Site icon TUNGATARANGA

ಕೆರೆಗಳಿಗೆ ನೀರು ಬರುವತನಕ 2024 ರ ಲೋಕಸಭಾ ಚುನಾವಣೆಯು ಬಹಿಷ್ಕಾರ/ಏನಿದು ಸರ್ಕಾರಗಳ ಮೇಲೆ ಅರೋಪ ?

ಶಿವಮೊಗ್ಗ,ಏ.೨೦: ನಮ್ಮೂರ ಕೆರೆಗಳಿಗೆ ನೀರು ಬರುವತನಕ ೨೦೨೪ರ ಲೋಕಸಭಾ ಚುನಾವಣೆಯು ಸೇರಿದಂತೆ ಎಲ್ಲಾ ಚುನಾವಣೆಗಳನ್ನು ನಾವು ಬಹಿಷ್ಕಾರ ಮಾಡುತ್ತೇವೆ ಎಂದು ಹಿಟ್ಟೂರು ಗ್ರಾಮದ ನಮ್ಮೂರ ಸಿರಿ ಕೆರೆ ಅಭಿವೃದ್ಧಿ ಸಂಘ ತಿಳಿಸಿದೆ.
ಸಂಘದ ಮುಖ್ಯಸ್ಥ ಹಾಗೂ ರೈತ ಸಂಘದ ಮುಖಂಡ ಹಿಟ್ಟೂರು ರಾಜು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಗ್ರಾಮಗಳಾದ ಹಿಟ್ಟೂರು, ನಾರಾಯಣಪುರ, ಬೈರನಕೊಪ್ಪ ಮುಂತಾದ ಊರುಗಳ ೧೩ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸುವುದಾಗಿ ಹೇಳಿದ ಮೂರು ಸರ್ಕಾರಗಳು ಇಂದು ಏನನ್ನು ಮಾಡದೇ ಬರೀ ಆಶ್ವಾಸನೆಯನ್ನು ನೀಡಿದೆ ಎಂದರು.


ಶಾರದ ಪೂರ‍್ಯನಾಯ್ಕ್‌ಅವರು ಈ ಕೆರೆಗಳಿಗೆ ನೀರು ತುಂಬಿಸಲು ೬ ಕೋಟಿ ರೂ.ಗಳ ಎಸ್ಟೀಮೇಟ್ ಸರ್ಕಾರಕ್ಕೆ ಕಳಿಸಿದ್ದರು. ಆದರೆ ಅದು ಜಾರಿಯಾಗಲಿಲ್ಲ. ನಂತರ ೨೦೧೬ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಅರಗಜ್ಞಾನೇಂದ್ರ ಅವರು ಮುಖ್ಯಮಂತ್ರಿ ಆಗಿದ್ದಾಗ, ಅನುದಾನ ಬಿಡುಗಡೆಗಾಗಿ ಕಡತದಲ್ಲಿ ಸೇರಿದ್ದರು. ಆಗ ನೀರಾವರಿ ಸಚಿವ ಪುಟ್ಟರಾಜು ಹಾಗೂ ಎಂ.ಬಿ.ಪಾಟೀಲ್ ಅವರಿಗೆ ಮನವಿ ಮಾಡಿದ್ದರು. ಆದರೂ ಕೂಡ ಯಾವ ರಾಜಕಾರಣಗಳು ಕ್ರಮ ಕೈಗೊಳ್ಳಲಿಲ್ಲ ಎಂದರು.


ನಂತರ ಬಿಜೆಪಿಯ ಅಶೋಕ್ ನಾಯ್ಕ್‌ರವರು ಗೆದ್ದುಬಂದರು. ೧ ವರ್ಷದಲ್ಲಿ ಕೆರೆ ತುಂಬಿಸುತ್ತೇನೆ ಎಂದರು. ಹಣವೇ ಮಂಜೂರಾಗದ ಕಾಮಗಾರಿಗೆ ಗುತ್ತಲಿ ಪೂಜೆ ಮಾಡಿದರು. ಜನರಿಗೆ ವಂಚನೆ ಮಾಡಿದರು. ಕಾರ್ಯಕ್ರಮಕ್ಕೆ ಬಂದ ಸಂಸದ ಬಿ.ವೈ.ರಾಘವೇಂದ್ರ ರವರು ಇನ್ನು ೧೫ ದಿನಗಳೊಳಗೆ ಯೋಜನೆಗಳನ್ನು ಮಂಜೂರು ಮಾಡುತ್ತೇನೆ ಎಂದರು. ಆದರೆ ವರ್ಷವಾಯಿತು. ಸಂಸದರು ಈ ಕಡೆ ತಲೆನೇ ಹಾಕಿಲ್ಲ ಎಂದರು.


ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪರವರು ಈ ಯೋಜನೆಯ ಅನುಷ್ಠಾನಕ್ಕೆ ಮನವಿ ಮಾಡಿದರು. ಅವರು ಬಜೆಟ್‌ನಲ್ಲಿ ಮಾಡುವುದಾಗಿ ತಿಳಿಸಿದ್ದರು. ಆದರೆ ಮಾಡಲಿಲ್ಲ. ಹಾಗಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಈ ಮೂರು ಸರ್ಕಾರಗಳು ನಮ್ಮೂರ ಕೆರೆಗಳಿಗೆ ನೀರನ್ನು ತುಂಬಿಸಲಿಲ್ಲ ಎಂದರು.


ಆದ್ದರಿಂದ ನಾರಾಯಣಪುಟ್ಟ, ಬೈರಿನಕೊಪ್ಪ, ಮಲ್ಲಪುರ ಗ್ರಾಮಸ್ಥರ ಸಹಕಾರದಲ್ಲಿ ಹಿಟ್ಟೂರಿನ ನಮ್ಮೂರ ಸಿರಿ ಕೆರೆ ಸಂಘವು ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಈ ಬಾರಿ ನಾವು ಲೋಕಸಭಾ ಚುನವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆರೆ ಅಭಿವೃದ್ಧಿ ಸಂಘದ ಪ್ರಮುಖರಾದ ಎಸ್.ಎಂ. ಪ್ರಶಾಂತ್ ಮಲ್ಲಿಕಾರ್ಜುನ ಹೆಚ್.ಎಂ. , ಮಲ್ಲೇಶ್, ಹಚ್.ಪಿ. ನಾಗರಾಜಪ್ಪ, ಹೆಚ್.ಎಸ್. ಬಸವರಾಜಪ್ಪ, ಚಂದ್ರಶೇಖರಪ್ಪ, ಷಣ್ಮುಖಪ್ಪ, ಜಯನಾಯ್ಕ್ ಮುಂತಾದವರು ಇದ್ದರು.

Exit mobile version