Site icon TUNGATARANGA

ನಮಗೆ ಅವಶ್ಯಕತೆ ಇದ್ದಷ್ಟೇ ನೀರನ್ನು ಬಳಸಿ ಉಳಿದದ್ದನ್ನು ಮುಂದಿನ ಪೀಳಿಗೆಗೆ ಬಿಟ್ಟುಕೊಡುವ ಮನೋಭಾವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು: ಪರಿಸರ ತಜ್ಞ ಡಾ.ಶ್ರೀಪತಿ ಎಲ್.ಕೆ.ಕರೆ

ಶಿವಮೊಗ್ಗ: ನಮಗೆ ಅವಶ್ಯಕತೆ ಇದ್ದಷ್ಟೇ ನೀರನ್ನು ಬಳಸಿ ಉಳಿದದ್ದನ್ನು ಮುಂದಿನ ಪೀಳಿಗೆಗೆ ಬಿಟ್ಟುಕೊಡುವ ಮನೋಭಾವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಪರಿಸರ ತಜ್ಞ ಡಾ.ಶ್ರೀಪತಿ ಎಲ್.ಕೆ.ಕರೆ ನೀಡಿದರು.


ಅವರು ಗಾಜನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ನಿರ್ಮಲ ತುಂಗಾ ಅಭಿಯಾನ, ರೇಡಿಯೋ ಶಿವಮೊಗ್ಗ, ಪರಿಸರ ಅಧ್ಯಯನ ಕೇಂದ್ರ, ಸಂತೆಕಡೂರು ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವ ಪವನ ದಿನ-೨೦೨೪ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮರಗಿಡಗಳನ್ನು ಹೆಚ್ಚೆಚ್ಚು ಬೆಳೆಸುವುದರ ಮೂಲಕ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಿವ ಮೂಲಕ ತಾಪಮಾನ ಏರಿಕೆಯನ್ನು ತಡೆಯಬೇಕು ಎಂದು ಅವರು ಸಲಹೆ ನೀಡಿದರು.


ಈಗ ನಾವು ಭೂಮಿ ಮೇಲೆ ಲಭ್ಯವಿರುವ ನೀರಿಗಿಂತ ನಾಲ್ಕು ಪಟ್ಟು ಹೆಚ್ಚು ನೀರನ್ನು ಬಳಕೆ ಮಾಡುತ್ತಿರುವುದರಿಂದ ನೀರು ಮತ್ತು ಆಹಾರದ ಅಭಾವವನ್ನು ಎದುರಿಸುವಂತಾಗಿದೆ, ಭೂ, ಜಲ ಮತ್ತು ವಾಯು ಮಾಲಿನ್ಯದಿಂದ ಜಗತ್ತು ಗಂಡಾಂತರ ಎದುರಿಸುವಂತಾಗಿದೆ ಎಂದರು.
ನಿರ್ಮಲ ತುಂಗಾ ಅಭಿಯಾನದ ಡಾ.ಬಾಲಕೃಷ್ಣ ಹೆಗಡೆ ಮಾತನಾಡಿ, ಶೃಂಗೇರಿಯಿಂದ ಹರಿಯಲು ಆರಂಭವಾಗುವ ತುಂಗಾ ನದಿ ತೀರ್ಥಹಳ್ಳಿ ಮೂಲಕ ಶಿವಮೊಗ್ಗ ಸೇರುತ್ತದೆ. ಅಲ್ಲಿಂದ ಮುಂದೆ ಕೂಡಲಿಯಲ್ಲಿ ಭದ್ರೆಯೊಡನೆ ಸೇರಿ ಮುಂದೆ ತುಂಗಭದ್ರೆಯಾಗಿ ಸಾಗುತ್ತದೆ.

ಈ ನದಿ ತಟದಲ್ಲಿರುವ ಗ್ರಾಮಗಳು, ನಗರಗಳು ತಮ್ಮ ತ್ಯಾಜ್ಯವಾನ್ನು ನೇರವಾಗಿ ನದಿಗೆ ಬಿಡುತ್ತಿದ್ದು ಈ ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂಬ ಪ್ರಯೋಗಾಲಯ ವರದಿ ಬಂದಿದೆ. ನದಿ ನೀರನ್ನು ಕುಡಿಯಲು ಯೋಗ್ಯ ಮಾಡುವ ಪ್ರಯತ್ನಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಅವರು ವಿನಂತಿಸಿದರು.


ಬಾಲು ನಾಯ್ಡು, ದಿನೇಶ ಹೊಸನಗರ, ಲೋಕೇಶ್ವರಪ್ಪ, ಶಿಕ್ಷಕರಾದ ಶರಣಪ್ಪ, ಆರ್.ಜಿ.ರಾಠೋಡ, ಎನ್.ಎ.ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು..

Exit mobile version