ಬೆಂಗಳೂರು,ಜ.07:
ಇನ್ಮುಂದೆ ಜಲ್ಲಿ, ಕಲ್ಲು, ಎಂ ಸ್ಯಾಂಡ್ ಗೆ ಟೋಟಲ್ ರಾಜ್ಯದ ತೆರಿಗೆ ಇಲ್ಲ…!
ಏಕೆ ಗೊತ್ತಾ… ನೀವಿದನ್ನು ಓದಿ
tungataranga.com
ಜಲ್ಲಿ, ಕಲ್ಲು, ಎಂ ಸ್ಯಾಂಡ್ ಗೆ ಇಲ್ಲಿಯವರೆಗೆ ವಿಧಿಸುತ್ತಿದ್ದ ಅಂತರ ರಾಜ್ಯ ತೆರಿಗೆಯನ್ನು ರದ್ದು ರದ್ದಾಗಿದೆ.
ರಾಜ್ಯ ಸರ್ಕಾರದ ಈ ತೆರಿಗೆ ತಿದ್ದುಪಡಿಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಸಣ್ಣ ಖನಿಜಗಳ ರಿಯಾಯಿತಿ ನಿಯಮ 42(7) ರದ್ದು ಮಾಡಲಾಗಿದೆ. ಕರ್ನಾಟಕ ರಾಜ್ಯ ಸಣ್ಣ ಖನಿಜಗಳ ರಿಯಾಯಿತಿ ನಿಯಮ ರದ್ದು ಮಾಡಲಾಗಿದ್ದು, ಜಲ್ಲಿ, ಕಲ್ಲು, ಎಂ ಸ್ಯಾಂಡ್ ಗೆ ಅಂತರರಾಜ್ಯ ತೆರಿಗೆಯನ್ನು ರದ್ದು ಮಾಡಲಾಗಿದೆ.
ಬೇರೆ ರಾಜ್ಯಗಳ ಜಲ್ಲಿ, ಕಲ್ಲು, ಎಂ. ಸ್ಯಾಂಡ್ ಗೆ ಟನ್ ಗೆ 70 ರೂ.ನಂತೆ ಸರ್ಕಾರಕ್ಕೆ ತೆರಿಗೆ ನೀಡಬೇಕಿತ್ತು. 2020 ರ ಜೂನ್ 30 ರಂದು ಈ ಬಗ್ಗೆ ಸರ್ಕಾರ ತಿದ್ದುಪಡಿ ತಂದಿತ್ತು. ತೆರಿಗೆ ಪ್ರಶ್ನಿಸಿ ಕೆಲವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಕಾನೂನಿನಡಿ ತೆಗೆದ ಖನಿಜಕ್ಕೆ ಅಂತಾರಾಜ್ಯ ತೆರಿಗೆ ಇಲ್ಲ. ಸರ್ಕಾರಕ್ಕೆ ತೆರಿಗೆ ನಿರ್ಧರಿಸುವ ಅಧಿಕಾರ ಇಲ್ಲವೆಂದು ಹೈಕೋರ್ಟ್ ತೀರ್ಪು ನೀಡಿದೆ.