Site icon TUNGATARANGA

ಕಾಂಗ್ರೆಸ್‌ನವರಿಗೆ ಸಂಸ್ಕೃತಿ ಇಲ್ಲ /ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ

ಕಾಂಗ್ರೆಸ್‌ನವರಿಗೆ ಸಂಸ್ಕೃತಿಯೇ ಇಲ್ಲ ಎಂದು ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಕಾಂಗ್ರೆಸ್‌ನ ನಾಯಕರುಗಳು ಮೋದಿಯನ್ನು ಟೀಕಿಸುವ ಭರದಲ್ಲಿ ಸಂಸ್ಕೃತಿಯನ್ನೇ ಮರೆತ್ತಿದ್ದಾರೆ.

ಶಿವರಾಜ್ ತಂಗಡಗಿ ಉದ್ಯೋಗ ಸೃಷ್ಠಿಯ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಅವರು ಯುವಕರಿಗೆ ಉದ್ಯೋಗ ಕೊಟ್ಟಿಲ್ಲ. ಮೋದಿಗೆ ಜೈಕಾರ ಹಾಕಿದವರಿಗೆ ಕಪಾಳ ಮೋಕ್ಷ ಮಾಡಬೇಕು ಎಂದು ಹೀನಾಯವಾಗಿ ಹೇಳಿದ್ದಾರೆ. ಇದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾಗಿ ಹೇಗೆ ಮಾತನಾಡಬೇಕು ಎಂಬುದೇ ಇವರಿಗೆ ಅರಿವು ಇಲ್ಲ. ಇವರಿಗೆ ಸಂಸ್ಕೃತಿ ಇದ್ದರೆ ತಾನೆ. ತಕ್ಷಣ ಈ ಇಲಾಖೆಯಿಂದ ಅವರನ್ನು ತೆಗೆಯಬೇಕು. ಅಷ್ಟೆ ಅಲ್ಲ ರಾಜ್ಯಪಾಲರು ಅವರನ್ನು ಸಚಿವ ಸ್ಥಾನದಿಂದಲೇ ವಜಾ ಮಾಡಬೇಕು ಎಂದರು.


ಇದರಂತೆ ಕಾಂಗ್ರೆಸ್ ಮುಖಂಡರುಗಳಾದ ರಾಹುಲ್‌ಗಾಂಧಿ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ ಕೂಡ ಮೋದಿ ಅವರನ್ನು ಸಾವಿನ ವ್ಯಾಪಾರಿ, ವಿಷಸರ್ಪ, ಚೋರ್‌ಗುರು ಎಂದೇಲ್ಲ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ಈ ನಾಯಕರುಗಳ ಹೀನ ಸಂಸ್ಕೃತಿ ಆಗಿದೆ ಎಂದರು.
ಮೋದಿ ಇದ್ದರೆ ಸಾಧ್ಯ ಎಂಬ ಮಾತು ಸತ್ಯವಾಗಿದೆ. ಲಕ್ಷಾಂತರ ಉದ್ಯೋಗಳನ್ನು ಅವರು ನೀಡಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಜಗತ್ತಿನಲ್ಲಿಯೇ ನಾವು ನಂ.೧ ಸ್ಥಾನದಲ್ಲಿದ್ದೇವೆ. ೨೦೧೪ರಲ್ಲಿ ಕೇವಲ ೩೫೦ ಸ್ಟಾಟ್‌ಅಪ್ ಗಳಿದ್ದವು. ಈಗ ೨೦೨೪ರಲ್ಲಿ ೧ಲಕ್ಷದ ೧೭ ಸಾವಿರ ಸ್ಟಾಟ್‌ಅಪ್ ಕಂಪನಿಗಳು

