Site icon TUNGATARANGA

ಬಿಜೆಪಿಯಲ್ಲೀಗ ಕಾಂಗ್ರೆಸ್ ಸಂಸ್ಕೃತಿ ಬಂದಿದೆ ಮಾಜಿ: ಡಿಸಿಎಂ ಕೆ.ಎಸ್.ಈಶ್ವರಪ್ಪ


ಶಿವಮೊಗ್ಗ, ಮಾ.೨೬:
ಏಪ್ರಿಲ್ ೧೨ರಂದು ಸುಮಾರು ೨೫ ಸಾವಿರ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸುವುದಾಗಿ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಘೋಷಣೆ ಮಾಡಿದ್ದಾರೆ.
ಅವರು ಶುಭಮಂಗಳದಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಆಯೋಜಿಸಿದ್ದ ನಗರ ಮತ್ತು ಗ್ರಾಮಾಂತರ ಮಟ್ಟದ ಬೂತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.


ಚುನಾವಣೆಗೆ ಇನ್ನೂ ದಿನವಿದೆ. ನನ್ನ ಗುರುತು ಕೂಡ ಇನ್ನೂ ತೀರ್ಮಾನವಾಗಿಲ್ಲ. ಮತದಾನದ ದಿನಾಂಕ ನಿಗಧಿಯಾಗಿದೆ. ಆದ್ದರಿಂದ ಏಪ್ರಿಲ್ ೧೨ರಂದು ಸಾವಿರಾರು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸುವೆ ಈ ರೀತಿ ಘೋಷಿಸಿದಾಗ ಯಡಿಯೂರ ಪ್ಪನವರ ಎದೆಯಲ್ಲಿ ನಡುಕ ಆರಂಭವಾಗು ತ್ತದೆ. ನನ್ನ ಜೊತೆ ಬರುವವರು ಸ್ವಾಭಿಮಾನಿ ಗಳು. ಶಕ್ತಿ ಪ್ರದರ್ಶನಕ್ಕೆ ಇಳಿದಾಗಿದೆ ಎಂದರು.


ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ೧೦೮ ಸ್ಥಾನವನ್ನು ನಾವು ಗೆದ್ದಿ ದ್ದೇವು. ಬೊಮ್ಮಾಯಿ ಅವರು ಸದಾನಂದ ಗೌಡರು, ಜಗದೀಶ್‌ಶೆಟ್ಟರ್ ಸಿ.ಎಂ.ಆದರು. ಆದರೆ, ೧೦೮ರಿಂದ ೬೬ ಸ್ಥಾನಕ್ಕೆ ಕುಸಿಯಿತು. ಇದು ಕಾರ್ಯಕರ್ತರಿಂದ ಅಲ್ಲ, ಕೆಲವು ನಮ್ಮ ಪಕ್ಷದ ನಾಯಕರಿಂದ ಎಂದು ದೂರಿದರು.
ಶೇ.೪೦ರ ಕಮಿಷನ್ ಹಗರಣ ಪ್ರಕರಣ ದಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಆದರು ಕೂಡ ಮಾತಿನಂತೆ ನನಗೆ ಸಚಿವ ಸ್ಥಾನವನ್ನು ಕೊಡಲಿಲ್ಲ. ಈಶ್ವರಪ್ಪನವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದಾದರೆ ನನ್ನ ಮಗ ವಿಜಯೇಂದ್ರನಿಗೂ ಸಚಿವ ಸ್ಥಾನ ನೀಡಬೇಕು ಎಂದಿದ್ದರು. ಬಿ.ಎಸ್.ಯಡಿ ಯೂರಪ್ಪನವರ ಹೆಸರು ಹೇಳದೆ ದಾಳಿ ನಡೆಸಿದರು.


ಲೋಕಸಭಾ ಚುನಾವಣೆಗೆ ಮಗನಿಗೆ ಟಿಕೇಟ್ ಕೊಡುತ್ತೇವೆ ಎಂದರು, ಆದರೆ ಕೊಡಲಿಲ್ಲ. ಇದರ ಹಿಂದೆ ಹಿಂದುಳದ ನಾಯಕರನ್ನು ಬೆಳೆಸಬಾರದು ಎಂಬ ಹುನ್ನಾರವಿದೆ ಎಂದು ದೂರಿದ ಅವರು, ಪ್ರತಾಪಸಿಂಹ, ಅನಂತ್‌ಕುಮಾರ್ ಹೆಗಡೆ, ಸಿ.ಟಿ.ರವಿ ಮುಂತಾದವರಿಗೂ ಸೀಟು ನಿರಾಕರಿಸಲಾಗಿದೆ ಎಂದರು.
ಈಗಾಗಲೇ ಜಿಲ್ಲಾ ಪ್ರವಾಸ ಮಾಡಿ ರುವೆ, ಬೈಂದೂರಿಗೆ ರಾಜ್ಯಾಧ್ಯಕ್ಷನಾದಾಗ ಹೋಗಿದ್ದೆ, ಈಗಾಗಲೇ ರಾಘವೇಂದ್ರನ ಬಗ್ಗೆ ಅಲ್ಲಿ ಸಿಟ್ಟಿದೆ. ಹಿಂದುತ್ವಕ್ಕೆ ದ್ರೋಹ ಮಾಡಿ ದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಹೋದ ಕಡೆಯೆಲ್ಲ ಅವರಿಗೆ ವಿರೋಧವಾ ಗುತ್ತಿದೆ. ನನ್ನನ್ನು ಗೆಲ್ಲಿಸುವ ಮಾತನಾಡು ತ್ತಿದ್ದಾರೆ. ಗೆದ್ದು ನಿಮ್ಮ ಋಣ ತೀರಿಸುವೆ ಎಂದರು.


ಈಗ ತಾನೇ ನನ್ನ ಮಗನಿಗೆ ಮೊಬೈಲ್ ಕರೆ ಬಂದಿದೆ. ಯಾರ ಕರೆ ಬಂದರು, ಮನೆಗೆ ಬಂದರೂ ಪಕ್ಷೇತರವಾಗಿ ನಾನು ಲೋಕ ಸಭಾ ಚುನಾವಣೆಯಲ್ಲಿ ನಿಲ್ಲುವುದು ಖಚಿತ, ಗೆಲ್ಲುವುದು ಖಚಿತ. ಆದರೆ, ಈಶ್ವರಪ್ಪ ಸೋಲೋತ್ತಾರೆ ಎಂದು ಹೇಳುತ್ತಿದ್ದಾರೆ. ಹಾಗಿದ್ದ ಮೇಲೆ ನಮ್ಮ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಏಕೆ ?ಎಂದರು.


ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಇ.ಕಾಂತೇಶ್, ಆರತಿ ಅ.ಮಾ. ಪ್ರಕಾಶ್, ಶಂಕರ್, ಕೇಬಲ್ ಬಾಬು, ಭೂಪಾಲ್, ಮಂಜುನಾಥ್, ಈ. ವಿಶ್ವಾಸ್, ಲಕ್ಷ್ಮೀ ಶಂಕರನಾಯಕ್, ಗಂಗಾಧರ್, ಗಣೇಶ್, ಮುರುಗನ್, ಗುರುಶೇಟ್, ಅನಿತಾ, ಜಾಧವ್ ಮುಂತಾದವರು ಇದ್ದರು.

Exit mobile version