Site icon TUNGATARANGA

ದಲಿತರಿಗಾಗಿ ಮೀಸಲಿಟ್ಟ 25 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗೆ ಬಳಸಿ ಕಾಂಗ್ರೇಸ್ ಸರ್ಕಾರ ದಲಿತರ ಹಕ್ಕನ್ನು ಕಿತ್ತುಕೊಂಡಿದೆ :ಅರೋಪ

ಶಿವಮೊಗ್ಗ,ಮೇ4: ದಲಿತ ಸಮುದಾಯಗಳನ್ನು ಕೇಂದ್ರಿಕರಿಸಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಆದರೆ ದಲಿತರಿಗಾಗಿಯೇ ಬಜೆಟ್‍ನಲ್ಲಿ ಮೀಸಲಿಟ್ಟ 25 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗೆ ಬಳಸಿ ಸರ್ಕಾರ ದಲಿತರ ಹಕ್ಕನ್ನು ಕಿತ್ತುಕೊಂಡಿದೆ ಚಾಮರಾಜನಗರ  ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಆರೋಪಿಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 4 ದಿನಗಳಿಂದ ಜಿಲ್ಲೆಯ ಸೊರಬ, ಸಾಗರ, ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯ ದಲಿತ ಸಮುದಾಯ ಇರುವ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದೇವೆ.  ಎಲ್ಲಾ ಕಡೆ ಸಂಸದ ಬಿ.ವೈ.ರಾಘವೇಂದ್ರ ಪರ ಒಲವಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕೆಂದ ಆಶಯವನ್ನು ದಲಿತ ಸಮುದಾಯ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್ಸ್‍ನ ಪೊಳ್ಳು ಗ್ಯಾರಂಟಿಗಳ ಬಗ್ಗೆ ಸಮುದಾಯ ಅರ್ಥೈಸಿಕೊಂಡಿದೆ ಎಂದರು.

ಕನ್ನಡಿ ಪ್ರಿಂಟ್ ತೋರಿಸಿ ದಲಿತರ ಉದ್ದಾರ ಮಾಡಿದ್ದೇವೆ ಎಂಬ ಕಾಂಗ್ರೆಸ್ ಕುತಂತ್ರವನ್ನು ದಲಿತರು ಅರ್ಥ ಮಾಡಿಕೊಂಡಿದ್ದಾರೆ. ಅಂಬೇಡ್ಕರ್ ಅವರನ್ನು ಸೋಲಿಸಿ ಜೀವನ ಪರಿಯಂತ ಅವರನ್ನು ಅವಮಾನಿಸಿದ ಕಾಂಗ್ರೆಸ್ ಪಕ್ಷದ ನಿಲುವನ್ನು ಅಸಮುದಾಯ ಅರ್ಥ ಮಾಡಿಕೊಂಡಿದೆ. ಅಂಬೇಡ್ಕರ್ ಅವರು ಕಾಂಗ್ರೆಸ್ ಉರಿಯುವ ಮನೆಯೆಂದು ಆ ಕಾಲದಲ್ಲಿಯೇ ಹೇಳಿದ್ದರು. ಇಂದಿರಗಾಂಧಿ ಕಾಲದಲ್ಲಿ ಶೇ.80ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದರು. ಈಗ ರಾಜ್ಯದ ಮುಖ್ಯಮಂತ್ರಿಗಳು 4 ಕೋಟಿ 29 ಲಕ್ಷ ಜನರಿಗೆ ಅನ್ನಭಾಗ್ಯ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದು, ಹಾಗಾದರೆ ರಾಜ್ಯ ಎಷ್ಟು ಶೇ. ಬಡತನ ರೇಖೆಗಿಂತ ಕೆಳಗಿದೆ ಎಂದು ಅವರೇ ಹೇಳಬೇಕು.

ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂದು ಸುಳ್ಳಿನ ಕಂತೆ ಹೇಳುತ್ತಾ ದಲಿತರಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ಆಡಳಿತವಧಿಯಲ್ಲಿ ಅವರ ನಾಯಕರೇ  ಸಂವಿಧಾನವನ್ನು 150ಕ್ಕೂ ಹೆಚ್ಚು ಬಾರಿ ತಿದ್ದುಪಡಿ ಮಾಡಿದ್ದಾರೆ. ದಲಿತರ ಹಕ್ಕನ್ನು ಕಿತ್ತುಕೊಳ್ಳುವ ತಂತ್ರಗಾರಿಕೆ ಮಾಡಿದ್ದಾರೆ ಎಂದರು.

2045ರಲ್ಲಿ  ವಿಕಸಿತ ಭಾರತದ ಕಲ್ಪನೆಯನ್ನು ಒತ್ತು ವಿಶ್ವದಲ್ಲೇ 3ನೇ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯನ್ನು ದಲಿತ ಸಮುದಾಯ ಗುರುತಿಸಿದೆ. ಉಜಾಲ ಯೋಜನೆಯಡಿ ಗ್ಯಾಸ್ ಸಿಲಿಂಡರ್, ಜಲ್‍ಜೀವನ್ ಮಿಷನ್ ಯೋಜನೆಯಡಿ ಗ್ರಾಮ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು,

ಗರ್ಭೀಣಿ ಮಹಿಳೆಯರಿಗೆ ಪೌಷ್ಠಿಕ ಆಹಾರವನ್ನು ಒದಗಿಸಿದ ಮೋದಿ ಸರ್ಕಾರ ಮತ್ತೇ ದೇಶದಲ್ಲಿ ಅಧಿಕಾರ ಹಿಡಿಯಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ 8 ತಾಲ್ಲೂಕುಗಳಲ್ಲಿ ಬಿಜೆಪಿಯ ಹಿಡಿತವಿದ್ದು, ಜೆಡಿಎಸ್ ಬೆಂಬಲವು ಇರುವುದರಿಂದ ಸಂಸದ ಬಿ.ವೈ.ರಾಘವೇಂದ್ರ 3 ಲಕ್ಷಕ್ಕೂ ಅಧಿಕ ಮತಗಳ ಗೆಲುವು ಸಾಧಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಗುರುಪಾದ ಸ್ವಾಮಿ, ಡಾ.ರೇವಣ್ಣ, ವಿಜಯೇಂದ್ರ, ಪ್ರಕಾಶ್, ಸುರೇಶ್, ಪರಶುರಾಮ್, ರವಿಕುಮಾರ್, ಮಹೇಶ್, ಎನ್.ಎಸ್.ರಾಜೇಂದ್ರ, ಮುರುಗೇಶ್, ನಾಗೇಂದ್ರ ಮತ್ತಿತರರಿದ್ದರು.

ó

Exit mobile version