ ನ ಸಿ. ರವಿ ಸೇರಿದಂತೆ ಎಲ್ಲ ಸಮುದಾಯಗಳ ಪ್ರಮುಖರು ಉಪಸ್ಥಿತರಿದ್ದರು.


Exit mobile version