Site icon TUNGATARANGA

ಸ್ಮಾರ್ಟ್‌ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ಜ.10ರಂದು ಶ್ವಾನ ಮತ್ತು ಬೆಕ್ಕು ಪ್ರದರ್ಶನ

ಶಿವಮೊಗ್ಗ: ಸ್ಮಾರ್ಟ್‌ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ೨ನೇ ವರ್ಷದ ರಾಜ್ಯಮಟ್ಟದ ವಿವಿಧ ತಳಿಯ ಶ್ವಾನ ಮತ್ತು ಬೆಕ್ಕು ಪ್ರದರ್ಶನವನ್ನು ಜ.10ರಂದು ಬೆಳಿಗ್ಗೆ 9.30ರಿಂದ ಕುವೆಂಪು ರಂಗಮಂದಿರ ಹಿಂಭಾಗದ ಎನ್‌ಇಎಸ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ಪ್ರೀತಮ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಟ್ಟು 75 ಸಾವಿರ ರೂ.ನಗದು, ಹಾಗೂ ವಿಶೇಷ ಬಹುಮಾನಗಳು ಮತ್ತು ಆಕರ್ಷಕ ಟ್ರೋಪಿ ನೀಡಲಾಗುವುದು ಎಂದರು.
ಶ್ವಾನಗಳ 1 ರಿಂದ 8ನೇ ವರ್ಗದವರೆಗೆ ಪ್ರಥಮ 20 ಸಾವಿರ ರೂ., ದ್ವಿತೀಯ 15 ಸಾವಿರ ರೂ., ಹಾಗೂ ತೃತೀಯ 10 ಸಾವಿರ ರೂ., ಬೆಕ್ಕುಗಳ ವರ್ಗಕ್ಕೆ ಪ್ರಥಮ ೩ ಸಾವಿರ ರೂ., ದ್ವಿತೀಯ 3 ಸಾವಿರ ರೂ. ಹಾಗೂ ತೃತೀಯ 1 ಸಾವಿರ ರೂ., ಬಹುಮಾನ ನೀಡಲಾಗುವುದು ಎಂದರು.
ಅದಲ್ಲದೇ ಬೆಸ್ಟ್ ಪಪ್ಪಿ ಅವಾರ್ಡ್ 3 ಸಾವಿರ ರೂ., ರಿಸರ್ವಡ್ ಬೆಸ್ಟ್ ಪಪ್ಪಿಗೆ ರೂ.2 ಸಾವಿರ, ಬೆಸ್ಟ್ ಇಂಡಿಯನ್ ಬ್ರೀಡ್‌ಗೆ ರೂ.2 ಸಾವಿರ ಹಾಗೂ ರಿ.ಬೆಸ್ಟ್ ಇಂಡಿಯನ್ ಬ್ರೀಡ್, ಬೆಸ್ಟ್ ಹ್ಯಾಂಡಲ್ಲರ್, ಬೆಸ್ಟ್ ಜ್ಯೂನಿಯರ್ ಹ್ಯಾಂಡಲ್ಲರ್‌ಗೆ ತಲಾ 1 ಸಾವಿರ ರೂ., ಇದಲ್ಲದೇ ಬೆಸ್ಟ್ ಸೆಲ್ಪಿ ಅವಾರ್ಡ್ ನೀಡಲಾಗುವುದು. ಶ್ವಾನ ಪ್ರವೇಶಕ್ಕೆ 300ರೂ., ಹಾಗೂ ಬೆಕ್ಕು ಪ್ರವೇಶಕ್ಕೆ 200 ರೂ., ಪ್ರವೇಶ ಶುಲ್ಕವಿದೆ. ಈಗಾಗಲೇ 150 ಶ್ವಾನ ಹಾಗೂ 50 ಬೆಕ್ಕು ನೊಂದಣಿಯಾಗಿದ್ದು, ಅಂದು ಬೆಳಿಗ್ಗೆ 10ರೊಳಗಾಗಿ ಸ್ಥಳದಲ್ಲೇ ನೊಂದಣಿ ಮಾಡಿಸುವವರಿಗೆ 500 ರೂ., ಶುಲ್ಕವಿದೆ ಎಂದ ಅವರು, ಮುದೋಳ್ ನಾಯಿಗಳಿಗೆ ಪ್ರವೇಶ ಉಚಿತವಾಗಿದೆ ಎಂದರು.
ಪ್ರದರ್ಶನದಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 7676441122, 9964289695, 7892685676ರಲ್ಲಿ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಲ್ಲಾಸ್, ಜಿ.ಎಸ್.ಪ್ರಸಾದ್, ಮನೋಹರ್, ಸಂಜು, ಸಮೀಕ್ಷಾ ಉಪಸ್ಥಿತರಿದ್ದರು.

Exit mobile version