ಶಿವಮೊಗ್ಗ, ಜ.01:
ಭದ್ರಾ ಜಲಾಶಯದ 2020-21ನೇ ಸಾಲಿನ ಬೇಸಿಗೆ ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡ ಕಾಲುವೆಗಳಿಗೆ ನೀರನ್ನು ಹರಿಸಲಾಗುತ್ತಿದ್ದು, ಎಡದಂಡೆ ನಾಲೆಗೆ ಜನವರಿ 01 ರ ರಾತ್ರಿಯಿಂದ ಮೇ-01ರ ರಾತ್ರಿಯವರೆಗೆ ಹಾಗೂ ಬಲದಂಡೆ ನಾಲೆ, ಆನವೇರಿ ಶಾಖಾನಾಲೆ, ದಾವಣಗೆರೆ ಶಾಖಾನಾಲೆ, ಮಲೇಬೆನ್ನೂರು ಶಾಖಾನಾಲೆ ಮತ್ತು ಹರಿಹರ ಶಾಖಾನಾಲೆಗಳಿಗೆ ಜನವರಿ 06 ರ ರಾತ್ರಿಯಿಂದ ಮೇ-07ರ ರಾತ್ರಿಯವರೆಗೆ ನೀರನ್ನು ಹರಿಯಬಿಡಲಾಗುವುದು ಎಂದು ಕನೀನಿನಿ. ಬಿ.ಆರ್ ಪ್ರಾಜೆಕ್ಟ್ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸಾರ್ವಜನಿಕರು ಮತ್ತು ರೈತರು ಕಾಲುವೆ ಪಾತ್ರಗಳಲ್ಲಿ ತಿರುಗಾಡುವುದು, ದನಕರುಗಳನ್ನು ತೊಳೆಯುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.