Site icon TUNGATARANGA

ಕುವೆಂಪು ವಿವಿಯಿಂದ 137 ಕೋಟಿಗಳ ಬಜೆಟ್ ಮಂಡನೆ, 1.85 ಕೊರತೆ ಬಜೆಟ್- ಹಣಕಾಸು ಅಧಿಕಾರಿ ಜಿ. ಬಂಗಾರಪ್ಪ ಮಂಡನೆ

ಶಂಕರಘಟ್ಟ ಮಾ. 28: ಕುವೆಂಪು ವಿಶ್ವವಿದ್ಯಾಲಯವು 2024-25 ನೇ ಸಾಲಿಗೆ 137.7 ಕೋಟಿ ರೂಗಳ ಬಜೆಟ್ ಮಂಡನೆ ಮಾಡಿದೆ.
ಕುವೆಂಪು ವಿವಿಯಲ್ಲಿ ನಡೆದ ವಿದ್ಯಾ ವಿಷಯಕ ಪರಿಷತ್ನ ಸಭೆಯಲ್ಲಿ 2024 25 ನೇ ಸಾಲಿನ

ಆಯವ್ಯಯವನ್ನು ಮಂಡಿಸಲಾಗಿತ್ತು 1.85 ರೂ ಗಳ ಕೊರತೆ ಬಜೆಟನ್ನು ಸಿದ್ಧಪಡಿಸಲಾಗಿದೆ. ಹೊಸ ಯೋಜನೆಗಳ ಬದಲು ಪ್ರಸ್ತುತ ಜಾರಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹಣಕಾಸು ಅಧಿಕಾರಿ ಜಿ ಬಂಗಾರಪ್ಪ ಮಾಹಿತಿ ನೀಡಿದ್ದಾರೆ.


ಕುವೆಂಪು ಬಿವಿಯು ವಿವಿಧ ಮೂಲಗಳಿಂದ 135.88 ಕೋಟಿಗಳ ಸ್ವೀಕೃತಿಯನ್ನು ನಿರೀಕ್ಷಿಸುತ್ತಿದೆ ಹಾಗೂ 137.74 ಕೋಟಿ ರೂಗಳನ್ನು ವೆಚ್ಚಕ್ಕಾಗಿ ನಿಗದಿಗೊಳಿಸಲಾಗಿದೆ. ಸ್ವೀಕೃತಿಯನ್ನು ವೇತನ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವೆಚ್ಚಗಳು ಪರೀಕ್ಷಾ ವೆಚ್ಚಗಳು ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಳಸಲು ಉದ್ದೇಶಿಸಲಾಗಿದೆ. ಒಟ್ಟು 185 ಕೋಟಿ ರೂಗಳ ಕೊರತೆ ಬಜೆಟ್ ಸಿದ್ಧಪಡಿಸಲಾಗಿದ್ದು, ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರವನ್ನು ಕೋರಲು ತೀರ್ಮಾನಿಸಲಾಗಿದೆ.


ಸಹ್ಯಾದ್ರಿ ಕಾಲೇಜಿನಲ್ಲಿ 22 ತರಗತಿ ಕೊಠಡಿಗಳನ್ನು ಪೂರ್ಣಗೊಳಿಸಲಾಗಿದ್ದು ಶೀಘ್ರವೇ ಪಾಠ ಪ್ರವಚನಕ್ಕೆ ಮುಕ್ತಗೊಳಿಸಲಾಗುವುದು. ರೂಸ ಯೋಜನೆ ಅಡಿ ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯವನ್ನು ಪೂರ್ಣಗೊಳಿಸಿದ್ದು

ಸದ್ಯದಲ್ಲೇ ಬಳಕೆಗೆ ನೀಡಲಾಗುವುದು. ಈ ವರ್ಷ ನ್ಯಾಕ್ ಸಮಿತಿಯ ನಾಲ್ಕನೇ ಆವೃತ್ತಿಯ ಮೌಲ್ಯಮಾಪನ ಇರುವುದರಿಂದ ಬೋಧನೆ ಮತ್ತು ಸಂಶೋಧನೆಗೆ ಹೆಚ್ಚು ಹೊತ್ತು ನೀಡಲು ವಿವಿ ಶ್ರಮಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.


ಈ ಸಂದರ್ಭದಲ್ಲಿ ಸಭೆಯಲ್ಲಿ ವಿವಿಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವ ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್ ಎಂ ಗೋಪಿನಾಥ್ ಹಾಗೂ ವಿದ್ಯಾವಿಶಯಕ ಪರಿಷತ್ನ ಸದಸ್ಯರು ಹಾಜರಿದ್ದರು.

Exit mobile version