Site icon TUNGATARANGA

ನಾಳೆ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭ: ಶಿವಮೊಗ್ಗದ ಸಿದ್ದತೆ!


ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿ ಹಾಗೂ ರೂಪಾಂತರ ವೈರಸ್ ಸೋಂಕಿನ ಭೀತಿಯ ನಡುವೆಯೂ ನಾಳೆಯಿಂದ ಶಾಲಾ-ಕಾಲೇಜು ಆರಂಭಗೊಳ್ಳುತ್ತಿದೆ. ನಾಳೆ ಮುಂಜಾಗ್ರತಾ ಕ್ರಮವಾಗಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಳ್ಳಲಿವೆ. ಇಂತಹ ಶಾಲಾ-ಕಾಲೇಜು ಆರಂಭದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಅನುಸರಿಸಬೇಕಾದಂತ ಬಹುಮುಖ್ಯ ಸೂಚನೆಗೆಳು ಈ ಕೆಳಗಿನಂತಿವೆ ಎಂದು ಜಿಪಂ ಸಿಇಓ ಸೂಚನೆ ಮೇರೆಗೆ ಶಿಕ್ಷಣ ಇಲಾಖೆ ತಿಳಿಸಿದೆ.
ಶಾಲಾ ಆರಂಭದ ಬಗ್ಗೆ ವಿದ್ಯಾರ್ಥಿ’ಗಳಿಗೆ ಸೂಚನೆಗಳು ಇಂತಿವೆ.
10 ನೇ ತರಗತಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ಅರ್ಧ ದಿನ ಮಾತ್ರ ತರಗತಿ ನಡೆಸಲಾಗುತ್ತದೆ.
ತರಗತಿಯು ಬೆಳಗ್ಗೆ 09.30 ರಿಂದ ಮಧ್ಯಾಹ್ನ 1.00 ರವರೆಗೆ ನಡಯಲಿದೆ.


ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲಿ ಶಾಲೆಗೆ ತೆರಳಬೇಕು.
ಒಂದು ತರಗತಿಯಲ್ಲಿ 15 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ಮುಂದುವರೆಯುತ್ತವೆ. ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಊಟ/ತಿಂಡಿ ಮಾಡುವಂತಿಲ್ಲ. ಇತರ ವಿದ್ಯಾರ್ಥಿಗಳೊಂದಿಗೆ ಅಂತರ ಕಾಪಾಡಿಕೊಂಡು ತರಗತಿಯಲ್ಲಿ ತಿಳಿಸಿರುವ ಸ್ಥಳದಲ್ಲಿಯೇ ಕುಳಿತುಕೊಳ್ಳತಕ್ಕದ್ದು. ಯಾವುದೇ ವಿದ್ಯಾರ್ಥಿಗಳಲ್ಲಿ ಕೆಮ್ಮು, ಶೀತ, ಜ್ವರ ಇತರ ಖಾಯಿಲೆಯ ಲಕ್ಷಣ ಕಂಡುಬಂದರೆ ಪ್ರತ್ಯೇಕ ಐಸೊಲೇಷನ್ ವ್ಯವಸ್ಥೆ ಮಾಡಿ ಪೋಷಕರಿಗೆ ಪರೀಕ್ಷೆ ಮಾಡಿಸಲು ಸೂಚಿಸಲಾಗುತ್ತದೆ.
ಕೆಮ್ಮು, ಶೀತ, ಜ್ವರ ಇತರ ಯಾವುದೇ ಖಾಯಿಲೆಯ ಲಕ್ಷಣವಿದ್ದರೆ ಮಕ್ಕಳು ಮನೆಯಲ್ಲಿ ಇರತಕ್ಕದ್ದು.
ಕೊವಿಡ್ ಪಾಸಿಟಿವ್ ಬಂದ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಅವಕಾಶವಿರುವುದಿಲ್ಲ. ಆದರೆ ಕಳೆದ 15 ದಿನಗಳಿಂದ ಕೋವಿಡ್ ಬಂದು ಗುಣಮುಖರಾಗಿರುವ ವಿದ್ಯಾರ್ಥಿಗಳು ವರದಿಯನ್ನು ತಲುಪಿಸತಕ್ಕದ್ದು. ನಂತರದಲ್ಲಿ ಶಾಲೆಗೆ ಬರಲು ಅವಕಾಶ ನೀಡಲಾಗುತ್ತದೆ.

