ಶಿವಮೊಗ್ಗ, ಏ.20:
ಶಿವಮೊಗ್ಗ ಭಾರತೀಯ ಜನತಾ ಪಕ್ಷದ ಸಭಾಂಗಣದಲ್ಲಿನ ಬ್ಯಾನರ್ ನಲ್ಲಿದ್ದ ಈಶ್ವರಪ್ಪ ಅವರ ಫೋಟೋ ಇಂದು ಔಟ್ ಆಗಿದೆ.
ಈಗ ಹೊಸ ಬ್ಯಾನರ್ ಹಾಕಿದ್ದು, ಸಂಸದ ಸ್ಥಾನದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಅವರ ಪತ್ರಿಕಾಗೋಷ್ಠಿ ಸಮಯದಲ್ಲಿ ಹೊಸ ಬ್ಯಾನರ್ ಕಾಣಿಸಿಕೊಂಡಿದ್ದು, ಹಿಂದೆ ಇದ್ದ ಈಶ್ವರಪ್ಪ ಅವರ ಫೋಟೋವನ್ನು ಅಲ್ಲಿಂದ ತೆಗೆದುಹಾಕಲಾಗಿದೆ.
ಹಾಲಿ ಲೋಕಸಭಾ ಚುನಾವಣೆಗೆ ಬಂಡಾಯವಾಗಿ ಸ್ಪರ್ಧಿಸಿ ಈಗಲೂ ನಾನು ಪಕ್ಕಾ ಬಿಜೆಪಿ ಎಂದು ಹೇಳುತ್ತಿರುವ ಹಾಗೂ ಆ ಪಕ್ಷದ ಹುಳುಕುಗಳನ್ನು ಸರಿಪಡಿಸುತ್ತೇನೆ. ಸಂಸದನಾಗುತ್ತೇನೆ ಎಂದು ಬಂಡಾಯವಾಗಿ ಸ್ಪರ್ಧಿಸಿರುವ ರಾಷ್ಟ್ರ ಭಕ್ತ ಬಳಗದ ಭಾವಚಿತ್ರ ಕೆ ಎಸ್ ಈಶ್ವರಪ್ಪ ಅವರ ಭಾವಚಿತ್ರ ತೆಗೆದು ಹಾಕಲಾಗಿದೆ.
ಆದರೆ ಅವರ ಯಾವುದೇ ಉಚ್ಚಾಟನೆ ಮಾತು ಹಾಗೂ ದಾಖಲೆ ಹೊರ ಬಿದ್ದಿಲ್ಲ.
ಅಂತೆಯೇ ಈಶ್ವರಪ್ಪ ಅವರನ್ನು ಚುನಾವಣೆಯಲ್ಲಿ ನಿಲ್ಲಿಸದಿರಲು ಪಕ್ಷದ ಪ್ರಮುಖರು ಹೇಳಿದರೂ ನಾನು ಚುನಾವಣೆಗೆ ನಿಂತೇ ನಿಲ್ಲುತ್ತೇನೆ ಎಂದು ಹಠ ಹಿಡಿದಿರುವ ಈಶ್ವರಪ್ಪ ಅವರು ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತದೆ.
ಅದು ಸತ್ಯವಾಗುತ್ತಿದ್ದಂತೆ ಬಿಜೆಪಿ ಸಮಗ್ರ ಪ್ರಮುಖರ ಮಾತು ಉಳಿಯದಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಈಶ್ವರಪ್ಪ ಅವರ ಫೋಟೋವನ್ನು ಮೊದಲ ಹಂತದಲ್ಲಿ ತೆಗೆದುಹಾಕಿದೆ ಎಂದು ಹೇಳಲಾಗಿದೆ