ಶಿವಮೊಗ್ಗ,ಮಾ.20:ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದಲ್ಲಿ ಒಂದು ಕೋಮಿನ ಒತ್ತಡಕ್ಕೆ ಮಣಿದು 1999ರಲ್ಲೆ ಸರ್ಕಾರದಿಂದ ಉದ್ಘಾಟನೆಯಾಗಿದ್ದ ರಾಜ ವೀರ ಮದಕರಿ ನಾಯಕರ ಹೆಸರಿನ ಮಹಾದ್ವಾರವನ್ನು ದಾವಣಗೆರೆ ಜಿಲ್ಲಾಧಿಕಾರಿ ಏಕಾಎಕಿ ತೆರವು ಮಾಡಿರುವುದು ಅಕ್ಷಮ್ಯ ಅಪರಾಧಕೃತ್ಯವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಮಾಜಿ ಖಜಾಂಚಿ ವೈ.ಬಿ.ಚಂದ್ರಕಾಂತ್ ಖಂಡಿಸಿದ್ದಾರೆ.
ವಾಲ್ಮೀಕಿ ನಾಯಕ, ಮದಕರಿ ನಾಯಕ ಸಮಾಜ ಕೆಚ್ಚೆದೆಯ ಸಮಾಜವಾಗಿದೆ. ಇಂತಹ ಸಮಾಜದ ನೂರಾರು ರಾಜರುಗಳು ದೇಶಾದ್ಯಂತ ಸಾವಿರಾರು ವರ್ಷಗಳ ಹಿಂದಿನಿಂದ ರಾಜ್ಯಗಳನ್ನು ಕಟ್ಟಿ ಆಡಳಿತ ಮಾಡಿ ಪ್ರಜೆಗಳ ರಕ್ಷಣೆ ಮಾಡಿದ ಸಮಾಜವಾಗಿದೆ. ಇಂತಹ ಸಮಾಜಕ್ಕೆ ಸೇರಿದವರಾದ ಚಿತ್ರದುರ್ಗದ ರಾಜ ವೀರ ಮದಕರಿ ನಾಯಕರು ಒಬ್ಬರು. ಇಂತವರ ಹೆಸರಿನಲ್ಲಿ ಭಾನುವಳ್ಳಿ ಗ್ರಾಮದ ಪ್ರಮುಖ ವೃತ್ತಕ್ಕೆ 1999 ರಲ್ಲಿಯೇ ಮದಕರಿ ನಾಯಕರ ಹೆಸರು ಇಟ್ಟಿದ್ದು ಅಲ್ಲದೆ ಅದೆ ವೃತ್ತದಲ್ಲಿ ಅವರ ಹೆಸರಿನಲ್ಲಿ ಬೃಹತ್ ಮಹಾದ್ವಾರ ಹಾಕಲಾಗಿತ್ತು. ಇಂತಹ ಮಹಾದ್ವಾರವನ್ನು ಮಾರ್ಚ್ ರಂದು ನಾಯಕ ಸಮುದಾಯದ ಪ್ರಬಲ ವಿರೋಧದ ನಡುವೆಯೂ ಬಿಗಿ ಪೆÇೀಲೀಸ್ ಬಂದೋಬಸ್ತ್ನಲ್ಲಿ ಜಿಲ್ಲಾಧಿಕಾರಿಗಳು ತೆರವುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮದಕರಿ ನಾಯಕರ ಹೆಸರಿರುವ ಮಹಾದ್ವಾರವನ್ನು ತೆರವು ಮಾಡಿದ ಕೆಲವೆ ದಿನಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆ ಅಗಿರುವುದರಿಂದ, ಚುನಾವಣೆಗೆ ಯಾವುದೆ ತೊಂದರೆ ಆಗದಿರಲೆಂದು ನಾಯಕ ಸಮಾಜ ತಾಳ್ಮೆ ವಹಿಸಿರುತ್ತದೆ, ಚುನಾವಣೆ ಮುಗಿದ ಕೂಡಲೆ ಈ ಕ್ರಮದ ವಿರುದ್ದ ಸಮಾಜದಿಂದ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.
ಇಡಿ ನಾಯಕ ಸಮಾಜ ಬೀದಿಗಿಳಿದು ಹೋರಾಟ ಮಾಡುವ ಮೊದಲು ತೆರವು ಮಾಡಲಾಗಿರುವ ಮಹಾದ್ವಾರವನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ತ್ವರಿತವಾಗಿ ಮರು ಸ್ಥಾಪನೆ ಮಾಡಬೇಕು, ಇಲ್ಲದಿದ್ದಲ್ಲಿ ಸಮಾಜದ ಶಕ್ತಿ ಏನೆಂದು ತೋರಿಸಬೇಕಾಗುತ್ತದೆ ಎಂದು ಜಿಲ್ಲಾ ವಾಲ್ಮಿಕಿ ನಾಯಕ ಸಮಾಜದ ಮಾಜಿ ಖಜಾಂಚಿ ವೈ.ಬಿ.ಚಂದ್ರಕಾಂತ್ ತಮ್ಮ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.