Site icon TUNGATARANGA

ಸಕ್ರೆಬೈಲ್ ನಲ್ಲಿ ಗಜರಾಜ ಮಣಿಕಾಂತನ ಅವಾಂತರ, ಮದವೇರಿದ್ದೇಕೆ ಗೊತ್ತಾ….? ನಾಳೆ ಉತ್ರ

ಶಿವಮೊಗ್ಗ,ಜ.04:
ಇಲ್ಲಿನ ಸಕ್ರೆಬೈಲು ಆನೆ ಬಿಡಾರದ ಆನೆ ಮಣಿಕಂಠ ಇಂದು ರಂಪಾಟ ನಡೆಸಿ, ಬಿಡಾರದ ಇತರೆ ಆನೆಗಳ‌‌ ಮೇಲೆ ಅಟ್ಯಾಕ್ ಮಾಡಿದ್ದಾನೆ. ಕಾರಣ ಗೊತ್ತಿಲ್ಲ. ಮಣಿಕಂಠನ ಆಕ್ರೋಶಕ್ಕೆ ಕಾರಣವೇನು..?!ಇಲ್ಲಿನ ಗಜರಾಜ ಹಾಗೂ ಗಜರಾಣಿಯರೆಂಬ ಎಲ್ಲಾ ಆನೆಗಳಿಗೆ ಎಂದಿನಂತೆ ತುಂಗಾ ಹಿನ್ನೀರಿನಲ್ಲಿ ಸ್ನಾನ ಮಾಡಿಸಿ ಆಹಾರ ನೀಡಿ ಪುನಃ ಕಾಡಿಗೆ ಬಿಡಲಾಗಬೇಕಿತ್ತು.
ಆದರೆ ಇಂದು ಬೆಳಗ್ಗೆ ಬಿಡಾರಕ್ಕೆ ಬಂದ ಮಣಿಕಂಠನೆಂಬ ಆನೆ ಬರುತ್ತಲೇ ಕಿರಿಕ್ ಮಾಡಿದ್ದಾನೆ.
ಸ್ನಾನಕ್ಕೆಂದು ಎಲ್ಲಾ ಆನೆಗಳೊಂದಿಗೆ ತುಂಗಾ ಹಿನ್ನೀರಿನ ಬಳಿ ಬಂದವನು ನೀರಿಗೆ ಇಳಿಯದೆ ದಡದಲ್ಲಿಯೇ ನಿಂತು ರಂಪಾಟ ನಡೆಸಿದ್ದಾನೆ. ಮದವೇರಿ ನೀರಿನಲ್ಲಿ‌ ನಿಂತಿದ್ದ ಬಾಲಣ್ಣ ಎಂಬ ಆನೆಗೆ ದಂತದಿಂದ ಚುಚ್ಚಿದ್ದಾನೆ. ಗಾಯಗೊಂಡ ಬಾಲಣ್ಣ ಆನೆ ತನ್ನ ಮೇಲಿದ್ದ ಮಾವುತನ ಸಮೇತ ನೀರಿನಲ್ಲಿ ಅಡ್ಡಾದಿಡ್ಡಿ‌ ಓಡಿದೆ. ಇದೇ ವೇಳೆ ಇತರೆ ಆನೆಯ ಮಾವುತರು ಆನೆಯನ್ನು ದಾರಿಗೆ ತರಲು ಮುಂದಾದ ವೇಳೆ ಮಣಿಕಂಠ ಉಗ್ರನಾಗಿದ್ದಾನೆ.
ತುಂಗಾ ಹಿನ್ನಿರಿನಲ್ಲಿ‌ ಮಣಿಕಂಠ ಆನೆ ರಂಪಾಟ
ಮೂರು ಗಂಟೆಗಳ ನಂತರ ನಿಯಂತ್ರಣಕ್ಕೆ ಬಂದಿದ್ದಾನೆ.
ಬೆಳಗ್ಗೆ 8 ಗಂಟೆಯಿಂದ ಮದವೇರಿ ರಂಪಾಟ ನಡೆಸಿದ್ದ ಮಣಿಕಂಠ 11 ಗಂಟೆಯ ಸುಮಾರಿಗೆ ಶಾಂತನಾಗಿ ತನ್ನ ಮಾವುತ ಇಬ್ಬುವಿನ ಬಳಿ ಬಂದಿದ್ದಾನೆ. ಬಳಿಕ ಸ್ನಾನ ಮಾಡಿಸಿ, ಕಾಡಿಗೆ ಕಳುಹಿಸಲಾಗಿದೆ.
ಬಿಡಾರದಲ್ಲಿ ಕೆಲ ಕಾಲ‌ ಆಂತಕ ಸೃಷ್ಟಿಯಾಗಿದ್ದಂತೂ ಸತ್ಯ.
ಬಿಡಾರದಲ್ಲಿ ಆನೆಯನ್ನು ನೋಡಲು ಬಂದವರು, ಮಣಿಕಂಠನ ರಂಪಾಟ ಕಂಡು ಕ್ಷಣ ಕಾಲ‌ ಆತಂಕಕ್ಕೊಳಗಾದರು. ಅಷ್ಟರಲ್ಲಿ ಬಿಡಾರದ ಸಿಬ್ಬಂದಿ ಮುಂಜಾಗ್ರತೆಯಿಂದ ಪ್ರವಾಸಿಗರನ್ನು ಅಲ್ಲಿಂದ ಕಳುಹಿಸಿದ್ದಾರೆ.

Exit mobile version