Site icon TUNGATARANGA

ರಾಜ್ಯ ಸರ್ಕಾರ ಸರ್ಕಾರಿ ನೌಕರರ ತುಟ್ಟಿಭತ್ಯೆವನ್ನು ಶೇ.3.75ರಷ್ಟು ಮಂಜೂರು ಮಾಡಿರುವುದು ಅತ್ಯಂತ ಸ್ವಾಗತದ ವಿಷಯ :ಆಯನೂರು ಮಂಜುನಾಥ್

ಶಿವಮೊಗ್ಗ,ಮಾ.೧೪: ರಾಜ್ಯ ಸರ್ಕಾರ ಸರ್ಕಾರಿ ನೌಕರರ ತುಟ್ಟಿಭತ್ಯೆವನ್ನು ಶೇ.೩.೭೫ರಷ್ಟು ಮಂಜೂರು ಮಾಡಿರುವುದು ಅತ್ಯಂತ ಸ್ವಾಗತದ ವಿಷಯ ಎಂದು ಆಯನೂರು ಮಂಜುನಾಥ್ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತುಟ್ಟಿಭತ್ಯೆವನ್ನು ಮಂಜೂರು ಮಾಡಿದೆ. ಬೆಲೆ ಏರಿಕೆಯ ಈ ಕಾಲಘಟ್ಟದಲ್ಲಿ ನೌಕರರಿಗೆ ಒಂದಿಷ್ಟು ಸಹಾಯವಾಗುತ್ತದೆ. ಇದಕ್ಕಾಗಿ ಸರ್ಕಾರಕ್ಕೆ ೧೯೭೦ ಕೋಟಿ ಹೆಚ್ಚಿನ ಹೊರೆಯಾಗುತ್ತದೆ. ರಾಜ್ಯ ಸರ್ಕಾರ ನೌಕರರ ಹಿರತಕ್ಷಣೆ ಮಾಡುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟಕ್ಕೆ ಅಭಿನಂದನೆಗಳು ಎಂದರು.


ಅದೇ ರೀತಿ ವೇತನದ ಆಯೋಗದ ವರದಿಯೂ ಕೂಡ ಜಾರಿಗೆ ಬರಬೇಕಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಮಧ್ಯಂತರವಾಗಿ ಶೇ.೧೭.೧ರಷ್ಟನ್ನು ನೀಡಿದೆ. ಆದರೆ ಪೂರ್ಣ ಪ್ರಮಾಣದ ವರದಿ ಇನ್ನೂ ಕೈಸೇರಬೇಕಾಗಿದೆ. ನಾಳೆ ಆ ವರದಿ ಸಿಗಬಹುದು. ಲೋಕಸಭಾ ಚುನಾವಣೆಯ ನೀತಿ ಸಂಹಿತೆಗಿಂತ ಮೊದಲು ರಾಜ್ಯ ಸರ್ಕಾರ ಇದನ್ನು ಜಾರಿಗೆ ತರಬೇಕಾಗಿದೆ. ಇದರಿಂದ ನೌಕರರ ಕುಟುಂಬಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.


ಹಾಗೆಯೇ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಮಾಡಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿತ್ತು. ಅದರಂತೆ ಆದಷ್ಟು ಬೇಗ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಉಳಿದಂತೆ ಶಿಕ್ಷಕರ ಸಮಸ್ಯೆಗಳಿವೆ, ಒಟ್ಟಾರೆ ರಾಜ್ಯ ಸರ್ಕಾರಿ ನೌಕರರ ಪರವಾಗಿ ನಾನು ಯಾವತ್ತು ಕೆಲಸ ಮಾಡುತ್ತೇವೆ ಎಂದರು.


ವಿಧಾನಪರಿಷತ್ತಿನ ನೈರುತ್ಯ ಪದವಿದರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಈ ಬಾರಿ ನನಗೆ ಟಿಕೇಟ್ ಸಿಕ್ಕೇ ಸಿಗುತ್ತದೆ. ಒಂದು ಪಕ್ಷ ಸಿಗದಿದ್ದರು ಕೂಡ ಕಾಂಗ್ರೆಸ್ ಪಕ್ಷದ ಪರವಾಗಿಯೇ ನಾವು ಇರುತ್ತೇವೆ. ನನಗೆ ಸಿಗಬೇಕು ಇಲ್ಲ ಎಸ್.ಪಿ. ದಿನೇಶ್ ಅವರಿಗೆ ಸಿಗಬೇಕು. ಎಸ್.ಪಿ. ದಿನೇಶ್‌ಗೆ ಸಿಕ್ಕರೂ ಕೂಡ ಅವರನ್ನು ಗೆಲ್ಲಿಸುತ್ತೇವೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಏಸುದಾಸ್, ಜಿ.ಪದ್ಮನಾಬ್, ಶಿ.ಜು.ಪಾಶ, ತಿಮ್ಲಾಪುರ ಲೋಕೇಶ್, ಕೃಷ್ಣ, ಎಸ್.ಬಿ.ಪಾಟೀಲ್, ಸೈಯ್ಯದ್ ಅಡ್ಡು, ಆಯನೂರು ಸಂತೋಷ್ ಸೇರಿದಂತೆ ಮುಂತಾದವರು ಇದ್ದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸತತ ನಾಲ್ಕನೇ ಬಾರಿಗೆ ಕೇಂದ್ರದ ಹಾಗೂ ರಾಜ್ಯದ ನಾಯಕರು ಒಮ್ಮತದಿಂದ ಆಯ್ಕೆ ಮಾಡಿ ಜಿಲ್ಲೆಯ ಜನರಸೇವೆ ಮಾಡಲು ಮತ್ತೊಮ್ಮೆ ಅವಕಾಶ ನೀಡಿದ್ದು, ಗುರುವಾರದ ಈ ಪವಿತ್ರ ದಿನದಂದು ಶಿವಮೊಗ್ಗದ ತಿಲಕ್ ನಗರದಲ್ಲಿರುವ ನನ್ನ ಆರಾಧ್ಯ ದೈವವಾದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ಕೊಟ್ಟು ಕ್ಷೇತ್ರದ ಜನತೆಯ ಸೇವೆ ಸಲ್ಲಿಸುವ ಶಕ್ತಿ ಇನ್ನಷ್ಟು ನೀಡಲಿ ಎಂದು ಭಕ್ತಿಯಿಂದ ಆರಾಧನೆ ಮಾಡಿ ದೇಶದ ಹಾಗೂ ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಮಯದಲ್ಲಿ ರಾಜ್ಯ ಪ್ರಕೋಷ್ಟಗಳ ಸಂಯೋಜಕ ದತ್ತಾತ್ರೇಯ, ಪ್ರಮುಖರಾದ ಹರೀಶ್, ಗಿರೀಶ್, ಸುಧೀಂದ್ರ ಕಟ್ಟೆ ಅವರು ಜೊತೆಗಿದ್ದರು.

Exit mobile version