Site icon TUNGATARANGA

ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚುತ್ತಿವೆ /ಸಚಿವ ಶರಣಪ್ರಕಾಶ್ ಪಾಟೀಲ್‌ರನ್ನು ಸಿಲ್ಲಿ ಅಂತಾ ಮಾಜಿ ಉಪಮುಖ್ಯಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾದ್ರು ಯಾಕೆ ?

ಶಿವಮೊಗ್ಗ,ಮಾ.೪: ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ದೇಶದ್ರೋಹದ ಕೆಲಸಗಳು ಹೆಚ್ಚಾಗುತ್ತಿವೆ. ಜೊತೆಗೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಬಾಂಬ್ ಬ್ಲಾಸ್ಟ್‌ಗಳು ನಿರಂತರವಾಗಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಭಯೋತ್ಪಾದನೆಯನ್ನು ಮೆಟ್ಟಿ ನಿಲ್ಲುವ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೆ. ಮತ್ತಷ್ಟು ಶಕ್ತಿ ಬರಲಿ ಎಂದು ಅತಿರುದ್ರ ಮಹಾಯಾಗ ಮಾಡುತ್ತಿದ್ದೇವೆ. ಬಿ.ಎಸ್.ಯಡಿಯೂರಪ್ಪನವರು ವಿಜಯೇಂದ್ರ ಸಹ ಉಪಸ್ಥಿತರಿರುತ್ತಾರೆ ಎಂದರು.


ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಸಚಿವ ಶರಣಪ್ರಕಾಶ್ ಪಾಟೀಲ್‌ರವರು ಸಿಲ್ಲಿ ಎಂದು ಕರೆದು ತಾವೇ ಸಿಲ್ಲಿಯಾಗಿದ್ದಾರೆ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.


ಪಾಕಿಸ್ತಾನ ಜಿಂದಾಬಾದ್ ಘೋಷಣೆಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರು ರಾಜೀನಾಮೆ ಕೊಡಬೇಕಿತ್ತು. ಆದರೆ ಅವರು ಭಂಡರು ಕೊಟ್ಟಿಲ್ಲ, ಕೊನೆಪಕ್ಷ ಬಹಿರಂಗ ಕ್ಷಮೆಯಾಚಿಸಬೇಕು ಎಂದರು.


ನಾನು ಹೆಬ್ಬಾರ್, ಎಸ್.ಟಿ.ಸೋಮಶೇಖರ್ ದುಡ್ಡು ತೆಗೆದುಕೊಂಡಿದ್ದಾರೆ ಎಂದು ಹೇಳಿಲ್ಲ, ಬಿಜೆಪಿ ಬಿಟ್ಟು ವೋಟು ಮಾಡಿದ್ದಕ್ಕೆ ಎಷ್ಟು ಕೊಟ್ಟಿರಬಹುದು ಅಂತ ಹೇಳಿದ್ದೆ. ಕಳ್ಳನ ಮನಸ್ಸು ಉಳ್ಳುಳ್ಳಗೆ ಎಂದಾಗಿದೆ. ಲೋಕಸಭಾ ಅಭ್ಯರ್ಥಿಗಳ ಬಿಜೆಪಿಯ ಎರಡನೇ ಪಟ್ಟಿ ಮುಂದಿನವಾರ ಪ್ರಕಟವಾಗಲಿದೆ ಎಂದರು.

Exit mobile version