Site icon TUNGATARANGA

ಬರೀ ಖಾಲಿ ಚೆಂಬು, ಚಿಪ್ಪಿನ ಬಗ್ಗೆ ಹೇಳಿಕೆಗಳನ್ನು ನೀಡುವ ರಾಷ್ಟೀಯ ಪಕ್ಷಗಳ ಬಗ್ಗೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು ?

ಶಿವಮೊಗ್ಗ,ಮೇ3: ಲೋಕಸಭಾ ಚುನಾವಣೆಯಲ್ಲಿ ಯಾವುದೇ ಮಹತ್ತರ ವಿಷಯ ಪ್ರಸ್ತಾಪ ಮಾಡದೇ, ರಾಷ್ಟ್ರೀಯ ಪಕ್ಷಗಳು ಬರೀ ಖಾಲಿ ಚೆಂಬು, ಚಿಪ್ಪಿನ ಬಗ್ಗೆ ಹೇಳಿಕೆಗಳನ್ನು ನೀಡುತ್ತ ಮತದಾರರನ್ನು ಕಡೆಗಣಿಸಿ ಚುನಾವಣೆಗೆ ಮುಂದಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಡಿ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮಹಾನ್ ನಾಯಕರಾದ ಕೆ.ಎಸ್.ಈಶ್ವರಪ್ಪ ಮತ್ತು ಬಿ.ಎಸ್.ಯಡಿಯೂರಪ್ಪನವರು ಅಭಿವೃದ್ಧಿ ನೆಪದಲ್ಲಿ ತಮ್ಮ ಕುಟುಂಬದ ಆಸ್ತಿಗಳನ್ನು ಹೆಚ್ಚಿಸಿದ್ದಲ್ಲದೇ, ಬೇರೆ ಏನು ಮಾಡಿಲ್ಲ. ಹಳೆ ಕಾಮಗಾರಿಗಳಿಗೆ ಅಭಿವೃದ್ಧಿ ನೆಪದಲ್ಲಿ ಮತ್ತೆ ರಿಪೇರಿ ಮಾಡಿ, ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಜಿಲ್ಲೆಯ ಮಹತ್ತರ

ಕೈಗಾರಿಕೆಯಾದ ಎಂ.ಪಿ.ಎಂ. ಮತ್ತು ವಿಐಎಸ್‍ಎನ್‍ಎಲ್‍ನ್ನು ಕಡೆಗಣಿಸಿದ್ದಾರೆ. ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದು, ಬರಗಾಲದಲ್ಲಿ ಯಾವುದೇ ನೆರವು ಬಂದಿಲ್ಲ. ನನ್ನ ಮೇಲೆ ಕೆ.ಎಸ್.ಈಶ್ವರಪ್ಪನವರು

ಸಂಸದ ಬಿ.ವೈ.ಆರ್. ನನ್ನನ್ನು ಚುನಾವಣೆಗೆ ನಿಲ್ಲಿಸಿದ್ದು ಎಂದು ಆರೋಪಿಸಿದ್ದಾರೆ. ಇದು ಸತ್ಯಕ್ಕೆ ದೂರ ಹಲವಾರು ವರ್ಷಗಳಿಂದ ನಾನೊಬ್ಬ ರೈತ ಪರ ಹೋರಾಟಗಾರನಾಗಿದ್ದು, ಜಿಲ್ಲೆಯ ಜನತೆಗೆ ಗೊತ್ತಿದೆ.  ನಾನು ಜಿಲ್ಲೆಗೆ ಅನ್ಯಾಯಯಾಗಬಾರದು ಎಂದು ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದೇನೆ. ರೈತ ಸಂಘಟನೆಗಳು ನನ್ನ ಬೆಂಬಲಕ್ಕೆ  ನಿಂತಿವೆ ಎಂದರು.

ಬಿಜೆಪಿ ರೈತರ ಆದಾಯ ದ್ವಿಗುಣಗೊಳಿಸಿಲ್ಲ. 3 ಕೃಷಿ ಕಾಯ್ದೆ, ರದ್ದುಪಡಿಸದೇ ನಿರ್ಲಕ್ಷ್ಯವಹಿಸಿದೆ. ರೈತರಿಗೆ ಇನ್ನೂ ಪರಿಹಾರಕೊಟ್ಟಿಲ್ಲ. ಸಾರಿಗೆ ಮತ್ತು ಪ್ರಮುಖ ಕ್ಷೇತ್ರಗಳನ್ನು ಖಾಸಗಿಯವರಿಗೆ ನೀಡಿದೆ. ಕೃಷಿ ಭೂಮಿಯನ್ನು ಹೆದ್ದಾರಿ ಮತ್ತು ಕೈಗಾರಿಕೆ ನೆಪದಲ್ಲಿ ವಶಕ್ಕೆ ಪಡೆದಿದ್ದು, ಯಾವುದೇ ಅಭಿವೃದ್ಧಿ ಮಾಡಿಲ್ಲ ಆದ್ದರಿಂದ ಬಿಜೆಪಿ ಅಭ್ಯರ್ಥಿ ಸೋಲಿಸಿ ಭಾರತದ ಸಂವಿಧಾನ ಉಳಿಸಿ, ಸ್ವಾಭಾವಿಕ ನ್ಯಾಯ ಹಾಗೂ ಸಾಮಾನ್ಯ ನ್ಯಾಯಕ್ಕಾಗಿ ಕೈಜೋಡಿಸಿ ನನ್ನ ಉಂಗುರ ಗುರುತಿಗೆ ಮತ ನೀಡಿ ಗೆಲ್ಲಿಸುವಂತೆ ಅವರು ವಿನಂತಿಸಿದರು.

ಈ ಸಂದರ್ಭದಲ್ಲಿ ರೈತ ಪ್ರಮುಖರಾದ ಎಸ್.ರೇವಣ್ಣ ಸಿದ್ದಪ್ಪ, ವಸಂತಕುಮಾರ್, ಬಸವರಾಜ್ ಪಾಟೀಲ್, ಎಸ್.ಮೋಹನ್‍ರಾವ್, ಮಲ್ಲನಗೌಡ ಮತ್ತಿತರರು ಇದ್ದರು. 

Exit mobile version