ಕಾರ್ಯನಿರ್ವಹಿಸುತ್ತಿವೆ. ಅಗ್ನಿಪಥ್ ಯೋಜನೆಯನ್ನು ತಂದು, ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡಿದ್ದಾರೆ.ಸೆಮಿಕಂಡಾಕ್ಟರ್‌ಗಳ ನಿರ್ಮಾಣ ಸೇರಿದಂತೆ ಅನೇಕ ವಿಚಾರಗಳಲ್ಲಿ ಭಾರತ ಈಗ ನಂ.೧ ಸ್ಥಾನದಲ್ಲಿದೆ. ೮೦ ಕೋಟಿ ಜನರಿಗೆ ಆಹಾರ ಧಾನ್ಯವನ್ನು ಉಚಿತವಾಗಿ ನೀಡಿದ್ದಾರೆ. ವಿಶ್ವದಲ್ಲೇ ಬಡತನದ ರೇಖೆಯಲ್ಲಿ ೨೪.೮ನೇ ಸ್ಥಾನದಲ್ಲಿದ್ದ ನಾವು ಈಗ ೧೪.೮ಕ್ಕೆ ಇಳಿದಿದ್ದೇವೆ. ಉಚಿತ ಗ್ಯಾಸ್ ಕನಿಕ್ಷನ್ ನೀಡಲಾಗಿದೆ. ನಾರಿ ಶಕ್ತಿ ಸಬಲೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅನೇಕ ಕಾನೂನುಗಳನ್ನು ಸರಳೀಕರಣ ಮಾಡಿ, ಯುವಕರಿಗೆ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಗುರುತಿಸುವಂತಾಗಿದೆ. ಆಯುಷ್ಮಾನ್ ಭಾರತ್

ಯೋಜನೆಯಿಂದ ವಿಶ್ವದಲ್ಲೇ ನಂ.೧ ಸ್ಥಾನಗಳಿಸಿದ್ದೇವೆ. ೬೪೧ ವೈದ್ಯಕೀಯ ಕಾಲೇಜುಗಳಿದ್ದದ್ದು, ಈಗ ೧೩೪೧ ವೈದ್ಯಕೀಯ ಕಾಲೇಜುಗಳಾಗಿವೆ. ಕೇವಲ ೭೩ ವಿಮಾನ ನಿಲ್ದಾಣ ದೇಶದಲ್ಲಿತ್ತು. ಮೋದಿ ಆಡಳಿತದಲ್ಲಿ ೪೮೧ ವಿಮಾನ ನಿಲ್ದಾಣಗಳಾಗಿವೆ ಎಂದರು.


ಲಕ್ಷಾಂತರ ಮಂದಿಗೆ ಉದ್ಯೋಗ ಸಿಕ್ಕಿದೆ. ಅವರ ಯೋಜನೆಗಳು ಜಗತ್ತಿನ ಗಮನ ಸೆಳೆದಿದೆ. ಮೋದಿ ಇಲ್ಲದಿದ್ದರೆ ಲಕ್ಷಾಂತರ ಜನರು ಸತ್ತು ಹೋಗುತ್ತಿದ್ದರು. ಅವರು ಇರುವುದುರಿಂದಲೇ ಬಡತನದಿಂದಾಗಲಿ, ಹಸಿವಿನಿಂದಾಗಲಿ ಒಬ್ಬ ವ್ಯಕ್ತಿಯೂ ಸತ್ತು ಹೋಗಿಲ್ಲ. ಹೀಗೆ ಯುವಕರು, ರೈತರು, ಮಹಿಳೆಯರು, ಕಾರ್ಮಿಕರಿಗಾಗಿ ಅವರು ದುಡಿಯುತ್ತಲೇ ಇದ್ದಾರೆ. ಈ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಮೋದಿ ಇದ್ದರೆ ಮಾತ್ರ ಇವೆಲ್ಲ ಸಾಧ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹೃಷಿಕೇಶ್ ಪೈ, ವಿನ್ಸಂಟ್ ರೋಡ್ರಿಗ್ರಸ್ ಚಂದ್ರಶೇಖರ್, ಕೆ.ವಿ.ಅಣ್ಣಪ್ಪ ಇದ್ದರು.

Exit mobile version