ಜಿ.ಪಂ. ಸಿಇಓ ವೈಶಾಲಿ


ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು, ಪ್ರತ್ಯೇಕ ಸ್ಯಾನಿಟೈಸರ್, ಸೋಪ್, ಟವಲ್, ಟಿಶ್ಯುಪೇಪರ್ ಬಳಸುವುದು. (ಇತರರೊಂದಿಗೆ ಹಂಚಿಕೊಳ್ಳುವಂತಿಲ್ಲ)
ತರಗತಿಯ ಇತರ ನೋಟ್ಸ್, ಬರವಣಿಗೆಯ ಸಾಮಗ್ರಿಗಳನ್ನು ಸಹ ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ
ನಿಗಧಿತ ವೇಳಾಪಟ್ಟಿಯಂತೆ ಪಠ್ಯಪುಸ್ತಕ, ನೋಟ್ಸ್‍ಗಳನ್ನು ಮಾತ್ರ ಶಾಲೆಗೆ ತರುವುದು. ಸಾಮೂಹಿಕ ಪ್ರಾರ್ಥನೆ ನಡೆಸಲು ಅವಕಾಶವಿಲ್ಲ. ವಿದ್ಯಾರ್ಥಿಗಳು ತಾವಿರುವ ಕೊಠಡಿಯಿಂದಲೇ ಪ್ರಾರ್ಥನೆ ನಡೆಸುವುದು.
ಶಾಲಾ ಆರಂಭದ ಬಗ್ಗೆ ಪೋಷಕರಿಗೆ ಸೂಚನೆಗಳು
ಕೆಮ್ಮು, ಶೀತ, ಜ್ವರದ ಲಕ್ಷಣವಿದ್ದವರು ಪರೀಕ್ಷೆ ಮಾಡಿಸಿಕೊಂಡು ಅದರ ದಾಖಲೆಯನ್ನು ನೀಡತಕ್ಕದ್ದು.
ಕೆಮ್ಮು, ಶೀತ, ಜ್ವರ ಇತರ ಯಾವುದೇ ಖಾಯಿಲೆಯ ಲಕ್ಷಣವಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವಂತಿಲ್ಲ.
ಮಕ್ಕಳಿಗೆ ಶಾಲೆಗೆ ಕಳುಹಿಸಲು ಯಾವುದೇ ಖಾಯಿಲೆ ಇಲ್ಲವೆಂದು, ಶಾಲೆಗೆ ಕಳಿಸಲು ಒಪ್ಪಿಗೆ ಇದೆ ಎಂಬ ದೃಢೀಕರಣಪತ್ರವನ್ನು ಕಡ್ಡಾಯವಾಗಿ ಶಾಲೆಗೆ
ನೀಡತಕ್ಕದ್ದು.
ಮಕ್ಕಳಿಗೆ ಪ್ರತ್ಯೇಕವಾದ ಸ್ಯಾನಿಟೈಸರ್, ಮಾಸ್ಕ್, ಟವಲ್, ಸೋಪ್, ಟಿಶ್ಯುಗಳನ್ನು ಬಳಸುವಂತೆ ತಿಳಿಸುವುದು. ಮಕ್ಕಳಿಗೆ ಶಾಲಾ ದಾಖಲಾತಿ ಕಡ್ಡಾಯ.
ಆನ್‍ಲೈನ್ ಮತ್ತು ಆಫ್‍ಲೈನ ತರಗತಿಗಳು ಎರಡೂ ಸಹ ನಡೆಯುತ್ತವೆ.
ಪ್ರತಿ 15 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ನಿಗಾವಹಿಸುವ ಜವಾಬ್ದಾರಿಯನ್ನು ನೀಡಲಾಗಿರುತ್ತದೆ.
ದೈಹಿಕ ಶಿಕ್ಷಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲು ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಾರೆ.
ಕೊವಿಡ್ ಪಾಸಿಟಿವ್ ಬಂದ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಅವಕಾಶವಿರುವುದಿಲ್ಲ. ಆದ್ರೇ ಕಳೆದ 15 ದಿನಗಳಿಂದ ಕೊವಿಡ್ ಬಂದು ಗುಣಮುಖರಾಗಿರುವ ವಿದ್ಯಾರ್ಥಿಗಳು ವರದಿಯನ್ನು ತಲುಪಿಸತಕ್ಕದ್ದು. ನಂತರದಲ್ಲಿ ಶಾಲೆಗೆ ಬರಲು ಅವಕಾಶ ನೀಡಲಾಗುವುದು.
ಈ ಮೇಲ್ಕಂಡ ಸೂಚನೆಗಳನ್ನು ಅನುಸರಿಸಲು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶಿಕ್ಷಣ ಇಲಾಖೆ ತಿಳಿಸಿದೆ.
ಎಂ.ಎಲ್. ವೈಶಾಲಿ,
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಶಿವಮೊಗ್ಗ.
ಡಿಡಿಪಿಐ, ಸಾರ್ವಜನಿಕ ಶಿಕ್ಷಣ ಇಲಾಖೆ

Exit mobile version