Site icon TUNGATARANGA

ಬೈ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಬೈಹುಲ್ಲು ಸಂಪೂರ್ಣ ಭಸ್ಮ

ಶಿವಮೊಗ್ಗ ,ಡಿ.28:

ಲಾರಿಯಲ್ಲಿ ಬೈ ಹುಲ್ಲು ಸಾಗಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಉಂಟಾದ ಬೆಂಕಿಯಿಂದ ಲಾರಿಯಲ್ಲಿದ್ದ ಬೈ ಹುಲಿಗಳು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಆನಂದಪುರದ ಗುಂಡಿಬೈಲ್ ಬಳಿ ಸೋಮವಾರ ಸಂಭವಿಸಿದೆ.

ಆನಂದಪುರ ಗುಂಡಿಬೈಲ್ ಗದ್ದೆಯ ರಾಜು ಮತ್ತು ಮಂಜು ಎಂಬುವರು ಭತ್ತದ ಹುಲ್ಲನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಡ್ಯಾರಿನ ಕಪಿಲ ಗೋಶಾಲೆಗೆ ಸಾಗಿಸಲು ಲಾರಿಯಲ್ಲಿ ತುಂಬಿ ಗದ್ದೆಯಿಂದ ಸ್ವಲ್ಪ ದೂರ ಕ್ರಮಿಸುತ್ತಿರುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಆವರಿಸಿಕೊಂಡಿದೆ. ತಕ್ಷಣವೇ ಭಾರೀ ಪ್ರಮಾಣದ ಬೆಂಕಿ ಕಂಡಿದ್ದು ಚಾಲಕ ಸ್ಥಳದಲ್ಲೇ ಗಾಡಿ ನಿಲ್ಲಿಸಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ ಬೆಂಕಿ ನಂದಲಿಲ್ಲ ಪಕ್ಕದಲ್ಲಿ ಮನೆಗಳಿರುವುದರಿಂದ ಹೆಚ್ಚಿನ ಅನಾಹುತವಾಗುವುದನ್ನು ಅರಿತ ಚಾಲಕ ಮಂಜುನಾಥ್ ಇವರ ಸಮಯಪ್ರಜ್ಞೆಯಿಂದ ಲಾರಿಯನ್ನು ಊರಿನ ಹೊರಭಾಗಕ್ಕೆ ತಂದು ತೀರ್ಥಹಳ್ಳಿ ರಸ್ತೆಯ ಆರ್ ಆರ್ ರೈಸ್ ಮಿಲ್ ಆವರಣದಲ್ಲಿ ಬೆಂಕಿ ನಂದಿಸಲು ಮುಂದಾದರು.

ಈ ವೇಳೆ ಸ್ಥಳೀಯ ನೂರಾರು ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಮುಂದಾದರು. ಈ ಲಾರಿಯಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಹುಲ್ಲಿನ ಪಿಂಡಿಗಳು ಇರುವುದಾಗಿ ತಿಳಿದುಬಂದಿದೆ.

ಬೆಂಕಿಯ ತೀವ್ರತೆಗೆ ಬೈ ಹುಲ್ಲು ಸಂಪೂರ್ಣ ಭಸ್ಮವಾಗಿದ್ದು ಬೆಂಕಿ ನಂದಿಸಲು ಸಾಗರದ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು, ಲಾರಿಯಲ್ಲಿದ್ದ ಬಾಯಿ ಹುಲ್ಲನ್ನು ಜೆಸಿಬಿ ಮೂಲಕ ಹೊರತೆಗೆಯಲಾಗಿದ್ದು, ಘಟನೆಯಲ್ಲಿ ಲಾರಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ. ಇದರಿಂದ ಸುಮಾರು 30 – 35 ಸಾವಿರ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

Exit mobile version