ಶಿವಮೊಗ್ಗ, ಜ.07:
ನಿನ್ನೆ ರಾತ್ರಿ ಸುರಿದ ಬಾರೀ ಮಳೆಗೆ ಶಿವಮೊಗ್ಗ ನಗರ ಬಹುತೇಕ ಕಡೆ ತತ್ತರಿಸಿದೆ. ಸ್ಮಾರ್ಟ್ ಸಿಟಿ ಕಾಮಗಾರಿಯ ಅರ್ಧಂಬರ್ದ ಕೆಲಸದ ನಡುವೆ ಮಾಡಿರುವ ಲೆಕ್ಕಚಾರವಿಲ್ಲದ ಕೆಲಸದಿಂದ ಬಹಳಷ್ಟು ಮನೆಗೆ ನೀರು ನುಗ್ಗಿದೆ.
ಮಳೆಗಾಲದ ಅವಧಿಗೆ ಇನ್ನೂ ಸಾಕಷ್ಟು ಸಮಯವಿದ್ದರೂ ಸುರಿದ ಮಳೆಗೆ ಶಿವಮೊಗ್ಗ ಹೊಸಮನೆ ಸೇರಿದಂತೆ ಹಲವೆಡೆ ನೀರಿನ ಪ್ರವಾಹ ಮನೆಗೆ ನುಗ್ಗಿದೆ. ಜೊತೆಗೆ ಯಿಜಿಡಿಯ ನೀರೂ ಸಹ ನುಗ್ಗಿದೆ.
ಹೊಸಮನೆ ಬಡಾವಣೆಯ ರಾಜಕಾಲುವೆ ತುಂಬಿ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿ ಸುಮಾರು ಮನೆಗಳಲ್ಲಿ ಎರಡರಿಂದ ಮೂರು ಅಡಿಯಷ್ಟು ನೀರು ತುಂಬಿ ಪೀಠೋಪಕರಣಗಳು ಸಂಪೂರ್ಣ ಹಾಳಾಗಿದ್ದು ಅಲ್ಲಿಯ ಜನರು ರಾತ್ರಿಯೆಲ್ಲಾ ಪರಿತಪಿಸುತ್ತಿದ್ದಾರೆ, ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ರವರು ನೀರು ತುಂಬಿದ ಮನೆಗಳನ್ನು ರಾತ್ರಿ 1.30 ರ ಸಮಯದಲ್ಲಿವೀಕ್ಷಣೆ ಮಾಡಿ ಅವರುಗಳಿಗೆ ಮಾನಸಿಕ ಸ್ಥೈರ್ಯವನ್ನು ತುಂಬಿ ಸಂಬಂಧಪಟ್ಟ ಅಧಿಕಾರಿಗಳನ್ನು ನಾಳೆ ಕರೆಸಿ ನಷ್ಟ ವಾದಂತಹ ಕುಟುಂಬಗಳಿಗೆ ಪರಿಹಾರ ಪಾಲಿಕೆಯಿಂದಲೇ ಕೊಡಿಸುವ ಹಾಗೂ ರಾಜಕಾಲುವೆಯನ್ನು ಕೂಡಲೇ ದುರಸ್ತಿ ಮಾಡಿಸುವುದಾಗಿ ಹೇಳಿದ್ದಾರೆ.