Site icon TUNGATARANGA

ಎದೆನೋವಿಗೆ ಬಾಲಕಿ ಸಾವು


ಸಾಗರ: ತಾಲ್ಲೂಕಿನ ಹುಲಿದೇವರಬನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಅನನ್ಯ ಆರ್. ಶೆಟ್ಟಿ (11) ಅನಾರೋಗ್ಯದಿಂದ ನಿಧನ ಹೊಂದಿ ದ್ದಾರೆ.

ಹುಲಿದೇವರಬನದ ರವಿ ಶೆಟ್ಟಿ ಮತ್ತು ಸುಜಾತ ಶೆಟ್ಟಿ ಅವರ ಪುತ್ರಿಯಾ ಗಿದ್ದ ಅನನ್ಯ ಆರ್. ಶೆಟ್ಟಿ ಓದಿನ ಜೊತೆಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮತ್ತು ನೃತ್ಯಕ್ಷೇತ್ರದಲ್ಲಿ ಅತ್ಯಂತ ಚಿಕ್ಕವಯಸ್ಸಿನಲ್ಲಿಯೆ ಪರಿಣಿತಿ ಪಡೆದಿದ್ದರು. ಜೊತೆಗೆ ಇನ್ನೊಬ್ಬರಿಗೆ ಸಹಾಯ ಮಾಡುವ ಪರೋಪಕಾರ ಗುಣ ಅನನ್ಯ ಆರ್. ಶೆಟ್ಟಿ ಅವರಲ್ಲಿತ್ತು.
ಅನನ್ಯ ಆರ್. ಶೆಟ್ಟಿ ಮಂಗಳವಾರ ರಾತ್ರಿ ಎದೆ ನೋವೆಂದು ತಂದೆತಾಯಿ ಹತ್ತಿರ ಹೇಳಿದ್ದಾಳೆ. ತಕ್ಷಣ ಅವಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವಾಪಾಸ್ ಮನೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾಳೆ.
ಅನನ್ಯ ಆರ್. ಶೆಟ್ಟಿ ನಿಧನಕ್ಕೆ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳ ಹಾಗೂ ಹುಲಿದೇವರಬನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕ ವರ್ಗ, ಶಾಲಾಭಿವೃದ್ದಿ ಸಮಿತಿ ಸಂತಾಪ ಸೂಚಿಸಿದೆ

Exit mobile version