Site icon TUNGATARANGA

ನಗರದಲ್ಲಿ ಸುಂದರೇಶ್ ಸಂಭ್ರಮ/ನಗರದಲ್ಲಿ ಬೈಕ್ ರ‍್ಯಾಲಿ ಮೂಲಕ ಮೆರವಣಿಗೆ ಪಟಾಕಿ ಅಬ್ಬರ ಮುಗಿಲು ಮುಟ್ಟಿತ್ತು/ಅಭಿಮಾನಿಗಳಿಂದ ಹಾರತುರಾಯಿ ನೀಡಿ ಅಭಿನಂದನೆ


ಶಿವಮೊಗ್ಗ, ಮಾ.೦೧:
ಸ್ಬೂಡಾ ಅಧ್ಯಕ್ಷನ್ನಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರನ್ನು ಸರ್ಕಾರ ನೇಮಕ ಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೆ ಇಂದು ಬೃಹತ್ ರ‍್ಯಾಲಿ ನಡೆಸಿದ ನೂತನ ಸೂಡಾ ಅಧ್ಯಕ್ಷರು ಬೃಹತ್ ರ‍್ಯಾಲಿ ನಡೆಸಿ ಸೂಡಾ ಕಚೇರಿಯಲ್ಲಿ ಇಂದು ಅಧಿಕಾರ ಸ್ವೀಕರಿಸಿದರು.

ಜಿಲ್ಲೆಯ ಮೂವರನ್ನ ವಿವಿಧ ನಿಗಮ ಮಂಡಳಿಗೆ ರಾಜ್ಯ ಸರ್ಕಾರ ನಿನ್ನೆ ತಾನೇ ನೇಮಕಗೊಳಿಸಿತ್ತು. ಇಂದು ಸೂಡಾ ಅಧ್ಯಕ್ಷರಾಗಿ ಸುಂದರೇಶ್ ಅಧಿಕಾರ ಸ್ವೀಕರಿಸಿದರು.


ನಗರದ ಎಂಆರ್ ಎಸ್ ವೃತ್ತದಿಂದ ತೆರದ ಜೀಪಿನಲ್ಲಿ ಮೆರವಣಿಗೆ ಹೊರಟ ನೂತನ ಸ್ಬೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ವಿದ್ಯಾನಗರ, ಹೊಳೆ ಬಸ್ ಸ್ಟಾಪ್ ಬಿಹೆಚ್ ರಸ್ತೆ, ಕಾಂಗ್ರೆಸ್ ಕಚೇರಿಗೆ ತಲುಪಿ ರಾಘವೇಂದ್ರ ಸ್ವಾಮಿ ಮಠದ ರಸ್ತೆಯ ಮೂಲಕ ಲಕ್ಷ್ಮಿ ಚಲನಚಿತ್ರ ಮಂದಿರ ಮಾರ್ಗವಾಗಿ ಸ್ಬೂಡಾ ಕಚೇರಿ ತಲುಪಿದರು.


ಈ ವೇಳೆ ಹಾರತುರಾಯಿಗಳನ್ನ, ಮೈಸೂರು ಪೇಟಗಳನ್ನ ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಮುಖಂಡರು ತೊಡಿಸುವ ಮೂಲಕ ಸಾಲು ಸಾಲಾಗಿ ಅಭಿನಂದಿಸಿದರು.


ಈ ಸಂದರ್ಭದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಪಂ ಮಾಜಿ ಅಧ್ಯಕ್ಷ ಬಲ್ಕೀಷ್ ಭಾನು, ಡಾ.ಶ್ರೀನಿವಾಸ್ ಕರಿಯಣ್ಣ, ಉಪಾದ್ಯಕ್ಷರಾದ ಸ್ಮಾರ್ಟ್ ಲೋಕೇಶ್, ಚಂದ್ರಶೇಖರ್ ವಕೀಲ ನರಸಿಂಹ ಮೂರ್ತಿ (ಬಾಬಣ್ಣ), ಶ್ಯಾಮ್ ಸುಂದರ್, ಸೌಗಂದಿನಿ, ವಿಜಯಲಕ್ಷ್ಮೀ ಶಿಜುಪಾಶಾ, ಇಕ್ಕೇರಿ ರಮೇಶ್ ಹಾಗೂ ಇತರರು ಸಾಥ್ ನೀಡಿದರು.


ನಾ ಕಾಂಗ್ರಸ್ ಕಟ್ಟಾಳು- ಪಕ್ಷದ ಹೈಕಮಾಂಡ್ ನೀಡಿದ ಜವಾಬ್ಧಾರಿಗೆ ಗೌರವಿಸಿ ಕೆಲಸ ಮಾಡುವೆ
ಶಿವಮೊಗ್ಗ, ಮಾ.೦೧:ಸ್ಬೂಡಾ ಅಧ್ಯಕ್ಷ ಸ್ಥಾನವನ್ನು, ನನಗೆ ಕಾಂಗ್ರಸ್ ಪಕ್ಷದ ಹೈಕಮಾಂಡ್ ನೀಡಿರುವುದು ಸಂತೋಷ ತಂದಿದೆ ಎಂದು ನೂತನ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ಹೆಚ್. ಎಸ್. ಸುಂದರೇಶ್ ಹೇಳಿದರು.
ಅವರಿಂದು ಅಧಿಕಾರ ಸ್ವೀಕರಿಸಿ ಅಪಾರ ಅಭಿಮಾನಿಗಳ ಹಾಗೂ ಮುಖಂಡರಿಂದ ಗೌರವ ಸ್ವೀಕರಿಸಿ “ತುಂಗಾತರಂಗ ದಿನಪತ್ರಿಕೆ” ಯೊಂದಿಗೆ ಮಾತನಾಡುತ್ತಿದ್ದರು.
ಶಿವಮೊಗ್ಗ-ಭದ್ರಾವತಿ ನಗರದ ಸಾಮಾನ್ಯ ಜನರ ಒಳಿತಿಗಾಗಿ ಅವರಿಗೆ ಗೂಡುಕಟ್ಟಿಕೊಡು ವ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವೆ. ಯಾವುದೇ ಲೋಪಗಳು ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಇನ್ನಷ್ಟು ಮಹತ್ತರ ಹುದ್ದೆಯ ಆಕಾಂಕ್ಷೆ ಇತ್ತಾ? ಎಂದು ಕೇಳಿದ ಪ್ರಶ್ನೆಗೆ ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳು, ಪಕ್ಷಕ್ಕಾಗಿ ಮೀಸಲಾಗಿದ್ದೇನೆ. ಪಕ್ಷದ ಹೈಕಮಾಂಡ್ ನನಗೆ ಇಂತಹದ್ದೊಂದು ಜವಾಬ್ದಾರಿ ನೀಡಿದೆ. ಅದನ್ನ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜನರ ಸೇವೆಗೆ ಅಣಿಯಾಗುವೆ ಎಂದರು.

Exit mobile version