Site icon TUNGATARANGA

ಲೋಕಸಭಾ ಚುನಾವಣೆಯಲ್ಲಿ /ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಘೋಷಣೆ


ಸಾಗರ(ಶಿವಮೊಗ್ಗ),ಮಾ.೧೬:ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಬಡವರ ದೀನ ದಲಿತರ ಪರವಿರುವ ೫ ಗ್ಯಾರಂಟಿಗಳ ಅನುಷ್ಠಾನಗೊಳಿಸುವ ಮೂಲಕ ಜನಪರ

ಆಡಳಿತಕ್ಕೆ ಹೆಸರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ

ಆಡಳಿತ ಹಾಗೂ ದಲಿತ ನಾಯಕ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜನಪರ ಚಿಂತನೆಯನ್ನು ಗೌರವಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾಂಗ್ರೆಸ್ ಪಕ್ಷ ಬೆಂಬಲಿಸಲು ಶನಿವಾರ ಸಾಗರದ ದಲಿತಸಂಘರ್ಷ ಸಮಿತಿ ಸಭೆಯಲ್ಲಿ

ನಿರ್ಣಯಿಸಲಾಯಿತು ಎಂದು ಪತ್ರಿಕೆಗಳಿಗೆ ಜಿಲ್ಲಾ ಸಂಚಾಲಕ ಕೆ ವಿ ನಾಗರಾಜ್ ಅರಳಸುರಳಿಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಸುರೇಶ ಸ್ವಾಮಿ ತಾಲ್ಲೂಕು ಸಂಚಾಲಕ ಅಣ್ಣಪ್ಪ ಕೆ ಕೆಳದಿಪುರ ಪ್ರಮುಖರಾದ ಆರಿಫ್ ಸಾಗರ ,ರಮೇಶ್ ಬಂದಗದ್ದೆ, ಸತೀಶ್ ಬೇಲೂರ್,

ನಾಸಾರುದ್ದಿನ್ ಸಾಗರ್, ಹುಚ್ಚರಾಯಪ್ಪ ,ಕಾರೆ ಹೊಂಡಾ ಚಂದ್ರಶೇಖರ್ ಸೈದೂರ್, ಮಾಲತೇಶ್ ಕಾನ್ಲೆಪುರ, ಮಂಜಪ್ಪ ಕೆಳದಿಪುರ ಮೊದಲಾದವರು ಉಪಸ್ಥಿತರಿದ್ದರು.

Exit mobile version