Site icon TUNGATARANGA

ಆನೆ ತುಳಿತಕ್ಕೆ ಒಳಗಾಗಿರುವ ವ್ಯಕ್ತಿಯ ಕುಟುಂಬಕ್ಕೆ ತಕ್ಷಣ 15 ಲಕ್ಷ ಪರಿಹಾರ ನೀಡಿ: ಹರತಾಳು ಹಾಲಪ್ಪ ಸರ್ಕಾರಕ್ಕೆ ಆಗ್ರಹ


ಹೊಸನಗರ: ಶುಕ್ರವಾರ ಬೆಳಿಗ್ಗೆ ದರಗೆಲೆ ತರಲು ಕಾಡಿಗೆ ತೆರಳಿದ ರೈತ ತಿಮ್ಮಪ್ಪ ಎಂಬ ವ್ಯಕ್ತಿಯ ಮೇಲೆ ಆನೆ ದಾಳಿಯಾಗಿದ್ದು ಕರ್ನಾಟಕದ ಕಾಂಗ್ರೇಸ್ ಸರ್ಕಾರ ಯಾವುದೇ ಸಬೂಬು ಹೇಳದೇ ೧೫ಲಕ್ಷ ಪರಿಹಾರ ನೀಡಬೇಕೆಂದು ಸಾಗರ-ಹೊಸನಗರ ಮಾಜೀ ಶಾಸಕ ಹರತಾಳು ಹಾಲಪ್ಪನವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಹೊಸನಗರದ ಬಿಜೆಪಿ ಕಛೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು.
ತಿಮ್ಮಪ್ಪನವರಿಗೆ ೧೫ಲಕ್ಷ ಪರಿಹಾರ ನೀಡಲು ನೀತಿ ಸಂಹಿತೆ ಅಡ್ಡ ಬರುತ್ತದೆ ಎಂದು ಹೇಳಲಾಗುತ್ತಿದ್ದು ಪರಿಹಾರದ ಹಣ ನೀಡಲು ಯಾವುದೇ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಆದರೆ ರಾಜಕೀಯ ನಾಯಕರು ಚಕ್ ವಿತರಿಸಲು ಮಾತ್ರ ನೀತಿ ಸಂಹಿತೆ ಅಡ್ಡಿಯಾಗುತ್ತದೆ ತಹಶೀಲ್ದಾರ್ ಜಿಲ್ಲಾಧಿಕಾರಿಗಳು ಪರಿಹಾರದ ಚಕ್ ವಿತರಿಸಲು ಯಾವುದೇ ಅಡ್ಡಿಯಿಲ್ಲ ತಕ್ಷಣ ಅಧಿಕಾರಿಗಳಿಗೆ ಸರ್ಕಾರ ಪರಿಹಾರದ ಚಕ್ ವಿತರಿಸಬೇಕು ಇಲ್ಲವಾದರೇ ರಾಜ್ಯದ್ಯಂತ ಬಿಜೆಪಿ ವತಿಯಿಂದ ಉಗ್ರ ಹೋರಾಟವನ್ನು ಕಾಂಗ್ರೇಸ್ ಸರ್ಕಾರ

ಎದುರಿಸಬೇಕಾಗುತ್ತೆಂದರು.
ಕೇರಳ ರಾಜ್ಯದಲ್ಲಿ ಆನೆ ದಾಳಿಯಿಂದ ಮೃತನಾದ ರೈತ ಕೂಲಿ ಕಾರ್ಮಿಕನಿಗೆ ಅಲ್ಲಿನ ಸರ್ಕಾರ ೧೫ಲಕ್ಷ ಪರಿಹಾರ ನೀಡಿದ್ದು ಆಗಾ ನೀತಿ ಸಂಹಿತೆ ಅಡ್ಡಿಯಾಗಿಲ್ಲವೇ? ಎಂದು ಪ್ರಶ್ನಿಸಿ ತಕ್ಷಣ ಪರಿಹಾರದ ಹಣ ಘೋಷಿಸಿ ದಾಳಿಗೆ ಒಳಗಾದ ಕುಟುಂಬಕ್ಕೆ ಪರಿಹಾರ ನೀಡಬೇಕೆಂದರು.
ಬಿ.ವೈ ರಾಘವೇಂದ್ರ ಲಕ್ಷ ಮತಗಳ ಅಂತರದಿಂದ ಜಯಶಾಲಿಯಾಗುತ್ತಾರೆ: ಮಾತು ಮುಂದುವರೆಸಿದ ಹಾಲಪ್ಪನವರು ಶಿವಮೊಗ್ಗ ಕ್ಷೇತ್ರದಲ್ಲಿ ಭದ್ರಾವತಿ ಬಿಟ್ಟು ಎಲ್ಲ ಮತಗಟ್ಟೆಗಳಿಗೂ ನಾನು ಬೇಟಿ ನೀಡಿದ್ದು ನಾಳೆ ಭದ್ರಾವತಿಗೆ

