Site icon TUNGATARANGA

ಮಲೆನಾಡಿನ ನಟರುತಂತ್ರಜ್ಞರೇ ಸೇರಿ ನಿರ್ಮಿಸಿರುವ ಕೆರೆಬೇಟೆ ಚಿತ್ರ ಮಾ, 15 ರಂದು ರಾಜ್ಯಾದ್ಯಂತ ಬಿಡುಗಡೆ:ಚಿತ್ರದ ನಿರ್ದೇಶಕ ರಾಜ್‌ಗುರು

ಶಿವಮೊಗ್ಗ: ಮಲೆನಾಡಿನ ನಟರು, ತಂತ್ರಜ್ಞರೇ ಸೇರಿ ನಿರ್ಮಿಸಿರುವ ಕೆರೆಬೇಟೆ ಚಿತ್ರ ಮಾರ್ಚ್ ೧೫ ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ದೇಶಕ ರಾಜ್‌ಗುರು ತಿಳಿಸಿದರು.


ನಗರದ ಕುವೆಂಪು ರಂಗಮಂದಿರದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯದ ಸುಮಾರು ೧೨೫ ರಿಂದ ೧೫೦ ಚಿತ್ರ ಮಂದಿರದಲ್ಲಿ ಬಿಡುಗಡೆ ಆಗಲಿದೆ. ತೀರ್ಥಹಳ್ಳಿಯ ಹುಡುಗ ಗೌರಿಶಂಕರ್ ಚಿತ್ರದಲ್ಲಿ ನಾಯಕನಾಗಿ, ಬೆಂಗಳೂರಿನ ಬಿಂದು

ನಾಯಕಿಯಾಗಿ ಅಭಿನಯಿಸಿದ್ದಾರೆ. ಮಲೆನಾಡಿನಲ್ಲೇ ಹೆಚ್ಚು ಚಿತ್ರೀಕರಣ ಮಾಡಲಾಗಿದೆ. ವಿವಿಧ ಚಿತ್ರಗಳಲ್ಲಿ ಕೆಲಸ ಮಾಡಿದ ಅನುವಿs ಈ ಭಾಗದ ಜನರೇ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿ ಮಲೆನಾಡು ಜನರು ಚಿತ್ರಕ್ಕೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು.
ಚಿತ್ರದ ನಾಯಕ ಗೌರಿಶಂಕರ್ ಮಾತನಾಡಿ, ಮಲೆನಾಡು ಬದುಕು ಬೇರೆಯದೇ ಇದೆ. ಸಾಕಷ್ಟು ಜನರು ಇಲ್ಲಿನ ಪ್ರಕೃತಿ ಸೌಂದರ್ಯ ಮಾತ್ರ ಎಂದು ಅಂದುಕೊಂಡಿದ್ದಾರೆ. ಇಲ್ಲಿನ ಬದುಕಿನ ಹೋರಾಟ ಇದೆ. ಅದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು.


ಸಿನೆಮಾ ನೋಡಿದರೆ ನಮ್ಮನ್ನು ನಾವು ನೋಡಿದಂತೆ ಆಗುತ್ತೆ. ಗಟ್ಟಿ ಕಥೆ ಇದೆ. ಕನಸುಗಳು ಅಸ್ತಿತ್ವದ ಹೋರಾಟ ಇದೆ. ಬರೇ ಪ್ರೀತಿ ಇಲ್ಲ. ಕಲ್ಲಿನ ಕೆತ್ತನೆ ಕೆಲಸ ಮಾಡಿದೀವಿ. ಹಾಗಾಗಿ ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.


ಸಂಸದ ಬಿ.ವೈ.ರಾಘವೇಂದ್ರ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಮಾಡಿ ಮಾತನಾಡಿ, ಮಲೆನಾಡಿನ ಸೊರಬ, ಸಿಗಂದೂರು ಭಾಗದಲ್ಲಿ ಚಿತ್ರೀಕರಣ ಆಗಿದೆ. ಟ್ರೇಲರ್ ಬಿಡುಗಡೆ ನೋಡಿದಾಗ ಚಿತ್ರ ಚೆನ್ನಾಗಿರುವುದು ಕಾಣಿಸುತ್ತದೆ. ಚಿತ್ರದಲ್ಲಿ ಮಲೆನಾಡಿನ ಪ್ರಕೃತಿ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಕೆರೆಬೇಟೆ ಚಿತ್ರ ಶತ ದಿನಗಳನ್ನು ಕಾಣಲಿ ಎಂದು ಹಾರೈಸಿದರು.


ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಲೆನಾಡಿನ ಸಂಗತಿಗಳನ್ನು ಬದುಕಿಸಿ ಇಡಬೇಕಾಗಿದೆ. ಇಲ್ಲಿನ ಶಿಕಾರಿ, ಕೆರೆಬೇಟೆ, ಹಸೆಗೋಡೆ ಇತ್ಯಾದಿ ಸಂಪ್ರದಾಯ ಮರೆಯಾಗುತ್ತಾ ಇದೆ. ಇಂತಹ ಸಂದಭಗಳಲ್ಲಿ ಜಾತಿ

ಅಂತಸ್ತು ಮರೆತು ಎಲ್ಲರೂ ಒಟ್ಟಾಗ್ತಾ ಇದ್ರು. ಈಗ ಮರೆತು ಹೋಗುತ್ತಿದೆ. ಇವೆಲ್ಲಾ ಉತ್ಸಾಹದ ವಾತಾವರಣ ನಿರ್ಮಿಸುತ್ತಿದ್ದವು. ಗೌರಿಶಂಕರ್ ನಮ್ಮ ಕೋಣಂದೂರು ಹುಡುಗ. ನಾನೇ ಚಿತ್ರರಂಗಕ್ಕೆ ಲೆಟರ್ ಕೊಟ್ಟು ಕಳಿಸಿz. ಈಗ ನಾಯಕನಾಗಿದ್ದಾರೆ. ಚಿತ್ರ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಸಹ ನಿರ್ದೇಶಕ, ಶೇಖರ್, ಜೈಶಂಕರ್ ಪಾಟೀಲ್, ನಾಯಕಿ ಬಿಂದು ಇನ್ನಿತರರು ಇದ್ದರು.

Exit mobile version