ಶಿವಮೊಗ್ಗ,ಮಾ.೨೦: ನಗರದಲ್ಲಿ ಗಾಂಜಾ ಹಾವಳಿ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಅಪರಾಧ ತಡೆ ಹಾಗೂ ಮಾನವ ಹಕ್ಕುಗಳ ಭಾರತ್ ಪರಿಷತ್ ವತಿಯಿಂದ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಕೆಲವು ಕಾಲೇಜುಗಳು ರಾಗಿಗುಡ್ಡ, ಟಿಪ್ಪುನಗರದ ಎಡಬಲ ಮತ್ತು ಬಲಭಾಗ ಮತ್ತು ಇತರ ಅನೇಕ ಕಡೆಗಳಲ್ಲಿ ಗಾಂಜಾ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಯುವಕರು ದಾರಿ ತಪ್ಪುತ್ತಿದ್ದಾರೆ.
ಕಾಲೇಜುಗಳಲ್ಲಿಯೂ ಸಹ ಗಾಂಜಾ ಮಾರಾಟವಾಗುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಬೇಕು. ಇಲ್ಲದಿದ್ದರೆ ಯುವಕರು ದಾರಿತಪ್ಪುತ್ತಾರೆ ಎಂದು ಮನವಿದಾರರು ತಿಳಿಸಿದರು.
ಇದನ್ನು ತಡೆಗಟ್ಟುವಂತೆ ಆಗ್ರಹಿಸಿ ನಾವು ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಸಾರ್ವಜನಿಕರಿಗೂ ಮನವಿ ಮಾಡಿದ್ದೇವೆ. ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಈ ಗಾಂಜಾ ಹಾವಳಿಯಿಂದ ಸಾರ್ವಜನಿಕರು ಶಾಂತಿಯಿಂದ ಜೀವನ ಮಾಡುವುದೇ ಕಷ್ಟವಾಗುತ್ತದೆ. ಆದ್ದರಿಂದ ಇದನ್ನು ತಡೆಗಟ್ಟಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷರಾದ ಅಬ್ದುಲ್ ರಹೀಮ್, ಜಿಲ್ಲಾ ಮಹಿಳಾ ಕಾರ್ಯಧ್ಯಕ್ಷೆ ಕೌಸರ್‌ಬಾನು, ಪ್ರಮುಖರಾದ ತಸ್ಮೀಯಾ ಬಾನು, ಲಕ್ಷ್ಮೀ, ಮಂಜುಳ, ಶಭಾನಾ ಭಾನು, ಇಬ್ರಾಹಿಂ, ರತ್ನ ಸೇರಿದಂತೆ ಹಲವರಿದ್ದರು