Site icon TUNGATARANGA

ರೈಲಿಗೆ ತಲೆ ಕೊಟ್ಟು ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ

ಚಿಕ್ಕಮಗಳೂರು,ಡಿ.29:
ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೆಡಿಎಸ್ ಪಕ್ಷದಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಅವರು ಚಿಕ್ಕಮಗಳೂರು ಜಿಲ್ಲೆ ಕಡೂರು ಬಳಿಯ ಗುಣಸಾಗರದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ಸಂಜೆ ಮನೆಯಿಂದ ಡ್ರೈವರ್ ಹಾಗೂ ಗನ್ಮ್ಯಾನ್ ಜೊತೆ ಗುಣಸಾಗರಕ್ಕೆ ಬಂದಿದ್ದರು. ಆಗ ಅಲ್ಲಿ ಕಾರು ನಿಲ್ಲಿಸಲು ಹೇಳಿ ನಾನು ಒಬ್ಬರ ಜೊತೆ ಮಾತಾಡಿ ಬರುತ್ತೇನೆ. ನೀವು ಹೋಗಿ ಎಂದು ಕಳಿಸಿದ್ದಾರೆ. ರೈಲಿನ ವೇಳಾಪಟ್ಟಿ ಪಡೆದು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ರಾತ್ರಿ ಎಂಟರ ಹೊತ್ತಿಗೆ ರೈಲಿಗೆ ತಲೆಕೊಟ್ಟಿದ್ದಾರೆ.
ಮದ್ಯರಾತ್ರಿ ಒಂದೂಮುವತ್ತರ ಹೊತ್ತಿಗೆ ಈ ಘಟನೆ ಪತ್ತೆಯಾಗಿದೆ.
ದೇವೇಗೌಡರ ಕುಟುಂಬಕ್ಕೆ ಧರ್ಮೇಗೌಡರು ಆಪ್ತರಾಗಿದ್ದರು. . ಪರಿಷತ್ ಸದಸ್ಯ ಬೋಜೇಗೌಡರ ಸಹೋದರರು. ಇತ್ಕತೀಚೆ ಕಲಾಪದ ವೇಳೆಯಲ್ಲಿ ನಡೆದ ಗಲಾಟೆ ಆತ್ಮಹತ್ಯೆಗೆ ಕಾರಣವೇ..? ಹುಡುಕಾಟ ಪೊಲೀಸರದು. ಡೆತ್ ನೋಟಿನ ವಿಚಾರವೂ ಚರ್ಚಿತವಾಗುತ್ತಿದೆ.

ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ಅವರ ಮೃತ ದೇಹವನ್ನು ತರಲಾಗಿದೆ. ಮರಣೋತ್ತರ ಪರೀಕ್ಷೆ ಇಲ್ಲಿ ನಡೆಯಲಿದೆ.

Exit mobile version