Site icon TUNGATARANGA

ಅಪರಿಚಿತ ವ್ಯಕ್ತಿ ಸಾವು !


ಶಿವಮೊಗ್ಗ, ಮಾರ್ಚ್ 14
     ಮೆಗ್ಗಾನ್ ಆಸ್ಪತ್ರೆಯ ಶರಾವತಿ ಬ್ಲಾಕ್ ಬಳಿ ಮಲಗಿದ್ದ ಸುಮಾರು 40 ರಿಂದ 45 ವಯಸ್ಸಿನ ಅಪರಿಚಿತ ವ್ಯಕ್ತಿಯನ್ನು ಮಾ.11 ರಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದಾಗ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ.


    ಅಪರಿಚಿತ ಮೃತ ವ್ಯಕ್ತಿಯು ಸುಮಾರು 5 ಅಡಿ 10 ಇಂಚು ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ 3 ಇಂಚು ಉದ್ದದ ಕಪ್ಪು ಕೂದಲು, ಸುಮಾರು 2 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಬಣ್ಣದ ಕುರುಚಲು ಗಡ್ಡ ಮೀಸೆ ಇರುತ್ತದೆ.

ಮೃತನ ಬಲಗೈನ ಮುಂಗೈ ಒಳಭಾಗದಲ್ಲಿ ಅಮ್ಮ ಎಂಬ ಹಚ್ಚೆ ಗುರುತು ಹಾಗೂ ಎಡಗೈನ ಮುಂಗೈನ ಒಳಭಾಗದಲ್ಲಿ ಮಂಜು ಎಂಬ ಹಚ್ಚೆ ಗುರುತು ಇರುತ್ತದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ

ದೊಡ್ಡಪೇಟೆ ಪೊಲೀಸ್ ಠಾಣೆ, ದೂ.ಸಂ: 08182-261414, 9611761255 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ. 

Exit mobile version