ಶಿವಮೊಗ್ಗ: ನಾನು ನಿಮ್ಮ ಮನೆಯ ಮಗಳು, ನನ್ನನ್ನು ಗೆಲ್ಲಿಸಿ ಎಂದು ಕಾಂಗ್ರೆಸ್ ಅಭರ್ಥಿ ಗೀತಾ ಶಿವರಾಜ್ ಕುಮಾರ್ ಮನವಿ ಮಾಡಿದರು.
ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ನೆನ್ನೆ ಆಯೋಜಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಮನೆಯ ಮಗಳನ್ನು ಬರಿಗೈಯಲ್ಲಿ ಕಳಿಸಲು ಆಗುವುದಿಲ್ಲ. ಲೋPಸಭೆಯಲ್ಲಿ ಜಿಯ ಧನಿ ಆಗಿ ಕೆಲಸ ಮಾಡುತ್ತೇನೆ. ನಿಮ್ಮ ಜೊತೆಗೆ ಇz ಇರುತ್ತೇನೆ. ನಿಮ್ಮೆಲ್ಲರ ಸೇವೆಗೆ ಒಂದು ಅವಕಾಶ ಕೊಡಿ. ಶಿವಮೊಗ್ಗದಿಂದ ಲೋಕಸಭೆಗೆ ಹೋಗುವ ಮೊದಲ ಮಹಿಳೆ ಆಗುತ್ತೇನೆ. ಯಾರಿಗೂ ಯಾವುದೇ ಕೆಟ್ಟ ಹೆಸರು ತರುವುದಿಲ್ಲ ಎಂದು ಭರವಸೆ ನೀಡಿದರು.
ನನಗೆ ಎರಡು ವರ್ಷ ಇzಗ ತಂದೆ ಬಂಗಾರಪ್ಪ ಶಾಸಕರಾಗಿದ್ದರು. ಯಾವುದೇ ಬೇಧ ಇಲ್ಲದೇ ನನ್ನನ್ನು ಬೆಳೆಸಿzರೆ. ನನ್ನನ್ನೂ ಅಕ್ಕ ತಂಗಿ ರೀತಿ ತಗೋಬೇಕು. ಕಳೆದ ಚುನಾವಣೆ ಕೇವಲ ಹದಿನೇಳು ದಿನ ಮಾತ್ರ ಪ್ರಚಾರ ಮಾಡಿz. ಹಾಗಾಗಿ ಸೋಲು ಕಾಣಬೇಕಾಯಿತು. ಈಗ ಗ್ಯಾರಂಟಿ ಯೋಜನೆ ಬಗ್ಗೆ ಮನೆ ಮನೆಗೆ ತಲುಪಿಸಿ. ನುಡಿದಂತೆ ನಡೆದ ಸರ್ಕಾರ ಇದು ಎಂದರು.
ನಟ ಶಿವರಾಜ್ ಕುಮಾರ್ ಮಾತನಾಡಿ, ಈ ಸಲ ಶೇ.೧೦೦ರಷ್ಟು ಗೆಲ್ಲಿಸುವ ಭರವಸೆ ಇದೆ. ಗೀತಾ ಅವರನ್ನು ಅಭರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
೨೦೧೪ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಯಾರಾದರೂ ಒಬ್ಬರು ಗೆಲ್ಲಬೇಕು. ಆದರೂ ಪರವಾಗಿಲ್ಲ. ಒಂದು ಅನುಭವ ಆಯಿತು. ಪ್ರೀತಿ ವಿಶ್ವಾಸ ಮಧ ರಾಜಕೀಯ ಬರಲ್ಲ. ಒಂದು ಬಾಂಧವ್ಯ ಬೆಳೆಯುತ್ತದೆ ಎಂದರು.
ಗೀತಾ ಅವರು ನನ್ನ ಜೊತೆಗೆ ೩೮ ವರ್ಷ ಸಂಸಾರ ಮಾಡಿzರೆ. ಇನ್ನೇನು ಅನುಭವ ಬೇಕು. ಜೀವನದಲ್ಲಿ ಸಾಕಷ್ಟು ನೋಡಿzರೆ. ಭೂಮಿ ತಾಯಿಗೆ ಹೆಣ್ಣನ್ನು ಹೋಲಿಸುತ್ತಾರೆ. ಹಾಗಾಗಿ ಗೀತಾ ಅವರನ್ನು ಯಾಕೆ ಒಮ್ಮೆ ಸಂಸದೆ ಮಾಡಬಾರದು ಎಂದರು. ಹಿಂದಿನ ಚುನಾವಣೆ ಸೋಲಿನ ಬಗ್ಗೆ ಹೇಳುತ್ತಾ ಆಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ ಎಂಬ ಹಾಡು ಹೇಳಿ ಹುರಿದುಂಬಿಸಿದರು.