ಶಿವಮೊಗ್ಗ: ಮಾರ್ಚ್ 2023-24 ನೇ ಸಾಲಿಗೆ ಶಿವಮೊಗ್ಗ ಜಿಲ್ಲೆ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರ್ಕಾರದಿಂದ ಘೋಷಣೆಯಾಗಿದ್ದು, ಮುಂದಿನ ದಿನಗಳಲ್ಲಿ ಬರದಿಂದ ಜನ, ಜಾನುವಾರುಗಳಿಗೆ ಕುಡಿಯುವ
ನೀರು ಮತ್ತು ಮೇವು ಕೊರತೆ ಉಂಟಾದಲ್ಲಿ ಸಾರ್ವಜನಿಕರಿಂದ ಹಾಗೂ ಸರ್ಕಾರದಿಂದ ಬರುವ ವರದಿಗಳ ದೂರವಾಣಿ ಕರೆಗಳನ್ನು ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ-08182-221010, ಜಿಲ್ಲಾ ಜಲಸೇವಾ ನಿಯಂತ್ರಣ ಕೊಠಡಿ, ಜಿಲ್ಲಾ ಪಂಚಾಯತ್-08182-267226/7353220406, ಉಪನಿರ್ದೇಶಕರು, ಪಶುಪಾಲನಾ ಇಲಾಖೆ, ಶಿವಮೊಗ್ಗ -08182-222969, ತಹಶೀಲ್ದಾರ್
ಶಿವಮೊಗ್ಗ-08182-279311, ಭದ್ರಾವತಿ-08282-263466, ತೀರ್ಥಹಳ್ಳಿ-08181-228239, ಸಾಗರ-08183-226074, ಶಿಕಾರಿಪುರ-08187-222239, ಸೊರಬ-8184272241, ಹೊಸನಗರ-08185-221235 ಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.