ಹೋಗುತ್ತೇವೆ ಎಲ್ಲ ಕಡೆಗಳಲ್ಲಿಯೂ ನಮ್ಮ ಬಿಜೆಪಿ ಪಕ್ಷದ ಲೋಕಸಭೆಯ ಅಭ್ಯರ್ಥಿಗೆ ಉತ್ತಮ ಬೆಂಬಲ ಸಿಕ್ಕಿದ್ದು ಲಕ್ಷಂತರ ಮತಗಳ ಅಂತರದಿಂದ ಜಯಶಾಲಿಯಾಗಲಿದ್ದಾರೆ ರಾಜ್ಯ ಸರ್ಕಾರದ ಯಾವುದೇ ಗ್ಯಾರಂಟಿಗೂ ಜನರು ಬೆಂಬಲ ಸೂಚಿಸುತ್ತಿಲ್ಲ ಪ್ರದಾನಮಂತ್ರಿ ನರೇಂದ್ರಮೋದಿಯವರ ೧೦ವರ್ಷದ ಆಡಳಿತ ಮಾಜೀ ಮುಖ್ಯಮಂತ್ರಿ ಯಡಿಯೂರಪ್ಪನವರ ಜನಪರ ಕೆಲಸ ರಾಘವೇಂದ್ರರವರು ಈ ಕ್ಷೇತ್ರದಲ್ಲಿ ಡುಡಿದಿರುವ ಪರಿಶ್ರಮ ನಮ್ಮ ಸಾಗರ- ಹೊಸನಗರ ತಾಲ್ಲೂಕಿನಲ್ಲಿ ನಾನು ಮಾಡಿರುವ ಜನಪರವಾದ ಕೆಲಸಗಳಿಂದ ಜನರು ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಾರೆ ಮುಂದೆಯೂ ಬೆಂಬಲಿಸುತ್ತಾರೆ ರಾಘವೇಂದ್ರ ಗೆಲ್ಲುವುದರಲ್ಲಿ

ಯಾವುದೇ ಸಂಶಯ ಬೇಡ ಎಂದರು.
ಹೊಸನಗರದ ಪ್ರಮುಖ ಬೀದಿಗಳಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮನೆ-ಮನೆಗಳಿಗೆ -ಅಂಗಡಿ-ಹೋಟಲ್‌ಗಳಿಗೆ ಕರಪತ್ರವನ್ನು ವಿತರಿಸಿ ಬಿಜೆಪಿ ಲೋಕಸಭೆಯ ಅಭ್ಯರ್ಥಿ ಬಿ.ವೈ ರಾಘವೇಂದ್ರಪರ ಪರ ಮತಯಾಚನೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೂಕು ಮಂಡಲದ ಅಧ್ಯಕ್ಷ ನಿಟ್ಟೂರು ಸುಬ್ರಹ್ಮಣ್ಯ,

ಪ್ರದಾನ ಕಾರ್ಯದರ್ಶಿ ಕಾಲ್ಸಸಿ ಸತೀಶ, ಮಂಜುನಾಥ್ ಸಂಜೀವ, ರಮೇಶ್ ಶೆಟ್ಟಿ, ಚಿಕ್ಕನಕೊಪ್ಪ ಶ್ರೀದರ, ಟೌನ್ ಘಟಕದ ಅಧ್ಯಕ್ಷ ಶ್ರೀಪತಿರಾವ್, ಎನ್.ಆರ್. ದೇವಾನಂದ್, ಎ.ವಿ. ಮಲ್ಲಿಕಾರ್ಜುನ, ಬಿಜೆಪಿ ಹಿರಿಯರಾದ ಉಮೇಶ್ ಕಂಚುಗಾರ್, ಬಿ.ಯುವರಾಜ್, ಗಾಯಿತ್ರಿ ನಾಗರಾಜ್, ಶಕ್ತಿ ಕೇಂದ್ರದ ಅಧ್ಯಕ್ಷ ಸತ್ಯನಾರಾಯಣ ವಿ, ಚಿಕ್ಕಮಣತಿ ಶಿವಾನಂದ್, ಗಣಪತಿ ಬಿಳಗೋಡು, ಎನ್ ಶ್ರೀಧರ ಉಡುಪ, ಮನೋಹರ ಪಿ, ಮಂಡಾಣಿ ಮೋಹನ, ಹರೀಶ, ಗುಲಾಬಿ ಮರಿಯಪ್ಪ, ನಾಗರತ್ನ ಸದಾನಂದ್ ಇನ್ನೂ ಮುಂತಾದವರು ಪತ್ರಿಕಾಘೋಷ್ಠಿಯಲ್ಲಿ ಮತಯಾಚನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Exit mobile version