ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ,ಶಿವಮೊಗ್ಗ ಶಾಖೆಯಲ್ಲಿ
ದಿನಾಂಕ: 8.3.2024 ರಂದು ಶುಕ್ರವಾರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಭಜನಾ ಪರಿಷತ್ ಶಿವಮೊಗ್ಗ, ಮತ್ತು ನಗರದ ಎಲ್ಲಾ ಭಜನಾ ಮಂಡಳಿಗಳ ಒಕ್ಕೂಟ ಇವರುಗಳ ಸಹಯೋಗದಲ್ಲಿ 16ನೇ ವರ್ಷದ ಅಖಂಡ ಭಜನೆಯನ್ನು ಏರ್ಪಡಿಸಲಾಗಿದೆ.
ಶರಾವತಿ ನಗರ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಾರ್ಚ್ 8ರ ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ,ಮತ್ತು ಸಾಯಂಕಾಲ 6:00. ಗಂಟೆಗೆ ಜಲಾಭಿಷೇಕ, ಕ್ಷೀರಾಭಿಷೇಕ. ಪಂಚಾಮೃತ ಅಭಿಷೇಕ. ರುದ್ರಾಭಿಷೇಕ,ಪೂಜಾ ಕೈಂಕರ್ಯ ಗಳನ್ನು ಶ್ರೀಮಠದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ವಿಶೇಷ ಪೂಜಾ ಕೈಂಕರ್ಯಗಳು:
ಮಾರ್ಚ್ 8 ರಂದು ಬೆಳಿಗ್ಗೆ 5.30 ರಿಂದ ಏಕವಾರ ರುದ್ರಾಭಿಷೇಕ ಆರಂಭಿಸಲಾಗುವುದು, 6ಕ್ಕೆ ಅಖಂಡ ಭಜನೆ ಉದ್ಘಾಟನೆ,ಬೆಳಗ್ಗೆ 7 ಕ್ಕೆ ಮಹಾಮಂಗಳಾರತಿ ಮಾಡಲಾಗುವುದು.
ಸಂಜೆ 6 ಗಂಟೆಗೆ ರುದ್ರಾಭಿಷೇಕ, ರಾತ್ರಿ 7:30ಕ್ಕೆ ಮಹಾ ಮಂಗಳಾರತಿ ನಡೆಯುವುದು.
ರಾತ್ರಿ 10 ರಿಂದ ರುದ್ರಾಭಿಷೇಕ, ರಾತ್ರಿ 11:30 ಗಂಟೆಗೆ ಮಹಾಮಂಗಳಾರತಿ ನಡೆಯುವುದು.
ರಾತ್ರಿ 1 ಗಂಟೆಗೆ ರುದ್ರಾಭಿಷೇಕ,ರಾತ್ರಿ 2.30 ಗಂಟೆಗೆ ಮಹಾ ಮಂಗಳಾರತಿ ನಡೆಸಲಾಗುವುದು, ರಾತ್ರಿ 3:00ಗೆ ರುದ್ರಾಭಿಷೇಕ,ಬೆಳಿಗ್ಗೆ 4:30 ಗಂಟೆಗೆ ಮಹಾಮಂಗಳಾರತಿ ಮಾಡಲಾಗುವುದು.
ಮಾರ್ಚ್ 9ರ ಶನಿವಾರದಂದು ಬೆಳಿಗ್ಗೆ 5:00 ಗಂಟೆಗೆ ರುದ್ರಾಭಿಷೇಕ, ಬೆಳಗೆ 6 ಗಂಟೆಗೆ ಅಖಂಡ ಭಜನೆ ಸಮಾರೋಪ, 6:15 ಗಂಟೆಗೆ ಮಹಾಮಂಗಳಾರತಿ ನಡೆಯುವುದು. ದೇವರಿಗೆ ರುದ್ರಾಭಿಷೇಕ, ಬಿಲ್ವಪತ್ರೆ, ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗುವುದು.
ವಿಶೇಷವೆಂದರೆ ಮಾರ್ಚ್ 8 ರ ಬೆಳಿಗ್ಗೆ 6 ರಿಂದ ನಗರದ ವಿವಿಧ ಭಜನಾ ತಂಡಗಳಿಂದ ಶನಿವಾರ ಬೆಳಿಗ್ಗೆ 6:00 ಗಂಟೆಯ ವರೆಗೆ ಅಖಂಡ ಭಜನೆ ಮತ್ತು ಶಿವ ಸಂಕೀರ್ತನೆಗಳನ್ನು ಭಜನಾ ತಂಡಗಳಿಂದ ಏರ್ಪಡಿಸಲಾಗಿದೆ.
ಶ್ರೀ ಆದಿಚುಂಚನ ಗಿರಿ ಶಿಕ್ಷಣ ಟ್ರಸ್ಟ್, ಶಿವಮೊಗ್ಗ ಶಾಖೆಯ
ಹೊರವಲಯ ಗುರುಪುರದ “ಶ್ರೀ ವೀರಸೋಮೇಶ್ವರಸ್ವಾಮಿ ದೇವಾಲಯ” ದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ 6:30ಕ್ಕೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ,ವಿಶೇಷ ಪೂಜೆ ಅಲಂಕಾರಗಳನ್ನು ಮತ್ತು ಜಾಗರಣೆ ಮತ್ತು ಶಿವ ಸಂಕೀರ್ತನೆಗಳನ್ನು,ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುವುದು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ಕೃಪೆಗೆ ಪಾತ್ರರಾಗಬೇಕಾಗಿ,ಶ್ರೀಮಠದ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.