Site icon TUNGATARANGA

ಮಗನಿಗೆ ಟೀಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಂಡಾಯವಾಗಿ ಸ್ವರ್ಧಿಸುವ ಮಾತಾನಾಡಿದ್ದಾರೆ: ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಟಿ.ಮೇಘರಾಜ್

ಶಿವಮೊಗ್ಗ,ಮಾ.೨೦: ಕೆ.ಎಸ್.ಈಶ್ವರಪ್ಪನವರು ತಮಗಾದ ಅನ್ಯಾಯವನ್ನು ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಅದು ಪಕ್ಷದ ಚೌಕಟ್ಟಿನಲ್ಲಿರಬೇಕು. ಅವರ ಬಗ್ಗೆ ಪಕ್ಷ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳತ್ತೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಟಿ.ಮೇಘರಾಜ್ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆ.ಎಸ್.ಈಶ್ವರಪ್ಪನವರು ಬಿಜೆಪಿ ಪಕ್ಷದ ವಿರುದ್ಧವೇ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಯಾವ ಕ್ರಮವನ್ನು ಕೈಗೊಳ್ಳುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಜಿಲ್ಲಾಧ್ಯಕ್ಷನಾಗಿ ಅವರೊಂದಿಗೆ ನಾನು ಮಾತನಾಡಿದ್ದೇನೆ. ಪಕ್ಷದ ಮುಖಂಡರು ಕೂಡ ಮಾತನಾಡಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ ಅವರ ಮಗನಿಗೆ ಟಿಕೇಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅವರು ಬಂಡಾಯವಾಗಿ ಸ್ಪರ್ಧಿಸುವ ಮಾತನಾಡಿದ್ದಾರೆ. ಹಾಗೆ ಮಾತನಾಡುವ ಹಕ್ಕು ಅವರಿಗಿದೆ ಅದು ತಪ್ಪಲ್ಲ ಆದರೆ, ಪಕ್ಷದ ವಿಷಯಕ್ಕೆ

ಬಂದಾಗ ವರಿಷ್ಟರ ನಿರ್ಧಾರವೇ ಮುಖ್ಯವಾಗುತ್ತದೆ. ಅವರು ತಮ್ಮ ನಿರ್ಧಾರವನ್ನು ವಾಪಾಸ್ಸು ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಖಂಡಿತ ಅವರ ವಾಪಾಸ್ಸು ಬರುತ್ತಾರೆ ಎಂದರು.


ಅವರು ಸ್ವತಂತ್ರವಾಗಿ ಸ್ಪರ್ಧಿಸುವುದೇ ಆದರೆ, ಬಿಜೆಪಿಗೆ ಒಂದು ಚೌಕಟ್ಟು ಇದೆ. ಪಕ್ಷದ ಮುಖಂಡರು ನಿರ್ಧ್ಯಾಕ್ಷಿಣವಾಗಿ ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಅಷ್ಟು ಮುಂದುವರೆಯುವುದಿಲ್ಲ.

ಎಲ್ಲವೂ ಬಗೆಹರಿಯುತ್ತದೆ ಎಂಬ ವಿಶ್ವಾಸ ನಮ್ಮದು ಎಂದ ಅವರು, ಅವರ ಜೊತೆಗೆ ಹಲವು ಮಹಾನಗರ ಪಾಲಿಕೆ ಸದಸ್ಯರು ಕೂಡ ಇದ್ದಾರಲ್ಲ ಎಂಬ ಪತ್ರಕರ್ತರ ಮತ್ತೊಂದು ಪ್ರಶ್ನೆಗೆ ಉತ್ತರಿಸಿ ಎಲ್ಲವೂ ಕಾಲ ನಿರ್ಣಯ ಮಾಡುತ್ತೆ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರವನ್ನು ಖಂಡಿತ ಪಕ್ಷದ ಮುಖಂಡರು ತೆಗೆದುಕೊಳ್ಳುತ್ತಾರೆ ಎಂದರು.

Exit mobile version