ಶಿವಮೊಗ್ಗ: ರಾಷ್ಟ್ರದ ಹಿತಕ್ಕೆ ಈ ಸಮಾವೇಶ ಭದ್ರ ಬುನಾದಿಯಾಗಿದೆ. ಶಿವಮೊಗ್ಗಕ್ಕೆ ಮೋದಿ ಆಗಮಿಸುತ್ತಿರುವುದರಿಂದ ಪ್ರಜಾಪ್ರಭುತ್ವ ಹಬ್ಬದ ವಾತಾವರಣ ಉಂಟಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮ ಸ್ಥಳಕ್ಕೆ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಒಂದೂವರೆ ವರ್ಷದಲ್ಲಿ ಮೂರನೇ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ರಾಷ್ಟ್ರದ ಹಿತವನ್ನು ಹಿಡಿದುಕೊಂಡು ಈ ಸಮಾವೇಶ ಭದ್ರ ಬುನಾದಿಯಾಗುತ್ತದೆ ಎಂದರು.
ಮೋದಿಯವರ ಮೇಲೆ ಸಾಕಷ್ಟು ವಿಶ್ವಾಸ ಇರುವ ವ್ಯಕ್ತಿ ಈಶ್ವರಪ್ಪನವರು. ಅವರು ನಮ್ಮ ಜೊತೆಯಲ್ಲಿ ಬರ್ತಾರೆ ಎನ್ನುವ ವಿಶ್ವಾಸ ಇದೆ. ಬಿಜೆಪಿಯವರ ಜೊತೆ ಜೆಡಿಎಸ್ ಕಾರ್ಯಕರ್ತರು ಕೂಡ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂದರು.