Site icon TUNGATARANGA

ಮದುವೆ ನಿಶ್ಚಿತವಾಗಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ /ಪತಿಯ ಸಾಲ: ಪತ್ನಿ ನಾಪತ್ತೆ

ಶಿವಮೊಗ್ಗ,ಮೇ.೪:
ಮದುವೆ ನಿಶ್ಚಿತವಾಗಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಟ್ಯಾಂಕ್ ಮೊಹಲ್ಲಾದಲ್ಲಿ ಶುಕ್ರವಾರ ಸಂಭವಿಸಿದೆ.


ನಗರದ ಟ್ಯಾಂಕ್ ಮೊಹಲ್ಲಾದ ೨ ನೇ ತಿರುವಿನ ಮನೆಯಲ್ಲಿ ಈ ಘಟನೆ ನಡೆದಿದೆ. ನೇಣು ಬಿಗಿದುಕೊಂಡ ಯುವತಿಯನ್ನು ಸಯ್ಯದಾ ಸಿಮ್ರಾನ್ (೨೦) ಎನ್ನುವವಳಾಗಿದ್ದು, ಮೇ ೮ ರಂದು ಇವಳ ಮದುವೆ ನಡೆಯಲಿತ್ತು ಎಂದು ತಿಳಿದು ಬಂದಿದೆ. ಪ್ರಕರಣ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.



ಶಿವಮೊಗ್ಗ,ಮೇ.೪:
ಪತಿ ಮಾಡಿರುವ ಸಾಲಕ್ಕೆ ಪತ್ನಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಸಹೋದರಿಯ ಸ್ನೇಹಿತನೊಂದಿಗೆ ಮಹಿಳೆ ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ.


ಪತಿ ಖಾಸಗಿ ವ್ಯಕ್ತಿಗಳಿಂದ ಸಾಲಪಡೆದು ಕಟ್ಟಲು ಆಗದೆ ತಲೆಮರೆಸಿಕೊಂಡಿದ್ದನು, ಪತಿಯ ಸಾಲ ತೀರಿಸಿ ಎಂದು ಸಾಲಗಾರರು ಪತ್ನಿಯ ಹಿಂದೆ ಬಿದ್ದಿದ್ದರು. ಈಗ ಪತಿಯ ಸಾಲಕ್ಕೆ ಪತ್ನಿ ಸಹ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.


ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ೩೮ ವರ್ಷದ ಮಹಿಳೆ ಪತಿ ಮಾಡಿದ್ದ ಸಾಲ ತೀರಿಸಲು ಆಗದೆ, ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಹೋಗಿದ್ದಾರೆ. ಸಹೋದರಿಯ ಸ್ನೇಹಿತನ ಜೊತೆ ಹೋಗಿರುವುದಾಗಿ ಎಫ್‌ಐಆರ್ ನಲ್ಲಿ ದೂರು ದಾಖಲಾಗಿದೆ.


ತನ್ನ ಗಂಡನ ಸ್ನೇಹಿತರಿಂದ ಸಾಲ ಪಡೆದುಕೊಂಡು ಬರುವುದಾಗಿ ರಾಮಣ್ಣ ಶ್ರೇಷ್ಠಿ ಪಾರ್ಕ್ ಬಳಿ ಮಗಳೊಂದಿಗೆ ಹೋಗಿದ್ದು, ಅಲ್ಲಿಂದ ಮಗಳನ್ನು ಮನೆಗೆ ವಾಪಾಸ್ ಕಳುಹಿಸಿ ಸ್ನೇಹಿತನೊಂದಿಗೆ ಮಹಿಳೆ ನಾಪತ್ತೆಯಾಗಿದ್ದಾಳೆ. ಮಹಿಳೆಯ ಸಹೋದರಿ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Exit mobile version