ಎಂ.ಐ.ಒ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಮಂಗಳೂರು ವತಿಯಿಂದ ತೀರ್ಥಹಳ್ಳಿಯಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಎಂ.ಐ.ಒ ಆಸ್ಪತ್ರೆಯ ಸಂದರ್ಭದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ತೀರ್ಥಹಳ್ಳಿ ತಾಲೂಕಿನ ಅರಗ ಸಮೀಪವಿರುವ ಹಿರೆಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮಹತ್ವದ ಘೋ?ಣೆಯನ್ನು ಆಸ್ಪತ್ರೆ ನಿರ್ದೇಶಕರಾದ ಡಾ.ಸುರೇಶ್ ರಾವ್ ಮಾಡಿ
ಮಾತನಾಡುತ್ತಶಾಲೆಯ ಅಭಿವೃದ್ದಿಗೆ ಪೂರಕವಾಗಿ ಬೇಕಾಗಿರುವ ಸಹಾಯ ಸಹಕಾರವನ್ನು ಪೂರೈಸುವಲ್ಲಿ ಹಂತ ಹಂತವಾಗಿ ಎಂ.ಐ.ಒ ಜತೆ ಗೂಡಲಿದೆ. ಶಾಲೆಯ ಅಭಿವೃದ್ದಿಗೆ ಪೂರಕವಾಗಿ ಬೇಕಾಗಿರುವ ಸಹಾಯ ಸಹಕಾರವನ್ನು ಪೂರೈಸುವಲ್ಲಿ ಹಂತ ಹಂತವಾಗಿ ಎಂ.ಐ.ಒ ಶಾಲಾಭಿವೃದ್ಧಿ ಮಂಡಳಿಯ ಜತೆಗೂಡಲಿದೆ ಎಂದರು.+
ಶಿಕ್ಷಣ ಪಡೆದು ಮಕ್ಕಳು ವಿದ್ಯಾವಂತರಾದರೆ, ಸುಸಂಸ್ಕೃತರಾದರೆ ಅದಕ್ಕಿಂತ ಮಿಗಿಲಾದುದು ಏನಿಲ್ಲ. ಈ ಊರಿನಲ್ಲಿ ಸ್ಥಳೀಯರಿಗೆ ಉತ್ತಮ ಚಿಕಿತ್ಸೆ ಸಿಗಲಿ ಎಂಬ ದೃಷ್ಟಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದೇವೆ ಇದು ಈಗ ಕೊನೆ ಹಂತದಲ್ಲಿದ್ದು ಸದ್ಯದಲ್ಲಿಯೇ ಸೇವೆಗೆ ಸಿದ್ಧವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಮಾನ್ಯ ಶಾಸಕರಾದ ಅರಗ ಜ್ಞಾನೇಂದ್ರರು ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವುದು ಅಭಿನಂದನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅರಗ ಜ್ಞಾನೇಂದ್ರ ಅವರು ಮಾತನಾಡುತ್ತ ಎಂ.ಐ.ಒ ಕ್ಯಾನ್ಸರ್ ಸ್ಪೆ?ಲಿಟಿ ಆಸ್ಪತ್ರೆ ಹಾಗೂ ನಿರ್ದೇಶಕರಾದ ಡಾ.ಸುರೇಶ್ ರಾವ್ ಅವರ ಸೇವಾ ಮನೋಭಾವವನ್ನು ಕೊಂಡಾಡಿದರು. ಸಣ್ಣ ಗ್ರಾಮದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿ?ಯ. ನಮ್ಮ ಊರಿನ ಶಾಲೆಯನ್ನು ದತ್ತು ಪಡೆದು ಶಾಲಾಭಿವೃದ್ದಿಗೆ ಸಹಕರಿಸಲು ಮುಂದಾಗಿರುವ ಎಂ.ಐ.ಒ ಸಂಸ್ಥೆಗೆ ಅತ್ಯಂತ ಶ್ರೇಯಸ್ಸು ಲಭಿಸಲಿ ಎಂದು ಶುಭ ಹಾರೈಸಿದರು.
ಶಾಲಾಭಿವೃದ್ಧಿ ಸಮಿತಿ ವತಿಯಿಂದ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಎಂ.ಐ. ಒ ನಿರ್ದೇಶಕರಾದ ಡಾ.ಸುರೇಶ್ ರಾವ್ ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಶಾರದಾ ಪೂಜಾ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಸ್.ಡಿಎಂ.ಸಿ ಅದ್ಯಕ್ಷರಾದ ಉಮೇಶ್ ಎಮ್.ಏ, ಸ್ಥಳೀಯ ಗ್ರಾಮ ಪಂಚಾಯತ್ ಅದ್ಯಕ್ಷರಾದ ಚದ್ರಶೇಖರ್ ಎನ್.ಎನ್. ಸದಸ್ಯರಾದ ರಮೇಶ್, ಪ್ರೇಮ ಹೆಚ್.ಎಮ್, ಸುಜಾತ ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಣೇಶ್ ವೈ, ಶಾಲಾ ಮುಖ್ಯೋಪಾದ್ಯಾಯರಾದ ಲೀಲಾವತಿ, ಪ್ರವೀನ್ ಆರ್, ಮಂಜುನಾಥ ಎಮ್.ಜಿ.ಸೆಲ್ವಕುಮಾರ್, ಮತ್ತು ಮಾಲಾ ಎಸ್.ಪಿ. ಹಾಗೂ ಸ್ಥಳೀಯ ಗಣ್ಯರು, ಎಂ.ಐ.ಒ ಸಿಬ್ಬಂದಿಗಳು, ಮಕ್ಕಳ ಪೋ?ಕರು ಭಾಗವಹಿಸಿದ್ದರು.