Site icon TUNGATARANGA

ರಾಜ್ಯದಲ್ಲಿ ಬರಗಾಲ ಹಾಗೂ ಪಾಕಿಸ್ತಾನ ಜಿಂದಾಬಾದ್ ಷೋಷಣೆಯ ಬಗ್ಗೆ ಮಾಜಿ ಸಿಎಂ ಬಿ.ಎಸ್.ವೈ ಹೇಳಿದ್ದೇನು ?

ಶಿವಮೊಗ್ಗ,ಮಾ.೪: ರಾಜ್ಯದಲ್ಲಿ ಭೀಕರ ಬರಗಾಲ ಕಾಲಿಟ್ಟಿದ್ದು, ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಭೀಕರವಾಗಿದೆ, ಕುಡಿಯುವ ನೀರಿಗೂ ತೊಂದರೆಯಾಗಿದೆ. ಒಂದು ಲೀಟರ್ ನೀರನ್ನು ಕೊಂಡು ಕುಡಿಯುವ ಪರಿಸ್ಥಿತಿ ಬಂದಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.


ಪಾಕಿಸ್ತಾನ ಜಿಂದಾಬಾದ್ ಘೋಷಣೆಗೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿಯನ್ನು ಬೇಗ ಬಿಡುಗಡೆ ಮಾಡಬೇಕು. ವಿಳಂಬ ಏಕೆ ಎಂದು ಅರ್ಥವಾಗುತ್ತಿಲ್ಲ. ಯಾಕೆ ಮುಚ್ಚಿಡುತ್ತಿದ್ದಾರೋ ಗೊತ್ತಿಲ್ಲ? ಆರೋಪಿಗಳು ಯಾರೇ ಆಗಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದ ಅವರು, ಬಾಂಬ್ ಸ್ಪೋಟ ವಿಚಾರಕೂಡ ತಡಮಾಡದೇ ಬಹಿರಂಗ ಪಡಿಸಬೇಕು ಎಂದರು.


ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ೨ನೇ ಪಟ್ಟಿಯೂ ಬಿಡುಗಡೆಯಾಗಲಿದೆ. ಹೊಸಬರಿಗೆ ಹಳಬರಿಗೆ ಆದ್ಯತೆಯ ಬಗ್ಗೆ ನನಗೆ ತಿಳಿದಿಲ್ಲ. ದೆಹಲಿಯ ನಾಯಕರು ಇದನ್ನು ತೀರ್ಮಾನ ಮಾಡುತ್ತಾರೆ. ಮಂಡ್ಯದಿಂದ ಸುಮಲತಾ ಸ್ಪರ್ಧಿಸುವ ವಿಚಾರವು ದೆಹಲಿಯಲ್ಲಿಯೇ ಫೈನಲ್ ಆಗಲಿದೆ ಎಂದರು.


ಶೋಭಾ ಕರಂದ್ಲಾಜೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧದ ಅಭಿಯಾನದ ವಿಷಯಕ್ಕೆ ಅರ್ಥವಿಲ್ಲ. ದುರುದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಇದಕ್ಕೆ ಕವಡೆಕಾಸಿನ ಕೀಮ್ಮತ್ತಿಲ್ಲ ಎಂದರು.

Exit mobile version