Site icon TUNGATARANGA

ಜೆಡಿಎಸ್ ನೊಂದಿತರ ಧ್ವನಿಯಾಗಿ ಕೆಲಸ ಮಾಡುತ್ತಿದೆ /ಸಾಮಾನ್ಯ ಜನರ ನೋವುಗಳಿಗೆ ಧ್ವನಿಯಾಗುವ ಪ್ರತಿಜ್ಞೆಯೊಂದಿಗೆ ನಗರ ಜೆಡಿಎಸ್ ಹೊರಟಿದೆ: ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್

ಶಿವಮೊಗ್ಗ,ಫೆ.೨೮: ಜೆಡಿಎಸ್ ನೊಂದಿತರ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಹೇಳಿದರು.


ಅವರು ನಗರದ ನಾಗರಿಕರ ಕುಂದುಕೊರತೆ ನಿವಾರಣೆ ಹಾಗೂ ಪಕ್ಷದ ಸಂಘಟನೆ ಉದ್ದೇಶದಿಂದ ನಗರ ಜೆಡಿಎಸ್ ಸಮಿತಿ ವತಿಯಿಂದ ನಿನ್ನೆ ಸಂಜೆ ಮಿಳ್ಳಘಟ್ಟ ಪ್ರದೇಶದ ಆದಿ ದ್ರಾವಿಡ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡರಷ್ಟೇ ಸಾಲದು. ಸಾರ್ವಜನಿಕರ ಸಮಸ್ಯೆಗಳಿಗೂ ಸ್ಪಂಧಿಸಬೇಕು ಮತ್ತು ಪರಿಹಾರ ಕಲ್ಪಿಸಿಕೊಡಬೇಕು ಕಾರ್ಯಕರ್ತರು ಈ ನಿಟ್ಟಿನಿಂದ ಕೆಲಸ ಮಾಡಬೇಕು ಎಂದರು.


ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ. ಕಡಿದಾಳು ಗೋಪಾಲ್ ಮಾತನಾಡಿ, ದೀಪಕ್ ಸಿಂಗ್ ರವರ ನೇತೃತ್ವದಲ್ಲಿ ನಗರ ಜೆಡಿಎಸ್ ಬಹಳ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದೆ. ಜನರ ಕಷ್ಟ ಸುಖಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ನಿಮ್ಮಗಳ ಯಾವುದೇ ಸಮಸ್ಯೆಗಳಿದ್ದರು ಅದನ್ನು ಈ ಭಾಗದ ಜೆಡಿಎಸ್ ಮುಖಂಡರ ಅಥವಾ ನಗರ ಜೆಡಿಎಸ್ ಅಧ್ಯಕ್ಷರ ಗಮನಕ್ಕೆ ತಂದಲ್ಲಿ ಅದನ್ನು ಪರಿಹರಿಸಲಾಗುವುದು ಅಂದರು.


ಅಧ್ಯಕ್ಷತೆ ವಹಿಸಿದ್ದ ದೀಪಕ್‌ಸಿಂಗ್ ಮಾತನಾಡಿ, ನಗರ ಜೆಡಿಎಸ್ ಶಿವಮೊಗ್ಗದಲ್ಲಿ ಶೋಷಿತರ ಧಮನಿತರ ಧ್ವನಿಯಾಗಿ ಕೆಲಸ ಮಾಡುವ ಸಂಕಲ್ಪ ತೊಟ್ಟಿದೆ, ನಾಗರಿಕರ ಸಮಸ್ಯೆ ಎಷ್ಟೇ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ನಗರ ಜೆಡಿಎಸ್ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದರು.


ಸಾಮಾನ್ಯ ಜನರ ನೋವುಗಳಿಗೆ ಧ್ವನಿಯಾಗುವ ಪ್ರತಿಜ್ಞೆಯೊಂದಿಗೆ ನಗರ ಜೆಡಿಎಸ್ ಹೊರಟಿದೆ. ಜನರ ಅಶೋತ್ತರಗಳಿಗೆ ಸ್ಪಂದಿಸುತ್ತಲೇ ಬಂದಿರುವಂತಹ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ ರವರ ನಾಯಕತ್ವ ನಮಗೆ ನೆರಳಾಗಿದೆ. ಬಡಾವಣೆಯ ಯಾವುದೇ ಸಮಸ್ಯೆ ಇದ್ದರು ನಮ್ಮಗಳ ಗಮನಕ್ಕೆ ತಂದಲ್ಲಿ ಅದರ ಪರಿಹಾರಕ್ಕೆ ಸೂಕ್ತ ಗಮನ ಹರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕ್ತಾರ ಗಂಧದಮನೆ ನರಸಿಂಹ, ಜಿಲ್ಲಾ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದಪ್ಪ, ನಗರ ಜೆಡಿಎಸ್ ಉಪಾಧ್ಯಕ್ಷ ಸುನೀಲ್ ಗೌಡ, ನಾಸಿರ್, ಶಾರದಮ್ಮ, ದಯಾನಂದ್ ಸಾಲಾಗಿ, ಪ್ರಧಾನಕಾರ್ಯದರ್ಶಿ ವಿನಯ್, ಗೋವಿಂದ್, ಲೋಹಿತ್, ಮಂಜುನಾಥ್, ಅರುಣ್ ರಾವ್, ಗೋಪಿ ಮೊದಲಿಯರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Exit mobile version