ಶಿವಮೊಗ್ಗ,ಏ.20: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಪರವಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಭೋವಿ ಸಮಾಜದ ನಾಯಕ ಸುನೀಲ್ ವಲ್ಲೇಪುರ ಅವರ ನೇತೃತ್ವದಲ್ಲಿ ಜಿಲ್ಲೆಯ ಭೋವಿ ಸಮಾಜದ ಮುಖಂಡರು ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ನಡೆಸಿದರು.
ಸೊರಬ, ಶಿಕಾರಿಪುರ, ಸಾಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು ಪ್ರಚಾರ ನಡೆಸಿದರು. ಆರಂಭದಲ್ಲಿ ಸೊರಬ ತಾಲೂಕಿನ ಸುತ್ತುಕೋಟೆ, ಬಿಳವಾಣಿ, ಉದ್ರಿ, ಹಿರೇಮಾಗಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ಭೇಟಿ ನೀಡಿ, ಭೋವಿ ಸಮಾಜವು ಬಿಜೆಪಿಗೆ ಮತ ನೀಡವಂತೆ ಮನವಿ ಮಾಡಿದರು.
ಆನಂತರ ಶಿಕಾರಿಪುರ ತಾಲೂಕಿನ ಜಾವಗಟ್ಡೆ, ಮಂಚಿಕೊಪ್ಪ, ಶಿವಳ್ಳಿ ತಾಳಗುಂದ , ಅಮಟೆಕೊಪ್ಪ, ಪುನೇದಹಳ್ಳಿ, ಉಡುಗಣಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ಪ್ರಚಾರ ನಡೆಸಲಾಯಿತು.
ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಭೋವಿ ಸಮಾಜದ ನಾಯಕ ಸುನೀಲ್ ವಲ್ಲೇಪುರ
ಪ್ರಚಾರ ಸಭೆಗಳಲ್ಲಿ ಮಾತನಾಡಿ, ಭೋವಿ ಸಮಾಜದ ಸಮಗ್ರ ಅಭಿವೃದ್ದಿ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನುಜಾರಿಗೆ ತಂದಿತ್ತು. ಅದರ ಲಾಭವನ್ನು ಸಮಾಜದ ಜನರು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭೋವಿ ಸಮಾಜವು ತನ್ನಒಲವನ್ನು ಬಿಜೆಪಿಗೆ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ಕಾಂಗ್ರೆಸ್ ವಿರುದ್ದ ಕಿಡಿಕಾರಿದ ಅವರು, ಕಾಂಗ್ರೆಸ್ ಭೋವಿ ಸಮಾಜಕ್ಕೆ ಏನನ್ನು ಮಾಡಿಲ್ಲ. ಕಾಂಗ್ರೆಸ್ ಪಕ್ಷವು ಭೋವಿಸಮಾಜವನ್ನು ನಿರಂತರವಾಗಿ ತನ್ನ ವೋಟ್ ಬ್ಯಾಂಕ್ ಮಾಡಿಕೊಂಡು ಬಂದಿದೆ.ಚುನಾವಣೆಯಲ್ಲಿ ಕಾಂಗ್ರಸ್ ಪಕ್ಷವನ್ನು ತಿರಸ್ಕರಿಸಿ ಎಂದುಕರೆ ನೀಡಿದರು.
ಸಮಾಜದ ಮುಖಂಡರು ಹಾಗೂ ಭೋವಿ ಅಭಿವೃದ್ದಿನಿಗಮದ ಮಾಜಿ ನಿರ್ದೇಶಕ ತೊಗರ್ಸಿ ಸಣ್ಣ ಹನುಮಂತಪ್ಪ ಮಾತನಾಡಿ, ಬಿಜೆಪಿಯ ಅಭ್ಯರ್ಥಿ ಬಿ ವೈ ರಾಘವೇಂದ್ರ ರವರಿಗೆ ಭೋವಿ ಸಮಾಜವು ಹೆಚ್ಚಿ ಮತ ನೀಡಿ ಗೆಲ್ಲಿಸವಂತೆ ಹೇಳಿದರು. ಭೋವಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಬಿ.ಎಸ್ ಯಡಿಯೂರಪ್ಪ ಅವರ ಕೊಡುಗೆಗಳನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ. ಎಸ್.ಸಿ ಮೋರ್ಚಾ ಜಿಲ್ಲಾ ಪ್ರಭಾರಿ ಮಂಜುನಾಥ ಚನ್ನಮುಂಭಾಪುರ, ಆನಂದಪ್ಪ ತಾಳಗುಂದ, ಸಂತೋಷ್ ಶಿಕಾರಿಪುರ, ಭೋವಿ ಸಮಾಜದ ಶಿಕಾರಿಪುರ ತಾಲ್ಲೂಕು ಅಧ್ಯಕ್ಷ ಜಾವಗಟ್ಟಿ ಈಶ್ವರ್, ಮಂಚಿಕೊಪ್ಪ ಕರಿಬಸಪ್ಪ, ವಕೀಲರ ರಮೇಶ್, .ವೀರಭದ್ರಪ್ಪ, ಜಾವಗಟ್ಟಿ ಈಶ್ವರಪ್ಪ, ದೂಪದಳ್ಳಿ ಮಧು , ಉದ್ರಿ ಸುರೇಶ್, ಚಂದ್ರಶೇಖರ್.ಓಂಕಾರಪ್ಪ, ಕೆಂಗಟ್ಟೆ ಹನುಮಂತಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.